Топ-100
Back

ⓘ ಕನ್ನಡ ಸಾಹಿತ್ಯ. ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ..                                               

ಶೈನಾ (ಕೈಬರಹದ ಕನ್ನಡ ಮಾಸಪತ್ರಿಕೆ)

ಒಂದು ವಿಶಿಷ್ಠ ಕನ್ನಡ ಮಾಸಪತ್ರಿಕೆ. ಇದು ಕೈ ಬರಹದ ಪತ್ರಿಕೆ. ಸತತವಾಗಿ ಹತ್ತು ವರ್ಷಗಳಿಂದ ಒಂದು ತಿಂಗಳೂ ನಿಲ್ಲದೆ ಓದುಗರ ಕೈಸೇರುತ್ತಿರುವುದು ಇದರ ವಿಶೇಷತೆ. ಕನ್ನಡ ಭಾಷೆಯ ಮುದ್ದಾದ ಸುಂದರ ಅಕ್ಷರಗಳಿಂದ, ಸಾಂಧರ್ಭಿಕವಾದ ವ್ಯಕ್ತಿ ಹಾಗೂ ವಿಷಯಾಧಾರಿತ ವಿಷೇಶಾಂಕಗಳನ್ನು, ಮುಖಪುಟದ ಚಿತ್ರಗಳ ಸಮೇತ, ದೇಶದ ಪ್ರಚಲಿತ ವಿಷಯಗಳ ಇಣುಕು ನೋಟದೊಂದಿಗೆ, ವ್ಯಂಗ್ಯಚಿತ್ರ, ಪುಟ್ಟ ಹಿತನುಡಿ, ಚಿಂತನಗಳು ಹಾಗೂ ಕೆಳಗೆ ನಮೂದಿಸಿರುವ ಅಂಕಣಗಳನ್ನು ಹೊಂದಿದೆ. ದಾರ್ಶನಿಕತೆಯ ಕಿರುದರ್ಶನ ಬಯಲ ಆಲಯ ಕಾವ್ಯದ ಕೊರಳು ಕಣ್ಣಭಾಷೆಯ ಹೊಳಪು ಕ್ರಿಯಾಹಾದಿ ಹೀಗೆ ವಿವಿಧ ಆಪ್ತಕೋಶಗಳನ್ನು ತನ್ನ ೮ ಅಥವಾ ೧೦ ಪುಟಗಳ ತೆಕ್ಕೆಯಲ್ಲಿ ಹೊಂದಿರುವ ಈ ಕೈಬರಹದ ಕನ್ನಡ ಮಾಸಿಕ ತುಮಕೂರಿನ ಲೇಖಕಿ, ಬಿ.ಸಿ.ಶೈಲಾ ನಾಗರಾಜ್ ಮತ್ತು ಅವರ ಪುತ್ರಿ, ರಂಗಮ್ಮ ಹೊದೇಕಲ್ ಅವರ ಕನ್ ...

                                               

ಬದಲಾಗುತ್ತಿರುವ ಕನ್ನಡ ಭಾಷೆಯ ಸ್ವರೂಪ

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿ ಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ ...

                                               

ಸ. ಸ. ಮಾಳವಾಡ

ಪ್ರೊ. ಸ. ಸ. ಮಾಳವಾಡ ಅವರು ಕನ್ನಡ ನಾಡಿನ ಶೈಕ್ಷಣಿಕ ಮತ್ತು ಸಾಹಿತ್ಯಕ ಪ್ರಪಂಚದಲ್ಲಿ ಪ್ರಸಿದ್ಧ ಹೆಸರಾಗಿದ್ದಾರೆ. ಪ್ರೊ.ಮಾಳವಾಡ ಅವರ ಪತ್ನಿ ಶಾಂತಾದೇವಿ ಮಾಳವಾಡ ಅವರು ಸಹಾ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದು ಈ ದಂಪತಿಗಳು ತಮ್ಮ ಮಹತ್ವದ ಕೊಡುಗೆಗಳಿಗಾಗಿ ಕನ್ನಡ ನಾಡಿನ ಪ್ರಾತಃಸ್ಮರಣೀಯರೆನಿಸಿದ್ದಾರೆ.

                                               

ಸಿದ್ಧಯ್ಯ ಪುರಾಣಿಕ

ಸಿದ್ಧಯ್ಯ ಪುರಾಣಿಕ ಕನ್ನಡ ನಾಡು ಕಂಡ ಶ್ರೇಷ್ಠ ಅಧಿಕಾರಿಗಳು ಮತ್ತು ಸಾಹಿತಿಗಳಲ್ಲಿ ಒಬ್ಬರೆನಿಸಿದ್ದಾರೆ. ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವವರು ‘ವಚನೋದ್ಯಾನದ ಅನುಭಾವಿ’ ಬಿರುದಾಂಕಿತ, ‘ಕಾವ್ಯಾನಂದ’ ಕಾವ್ಯನಾಮಾಂಕಿತ, ‘ಐಎಎಸ್’ ಸ್ಥಾನಾಲಂಕೃತ, ಸಹೃದಯತೆಯ ಶ್ರೇಷ್ಠ ಔನ್ನತ್ಯರಾದ ಕನ್ನಡ ನಾಡಿನ ಅಗ್ರಗಣ್ಯ ಶ್ರೇಯಾಂಕಿತ ಮಹನೀಯ ಡಾ. ಸಿದ್ಧಯ ಪುರಾಣಿಕರು.

                                               

ಸದ್ಬೋಧ ಚಂದ್ರಿಕೆ, ಕನ್ನಡ ಮಾಸಪತ್ರಿಕೆ

ಸದ್ಬೋಧ ಚಂದ್ರಿಕೆ, ಶತಮಾನೋತ್ಸವ," ವನ್ನು ಆಚರಿಸುತ್ತಿರುವ ಕನ್ನಡ, ಧಾರ್ಮಿಕ, ಸಾಹಿತ್ಯಿಕ ಮಾಸಿಕಪತ್ರಿಕೆ. ಇದರ ಸ್ಥಾಪಕರು, ಸುವಿಖ್ಯಾತ ಕಾದಂಬರಿಕಾರ, ಹೊಸಗನ್ನಡದ ಗದ್ಯ ಪ್ರವರ್ತ, ಕರೆಂದು ಖ್ಯಾತಿಗಳಿಸಿದ, ಗಳಗನಾಥರು. ೧೯೦೭ ರಲ್ಲಿ, ಶ್ರೀ ಶೇಷಾಚಲ ಸದ್ಗುರು, ಗಳಿಂದ ಸ್ಥಾಪಿತವಾದ, ಮಾಸಪತ್ರಿಕೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸುವರ್ಣ ಕರ್ನಾಟಕ, ವರ್ಷದಲ್ಲಿ ಪಡೆದುಕೊಂಡಿದೆ. ಅಗಡಿಯ ಆನಂದವನ, ದಿಂದ ಪ್ರಕಾಶಿತ, ಚಿದಂಬರ ಚಕ್ರವರ್ತಿಗಳು ಸಂಪಾದಕರು ಹಾಗೂ ಸಂರಕ್ಷಕರು. ಆಗಿನ ಕಾಲದ ಕಲ್ಲಚ್ಚಿನಲ್ಲಿ ಮುದ್ರಿತವಾದ ಸುಮಾರು ೪೦ ಪುಟಗಳ ಪತ್ರಿಕೆಯ ಬೆಲೆ, ೪ ಆಣೆಗಳಾದರೆ, ಇಂದಿಗೂ ಅಷ್ಟೇ ಪುಟಗಳಲ್ಲಿ ಆಧುನಿಕ ಆಫ್ ಸೆಟ್ ಹೊಸವಿನ್ಯಾಸದಲ್ಲಿ ಪ್ರಕಟಿತಗೊಳ್ಳುತ್ತಿರುವ ಈ ಮಾಸಪತ್ರಿಕೆಯ ಬೆಲೆ, ೧೦ ರೂಪಾಯಿಗಳು. ಹಿಂದಿನಂತೆ ಇಂದಿಗೂ ...

                                               

ಜಯಕರ್ನಾಟಕ

ಜಯಕರ್ನಾಟಕ ಆಲೂರು ವೆಂಕಟರಾಯರು ೧೯೨೩ರಲ್ಲಿ ಧಾರವಾಡದಲ್ಲಿ ಪ್ರಾರಂಭಿಸಿದ ಮಾಸಪತ್ರಿಕೆ. ನಂತರ ವಾರಪತ್ರಿಕೆಯಾಗಿಯೂ ಮುಂದುವರೆಯಿತು. ಸುಮಾರು ನಲವತ್ತು ವರ್ಷಗಳ ಕಾಲ ಈ ಪತ್ರಿಕೆ ನಡೆಯಿತು.

                                               

ಮಾಧ್ಯಮ

ಮಾಧ್ಯಮ ಅಥವಾ ಸಮೂಹ ಮಾಧ್ಯಮ ಎಂದು ಸಾಮಾನ್ಯವಾಗಿ ಪತ್ರಿಕೆ, ಬಾನುಲಿ ಮತ್ತು ದೂರದರ್ಶನಗಳನ್ನು ಸೇರಿಸಿ ಹೇಳುತ್ತಾರೆ. ಸಂಗೀತ, ನೃತ್ಯ, ನಾಟಕ, ಅಂತರಜಾಲ ಕ್ಷೇತ್ರ, ಭಿತ್ತಿ ಚಿತ್ರ-ಪತ್ರ, ಜಾಹೀರಾತು, ಡಂಗುರ, ಸಿನಿಮಾ – ಇವುಗಳನ್ನೂ ಕೂಡ ಮಾಧ್ಯಮವನ್ನಾಗಿ ಪರಿಗಣಿಸಬಹುದು. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಂತೆ, ಪ್ರಜಾಪ್ರಭುತ್ವದ ಒಂದು ಪ್ರಮುಖ ಅಂಗವಾಗಿ ಮಾಧ್ಯಮವು ಕಾರ್ಯನಿರ್ವಹಿಸುತ್ತದೆ. ಅಂತೆಯೇ ಮಾಧ್ಯಮವನ್ನು" ನಾಲ್ಕನೇ ಅಂಗ” ಎಂದೂ ಕರೆಯುತ್ತಾರೆ.

                                               

ಬಂಟರು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ಜಾತಿಯ ಜನರು ತಮ್ಮದೇ ಆದ ವಿಶಿಷ್ಟ ಜೀವನ ಶೈಲಿಯಲ್ಲಿ ಬದುಕುತ್ತಿದ್ದಾರೆ. ಅವರು ತಮ್ಮ ಸಂಪ್ರದಾಯ ಹಾಗೂ ಈ ಜಿಲ್ಲೆಯ ಸಂಸ್ಕೃತಿಗನುಸಾರವಾಗಿ ನಡೆದುಕೊಳ್ಳುತ್ತಾರೆ. ನಮ್ಮ ಜಿಲ್ಲೆಯಲ್ಲಿ ಬ್ರಾಹ್ಮಣ, ಗೌಡ, ಪೂಜಾರಿ, ಕುಲಾಲ್, ಅಜಲಾಯ ಎಂಬ ಅನೇಕ ಜಾತಿಗಳಿದ್ದು ಇವರಲ್ಲಿ ಬಂಟ ಜಾತಿಯೂ ಒಂದು. ಬಂಟರು ತಮ್ಮ ಜಾತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರುವುದರ ಜೊತೆಗೆ ಸಮಾಜದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನವನ್ನು ಗಳಿಸಿಕೊಂಡಿದ್ದಾರೆ. ಬಂಟರು ಇತರ ಜಾತಿಗಳೊಂದಿಗೆ ಅನ್ಯೋನ್ಯತೆಯನ್ನು ಪಡೆದಿದ್ದು ಸ್ಥಳೀಯ ಭೂಗಣೆ ಗುತ್ತು, ಬೀಡುಗಳ ಮಟ್ಟದ ಅಧಿಕಾರಿಗಳಾಗಿ ಪ್ರಸಿದ್ಧಿ ಪಡೆದಿದ್ದಾರೆ. ಇಂದಿಗೂ ಮಂಗಳೂರು ಉಡುಪಿ, ಕುಂದಾಪುರ ಪ್ರದೇಶಗಳ ಕೆಲವು ಭಾಗಗಳಲ್ಲಿ ಬಂಟರು ಬೀಡು ಗುತ್ತುಗಳ ಮನೆಗಳಿವೆ.

                                               

ಸಾಸಲು ಶಿವರುದ್ರಯ್ಯ ಮರುಲಯ್ಯ

ಸಾ.ಶಿ.ಮರುಳಯ್ಯ ಅವರು ವೃತ್ತಿಯಲ್ಲಿ ಶಿಕ್ಷಕರು. ಅವರು ಕವನಗಳು, ಸಣ್ಣ ಕಥೆಗಳು ನಾಟಕಗಳೊಂದಿಗೆ ಸುಮಾರು ಎಪ್ಪತ್ತೈದು ಕೃತಿಗಳನ್ನೂ ಬರೆದಿದ್ದಾರೆ. ತಮ್ಮ ಬರಹಗಳಲ್ಲಿ ಅವರು ಪ್ರಕೃತಿಯ ಪ್ರೀತಿ, ಸಮಾಜದ ಭಕ್ತಿ ಮತ್ತು ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಇವರನ್ನು "ಕೃತಿ ವಿಭೂತಿ ಪುರುಷ" ರೆಂದು ಅನೇಕರು ಕರೆಯತ್ತಾರೆ.

                                               

ಭಾವಗೀತೆ

ಭಾವಗೀತೆ ಯು ವೈಯಕ್ತಿಕ ಭಾವನೆಗಳನ್ನು ಅಭಿವ್ಯಕ್ತಿಸುವ ಕಿರುಕವನ. ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಭಾರತದಾದ್ಯಂತ ಬೀಸಿದ ಪುನರುಜ್ಜೀವನದ ಗಾಳಿಯಲ್ಲಿ ಕನ್ನಡವೂ ತನ್ನ ಹೊಸತನ ಕಂಡುಕೊಂಡು ಸೃಷ್ಟಿಸತೊಡಗಿದ ನವೋದಯ ಕಾವ್ಯ ಪ್ರಕಾರವನ್ನು ನಿರ್ದೇಶಿಸಲು ಹುಟ್ಟಿಕೊಂಡ ಪದ ಭಾವಗೀತೆ. ಇದು ಇಂಗ್ಲಿಷಿನ ಲಿರಿಕ್ ಎಂಬುದಕ್ಕೆ ಸಂವಾದಿಪದ. ನವೋದಯ ಕಾವ್ಯ ಪಾಶ್ಚಾತ್ಯ ರೊಮ್ಯಾಂಟಿಕ್ ಕವಿಗಳ ಲಿರಿಕ್ ಕಾವ್ಯದ ಪ್ರೇರಣೆ ಪ್ರಚೋದನೆಗಳ ಪರಿಣಾಮವಾದುದರಿಂದ ವಸ್ತು, ರೀತಿ ಹಾಗೂ ದೃಷ್ಟಿಯಲ್ಲಿ ಹಿಂದಿನ ಕನ್ನಡ ಕಾವ್ಯ ಪ್ರಕಾರಗಳಿಂದ ಬೇರೆಯೆಂದೇ ತೋರುವ ಈ ನವೋದಯ ಕಾವ್ಯಪ್ರಕಾರವನ್ನು ಹೆಸರಿಸಲು ಲಿರಿಕ್ ಎಂಬ ಪದದ ಅನುವಾದದಂತಿದೆ ಭಾವಗೀತೆ. ಪಾಶ್ಚಾತ್ಯ ವಿಮರ್ಶಕರು ಕಾವ್ಯ ಪ್ರಕಾರವನ್ನು ಮೂರು ತೆರನಾಗಿ ವಿಂಗಡಿಸಿದ್ದಾರೆ: 1. ಕವಿ ತನ್ನಿಂದ ಹೊರಗೆ ನಿ ...

ಕನ್ನಡ ಸಾಹಿತ್ಯ
                                     

ⓘ ಕನ್ನಡ ಸಾಹಿತ್ಯ

ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು. ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯಕ ಸಂಪ್ರದಾಯ, ಸಂಸ್ಕೃತ ಸಾಹಿತ್ಯ.

                                     

1. ಇತಿವೃತ್ತ

 • ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖ ಈ ಪುಸ್ತಕದಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬-೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ. ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸ ಬಹುದು: ಹಳೆಗನ್ನಡ, ನಡುಗನ್ನಡ ಹಾಗೂ ಆಧುನಿಕ ಕನ್ನಡ.
 • ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ತಾಳಗುಂದದ ಸಿಂಹಕಟಾಂಜನ ಶಾಸನ ದಲ್ಲಿ ಸು. ಕ್ರಿ.ಶ೩೭೦ ರಿಂದ೪೫೦. ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ. ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ. ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು.
                                     

2. ಹಳೆಗನ್ನಡ

 • ಇದು ಇಡೀ ಮಹಾಭಾರತದ ಒಂದು ಸಿಂಹಾವಲೋಕನ ದೃಷ್ಟಿ. ಮಹಾಭಾರತ ಯುದ್ಧದ ಕೊನೆಯ ದಿನದಲ್ಲಿ ಸ್ಥಿತವಾಗಿದ್ದರೂ ಸಿಂಹಾವಲೋಕನ ಕ್ರಮದಲ್ಲಿ ಇಡಿಯ ಮಹಾಭಾರತವನ್ನು ಪರಿಶೀಲಿಸುತ್ತದೆ. ಛಂದಸ್ಸಿನ ದೃಷ್ಟಿಯಿಂದ ಈ ಕಾಲದ ಕಾವ್ಯ ಚಂಪೂ ಶೈಲಿಯಲ್ಲಿದೆ ಒಂದು ರೀತಿಯ ಗದ್ಯ ಮಿಶ್ರಿತ ಪದ್ಯ
 • ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೇ ಶತಮಾನದಿಂದ ಸುಮಾರು ಹನ್ನೆರಡನೇ ಶತಮಾನದ ವರೆಗಿನ ಕಾಲಘಟ್ಟವನ್ನು ಹಳೆಗನ್ನಡ ಎಂದು ಗುರುತಿಸಬಹುದು. ಈ ಕಾಲದ ಸಾಹಿತ್ಯ ಮುಖ್ಯವಾಗಿ ಜೈನ ಧರ್ಮವನ್ನು ಅವಲಂಬಿಸಿದೆ. ಕನ್ನಡ ಚರಿತ್ರೆಯ ಈ ಘಟ್ಟಕ್ಕೆ ಆದಿ-ಕಾವ್ಯ ಎಂದೂ ಸಹ ಕರೆಯಬಹುದು. ಈ ಕಾಲದ ಅತಿ ಪ್ರಸಿದ್ಧ ಕವಿಯೆಂದರೆ ಪಂಪ ಕ್ರಿ.ಶ. ೯೦೨-೯೭೫.
 • ಪಂಪನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತ ಇಂದಿಗೂ ಮೇರು ಕೃತಿಯೆಂದು ಪರಿಗಣಿತವಾಗಿದೆ. ಪಂಪ ಭಾರತ ಮತ್ತು ತನ್ನ ಇನ್ನೊಂದು ಮುಖ್ಯಕೃತಿಯಾದ ಆದಿಪುರಾಣ ದ ಮೂಲಕ ಪಂಪ ಕನ್ನಡ ಕಾವ್ಯಪರಂಪರೆಯ ದಿಗ್ಗಜರಲ್ಲಿ ಒಬ್ಬನಾಗಿದ್ದಾನೆ. ಪಂಪ ಭಾರತ ಸಂಸ್ಕೃತ ಮಹಾಭಾರತದ ಕನ್ನಡ ರೂಪಾಂತರ. ತನ್ನ ಮಾನವತಾವಾದ ಹಾಗೂ ಗಂಭೀರ ಲೇಖನಶೈಲಿಯ ಮೂಲಕ ಕನ್ನಡದ ಅತ್ಯಂತ ಪ್ರಭಾವಶಾಲಿ ಲೇಖಕರಲ್ಲಿ ಒಬ್ಬನಾಗಿದ್ದಾನೆ. ಮಾನವ ಕುಲ ತಾನೊಂದೇ ವಲಂ ಎಂದು ವಿಶ್ವಮಾನವ ತತ್ವವನ್ನು ಸಾರಿದ ಜಗದ ಕವಿ ಪಂಪ.
 • ಇದೇ ಕಾಲದ ಇನ್ನೊಬ್ಬ ಪ್ರಮುಖ ಲೇಖಕನೆಂದರೆ ಶಾಂತಿನಾಥ ಪುರಾಣ ವನ್ನು ರಚಿಸಿದ ಪೊನ್ನ ೯೩೯-೯೬೬. ಈ ಕಾಲದ ಮತ್ತೊಬ್ಬ ಹೆಸರಾಂತ ಕವಿ ರನ್ನ ೯೪೯-?. ರನ್ನನ ಪ್ರಮುಖ ಕೃತಿಗಳು ಜೈನ ಧರ್ಮೀಯವಾದ ಅಜಿತ ತೀರ್ಥಂಕರ ಪುರಾಣ ಮತ್ತು ಗದಾಯುದ್ಧಂ ಅಥವಾ ಸಾಹಸಭೀಮ ವಿಜಯ.
                                     

3. ನಡುಗನ್ನಡ

 • ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು. ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ. ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ. ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ. ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.
 • ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ. ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು. ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.
 • ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣ ಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು. ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದಮಣಿದರ್ಪಣ.
                                     

3.1. ನಡುಗನ್ನಡ ವಚನ ಸಾಹಿತ್ಯ

 • ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು. ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ. ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.
 • ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ. ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ ೧೧೩೪-೧೧೯೬, ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ ೧೨ನೇ ಶತಮಾನ. ಇವರಲ್ಲದೆ ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ ಇನ್ನೂ ಮೊದಲಾದ ವಚನಕಾರರು ವಚನ ಸಾಹಿತ್ಯಕ್ಕೆ ಉತ್ತಮ ಕಾಣಿಕೆ ನೀಡಿದ್ದಾರೆ.
 • ವಚನ ಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ಲಿಂಗಾಯತ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ. ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ. ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ.
                                     

3.2. ನಡುಗನ್ನಡ ಕುಮಾರವ್ಯಾಸ

 • ಕುಮಾರವ್ಯಾಸ ಪ್ರಾಯಶಃ ಕನ್ನಡದ ಅತ್ಯಂತ ಪ್ರಸಿದ್ಧ ಹಾಗೂ ಅತ್ಯಂತ ಪ್ರಭಾವಶಾಲಿ ಕವಿ ಎಂದರೂ ಸರಿ. ಅವನ ಜೀವನಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಅತ್ಯದ್ಭುತ ಶೈಲಿಯಲ್ಲಿ ಭಾಮಿನಿ ಷಟ್ಪ್ದಿದಿಯಲ್ಲಿ ರಚಿಸಿದ್ದಾನೆ. ಅದು ಕೇವಲ ರೂಪಾಂತರವಲ್ಲ ; ಅನೇಕ ಕವಿ ಸಮಯ ದಿಂದ ಕೂಡಿದ್ದು, ಸ್ವಂತ ಕೃತಿಯೆಂಬಂತೆ ರಚಿಸಿದ್ದಾನೆ.
 • ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದ ಕೃತಿಯಿದ್ದೀತು. ಇದರ ಪ್ರಸಿದ್ಧಿಗೆ ಪ್ರಮುಖ ಕಾರಣ ಇದು ಎಲ್ಲ ಕಾಲಗಳಲ್ಲಿಯೂ ಎಲ್ಲ ಬುದ್ಧಿಮತ್ತೆಯ ಜನರಿಗೂ ಸಹ ಅವರವರ ಶಕ್ತಿಗನುಸಾರವಾಗಿ ನಿಲುಕಿದೆ. ಇಡೀ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ. ಕುಮಾರವ್ಯಾಸ ಹುಡುಕಿ ನೋಡುವ ಮಾನವ ಭಾವಗಳ ವ್ಯಾಪ್ತಿ, ಆತನ ಕಾವ್ಯದ ವೈವಿಧ್ಯತೆ ಮತ್ತು ಶಬ್ದಭಂಡಾರ ಓದುಗರನ್ನು ಬೆರಗುಗೊಳಿಸುತ್ತವೆ.
 • ಕುಮಾರವ್ಯಾಸ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ರೂಪಕಾಲಂಕಾರ ಚಮತ್ಕಾರಕ್ಕೆ ಪ್ರಸಿದ್ಧನಾಗಿದ್ದಾನೆ. ಇದರಿಂದಾಗಿಯೇ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರನಾಗಿದ್ದಾನೆ. ಕುಮಾರವ್ಯಾಸನು ಗದುಗಿನ ವೀರನಾರಾಯಣನ ಭಕ್ತ, ಅವನನ್ನು ಗದುಗಿನ ನಾರಣಪ್ಪ ಎಂದು ಕರೆಯುತ್ತಾರೆ. ಈತನ ಮೊದಲಿನ ಹೆಸರು ನಾರಯಣಪ್ಪ. ಕುವೆಂಪುರವರು ಕುಮಾರವ್ಯಾಸನನ್ನು ಕುರಿತು,

ಪಂಪ ಕಲಿತವರ ಪಾಲಿನ ಕಲ್ಪವೃಕ್ಷ ವಾದರೆ, ಕುಮಾರವ್ಯಾಸ ಕಲಿಯದವರ ಪಾಲಿನ ಕಾಮಧೇನು.                                     

3.3. ನಡುಗನ್ನಡ ದಾಸ ಸಾಹಿತ್ಯ

 • ದಾಸ ಸಾಹಿತ್ಯ ಭಕ್ತಿ ಸಾಹಿತ್ಯ ೧೫ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪಂಥದ ಹರಿದಾಸರಿಂದ ವಿರಚಿತವಾದದ್ದು. ಈ ಪದ್ಯಗಳಿಗೆ ಸಾಮಾನ್ಯವಾಗಿ ಪದ ಗಳೆಂದು ಹೆಸರು. ಇವು ಭಗವಂತನಲ್ಲಿ ಒಂದಾಗ ಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ. ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ.
 • ದಾಸ ಸಾಹಿತ್ಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ. ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು. ಈ ಪ್ರಕಾರದ ಮುಖ್ಯ ಕನ್ನಡ ಕವಿಗಳೆಂದರೆ ಪುರಂದರದಾಸ ೧೪೯೪-೧೫೬೪ ಮತ್ತು ಕನಕದಾಸ೧೫೦೯-೧೬೦೯. ಇವರನ್ನು ದಾಸ ಸಾಹಿತ್ಯದ ಅಶ್ವಿನಿದೇವತೆಗಳೆಂದು ಕರೆಯಲಾಗಿದೆ.
                                     

4.1. ಆಧುನಿಕ ಕನ್ನಡ ಕನ್ನಡದ ನವೋದಯ

 • ನವೋದಯ ಎಂದರೆ ಹೊಸ ಹುಟ್ಟು / ಹೊಸದು. ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು. ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗೆ ಕಾರಣವಾಯಿತು. ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು.
 • ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು. ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀ, ತಮ್ಮ ಇಂಗ್ಲಿಷ್ ಗೀತಗಳ ಪುಸ್ತಕ ದೊಂದಿಗೆ. ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡು ಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
 • ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ - ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು. ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು-ಚೋಮನ ದುಡಿ, ಬೆಟ್ಟದ ಜೀವ, ಮೈಮನಗಳ ಸುಳಿಯಲ್ಲಿ, ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು ಮೊದಲಾದುವು.
 • ಇದಕ್ಕೆ ಉದಾಹರಣೆಯಾಗಿ ಕುವೆಂಪು - ತಮ್ಮ ಒಬ್ಬ ಶಿಕ್ಷಕರಿಂದ ಬ್ರಿಟಿಷ್ ಮೂಲದವರು ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು. ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ. ಅವರ ಅತಿ ಪ್ರಸಿದ್ಧ ಕಾವ್ಯಕೃತಿ ಶ್ರೀ ರಾಮಾಯಣ ದರ್ಶನಂ.


                                     

4.2. ಆಧುನಿಕ ಕನ್ನಡ ಈ ಕಾಲದ ಪ್ರಸಿದ್ಧ ಕವಿಗಳು

 • ಪ್ರೊ‌.ನಿಸಾರ್ ಅಹಮದ್
 • ಎಂ.ಗೋಪಾಲಕೃಷ್ಣ ಅಡಿಗ,
 • ಚೆನ್ನವೀರ ಕಣವಿ ಮೊದಲಾದವರು.
 • ಡಾ.ಚಂದ್ರಶೇಖರ್ ಕಂಬಾರ-ಕವಿ- ನಾಟಕಕಾರ - ಕಾದಂಬರಿಕಾರ- ಸಂಶೋಧಕ
 • ಕುವೆಂಪು,
 • ಡಿ.ವಿ.ಜಿ.
 • ದ.ರಾ.ಬೇಂದ್ರೆ,
 • ಕೆ.ಎಸ್. ನರಸಿಂಹಸ್ವಾಮಿ,
 • ಬಿ.ಎಂ.ಶ್ರೀ,
 • ಪು ತಿ ನ,
                                     

4.3. ಆಧುನಿಕ ಕನ್ನಡ ಈ ಕಾಲದ ಪ್ರಸಿದ್ಧ ಕಾದಂಬರಿಕಾರರು

 • ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು.
 • ಮಾಸ್ತಿ ವೆಂಕಟೇಶ ಐಯ್ಯಂಗಾರ್,
 • ಡಿ.ವಿ.ಗುಂಡಪ್ಪ
 • ಮಂಜೇಶ್ವರ ಗೋವಿಂದ ಪೈ
 • ಕುವೆಂಪು,
 • ಗೊರೂರು ರಾಮಸ್ವಾಮಿ ಅಯ್ಯಂಗಾರ್
 • ಅ.ನ.ಕೃ,
 • ಶಿವರಾಮ ಕಾರಂತ,
 • ಯು.ಆರ್.ಅನಂತಮೂರ್ತಿ,
 • ತೀ ನಂ ಶ್ರೀ
 • ಕೆ.ವಿ.ಅಯ್ಯರ್
 • ವಿ. ಕೃ. ಗೋಕಾಕ್
 • ಎಸ್. ಎಲ್. ಭೈರಪ್ಪ
                                     

4.4. ಆಧುನಿಕ ಕನ್ನಡ ನವ್ಯ

೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ. ಈ ಪ್ರಕಾರದ ಪಿತಾಮಹರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾ ವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.

                                     

4.5. ಆಧುನಿಕ ಕನ್ನಡ ಇತರ ಪ್ರಕಾರಗಳು

ಕಳೆದ ಐದು ದಶಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ. ಜಾತಿಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಪ್ರೇರಿತವಾಗಿದೆ. ಸ್ತ್ರೀ-ವಿಮೋಚನಾ ಚಳುವಳಿಗಳು ಸ್ತ್ರೀ-ಕಾವ್ಯ ಪ್ರಕಾರಕ್ಕೆ ಎಡೆ ಮಾದಿಕೊಟ್ಟಿವೆ. ಸಣ್ಣ ಕಥೆಗಳು ಹಾಗೂ ಭಾವಗಿತೆಗಳು ಸಹ ಇಪ್ಪತ್ತನೆ ಶತಮಾನದಲ್ಲಿ ಜನಪ್ರಿಯವಾದ ಸಾಹಿತ್ಯ ಪ್ರಕಾರಗಳು ರಾಜ್ಯದ ಹಲವರು ತಮ್ಮನ್ನು ಸ್ಥಳೀಯ ಬಾಷೆಯಲ್ಲಿ ಕಥೆ ಕಾದಂಬರಿ ಬರೆಯುವಲ್ಲಿ ಗುರುತಿಸಿಕೊಂಡರು. ಅದರಲ್ಲಿ ಬಾಳಾಸಾಹೇಬ ಲೋಕಾಪುರ ಅಮರೇಶ ನುಗಡೋಣಿ ಶಂಕರ ಬೈಚಬಾಳ ಲೋಕೆಶ ಅಗಸನಕಟ್ಟೆ ಮುಂತಾದ ಹಲವರನ್ನು ಇಲ್ಲಿ ಹೆಸರಿಸಬಹುದಾಗಿದೆ.

                                     

5. ಪ್ರಶಸ್ತಿಗಳು

ಕನ್ನಡ ಸಾಹಿತ್ಯದ ಶಕ್ತಿಗೆ ಕನ್ನಡಿಯಾಗಿ ಕನ್ನಡ ಸಾಹಿತ್ಯಕ್ಕೆ ಇದುವರೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ಇದು ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು. ಆಗಸ್ಟ್ ೨೦೦೪ ರ ವರೆಗೆ ಒಟ್ಟು ೪೬ ಕನ್ನಡ ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

                                     

6. ಜನಸಂಪರ್ಕ

ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದು ಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ.

                                     

7. ಹಳೆ ಕನ್ನಡದ ಗದ್ಯ/ಕವಿಗಳು

 • ಕವಿಜೀಹ್ವಾಬಂಧನ - ಈಶ್ವರಕವಿ
 • ಛಂದೊಂಬುಧಿ - ನಾಗವರ್ಮ-1
 • ಕವಿರಾಜಮಾರ್ಗ - ಶ್ರೀವಿಜಯ
 • ನಂದಿಛಂದಸ್ಸು - ವೀರಭದ್ರ
 • ಛಂದಸ್ಸಾರ - ಗುಣವರ್ಮ
 • ವಡ್ಡಾರಾಧನೆ -ಶಿವಕೋಟ್ಯಾಚಾರ್ಯ

ನಾಗವರ್ಮ-೨

 • ಉದಯಾದಿತ್ಯಾಲಂಕಾರ - ಉದಯಾದಿತ್ಯ
 • ರಸರತ್ನಾಕರ - ಸಾಳ್ವ
 • ನರಪತಿಚರಿತೆ - ಲಿಂಗರಾಜ
 • ಮಾಧವಾಲಂಕಾರ - ಮಾಧವ
 • ಅಪ್ರತಿಮವೀರಚರಿತೆ - ತಿರುಮಲರಾಯ
 • ಶೃಂಗಾರ ರತ್ನಾಕರ - ಕಾಮದೇವ
 • ಶಬ್ದಮಣಿದರ್ಪಣ - ಕೇಶಿರಾಜ
                                     

8. ಸಂಬಂಧಿತ ಲೇಖನಗಳು

 • ಕನ್ನಡ ಸಾಹಿತ್ಯ ಪರಿಷತ್ತು
 • ಕರ್ನಾಟಕ
 • ಕನ್ನಡ ಸಾಹಿತ್ಯ ಪ್ರಕಾರಗಳು|
 • ಜೈಮಿನಿ ಭಾರತದಲ್ಲಿ ಅಲಂಕಾರಗಳು
 • ಭಾರತ
 • ಲಕ್ಷ್ಮೀಶ
 • ಕನ್ನಡ
 • ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ
 • ಜೈಮಿನಿ ಭಾರತ
 • ಜೈಮಿನಿ ಭಾರತದಲ್ಲಿ ನವರಸಗಳು
                                     

9. ಬಾಹ್ಯ ಅಂತರ್ಜಾಲ ತಾಣಗಳು

 • ಕನ್ನಡ ಲೇಖಕರ ಛಾಯಾಚಿತ್ರಗಳು
 • ಕನ್ನಡ ಸಾಹಿತ್ಯದ ಚರಿತ್ರೆ ಕನ್ನಡ ಪುಟ
 • History of Kannada Literature-ಕನ್ನಡ ಸಾಹಿತ್ಯದ ಚರಿತ್ರೆ
 • ಭಾರತ ಸಾಹಿತ್ಯ ಅಕಾಡೆಮಿ ಪ್ರಶತಿ ಪುರಸ್ಕೃತ ಕನ್ನಡ ಸಾಹಿತಿಗಳು
 • ಕನ್ನಡ ರಸಾಯನ
 • ಜ್ಞಾನಪೀಠ ಪುರಸ್ಕೃತ ಭಾರತೀಯ ಸಾಹಿತಿಗಳು
 • `ಚಿಲುಮೆ - ಕನ್ನಡ ಸಾಹಿತ್ಯ ತಾಣ
                                               

ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘ,ಬೆಂಗಳೂರು

ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘ ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಹಾಗೂ ಪುಸ್ತಕ ಪ್ರಕಟಣೆಗೆ ಆರಂಭವಾದ ಸಂಘವಾಗಿದೆ. ೧೯೭೨ನೆ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾದ ಈ ಸಂಘ ಇಲ್ಲಿಯವರೆಗೆ ಒಟ್ಟು ೨೨೭ ಪುಸ್ತಕಗಳನ್ನು ಪ್ರಕಟಿಸಿದೆ.ನವೆಂಬರ್ ೧೯ ೨೦೧೨ ರಂದು ಡಾ.ವೀರಪ್ಪಮೊಯಿಲಿಯವರ ೩ ಪುಸ್ತಕಗಳನ್ನು ಬಿಡುಗಡೆ ಮಾಡಿತು. ಕಥೆ,ಕಾದಂಬರಿ,ಪ್ರಭಂಧ,ವಿಮರ್ಶೆ,ಅನುವಾದ ಇವೇ ಮೊದಲಾದ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಪ್ರಕಟಿಸಿದೆ.

ರಸ
                                               

ರಸ

ಸಾಹಿತ್ಯ ಮತ್ತು ಕಾವ್ಯಕ್ಕೆ ಸಂಬಂಧಪಟ್ಟ ರಸ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ. ರಸ ವು ಹಣ್ಣು ಅಥವಾ ತರಕಾರಿಯ ಜೀವಕೋಶದಲ್ಲಿ ನೈಸರ್ಗಿಕವಾಗಿ ಅಡಕವಾಗಿರುವ ದ್ರವ. ಶಾಖ ಅಥವಾ ದ್ರಾವಕಗಳನ್ನು ಬಳಸದೆ ತಾಜಾ ಹಣ್ಣುಗಳು ಅಥವಾ ತರಕಾರಿಗಳ ತಿರುಳನ್ನು ಯಾಂತ್ರಿಕವಾಗಿ ಹಿಂಡಿ ಅಥವಾ ದ್ರವದಲ್ಲಿ ನೆನೆಸಿ ಮಿದುಗೊಳಿಸಿ ರಸವನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ, ಕಿತ್ತಳೆ ರಸವು ಕಿತ್ತಳೆ ಮರದ ಹಣ್ಣಿನ ದ್ರವಸಾರ. ನವರಸ - ಸಾಹಿತ್ಯ ಮತ್ತು ಕಾವ್ಯಗಳಲ್ಲಿ ಬರುವ ಭಾವ ರಸಗಳಿಗೆ -ಕನ್ನಡ ಸಾಹಿತ್ಯ | ಗಮಕ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →