Топ-100
Back

ⓘ ಆರಿಗ್ನೇಷಿಯನ್ ಸಂಸ್ಕೃತಿ ಮಧ್ಯ ಫ್ರಾನ್ಸ್‌ನಲ್ಲಿ ಪ್ರಚಲಿತವಾಗಿದ್ದ ಹಳೆ ಶಿಲಾಯುಗದ ಉತ್ತರಭಾಗದ ಒಂದು ಪ್ರವೃದ್ಧ ಸಂಸ್ಕೃತಿ. ಆರಿಗ್ನಾಕ್ ಎಂಬಲ್ಲಿ ಕಂಡು ಬಂದದ್ದರಿಂದ ಆ ಹೆಸರು. ಕಾಲ ಪ್ಲಿಸ್ಟೊಸ ..



ಆರಿಗ್ನೇಷಿಯನ್ ಸಂಸ್ಕೃತಿ
                                     

ⓘ ಆರಿಗ್ನೇಷಿಯನ್ ಸಂಸ್ಕೃತಿ

ಆರಿಗ್ನೇಷಿಯನ್ ಸಂಸ್ಕೃತಿ ಮಧ್ಯ ಫ್ರಾನ್ಸ್‌ನಲ್ಲಿ ಪ್ರಚಲಿತವಾಗಿದ್ದ ಹಳೆ ಶಿಲಾಯುಗದ ಉತ್ತರಭಾಗದ ಒಂದು ಪ್ರವೃದ್ಧ ಸಂಸ್ಕೃತಿ. ಆರಿಗ್ನಾಕ್ ಎಂಬಲ್ಲಿ ಕಂಡು ಬಂದದ್ದರಿಂದ ಆ ಹೆಸರು. ಕಾಲ ಪ್ಲಿಸ್ಟೊಸೀನ್ನ ಕಡೆಯ ಹಿಮಯುಗ ವುರ್ಮ್ನ ಮಧ್ಯಭಾಗ-ಸು. ೩೦,೦೦೦-೨೦,೦೦೦ ವರ್ಷಗಳ ಹಿಂದೆ. ಕ್ರೋಮ್ಯಾಗ್ನಾನ್ ಎಂಬ ನಿಜಮಾನವ ಕುಲದವರು ಈ ಸಂಸ್ಕೃತಿಯ ಪ್ರವರ್ತಕರು. ಈ ಕಾಲದಲ್ಲಿ ಬರೆಯುವ ಮತ್ತು ಕೊರೆಯುವ ವಿವಿಧ ಕಲ್ಲಿನ ಉಪಕರಣಗಳು ಬಳಕೆಯಲ್ಲಿದ್ದುವು. ಅಲ್ಲದೆ ಎಲುಬಿನ ಆಯುಧಗಳ ವಿಶೇಷ ಬಳಕೆಯೂ ಈ ಕಾಲದಲ್ಲಿ ರೂಢಿಗೆ ಬಂದಿತ್ತು. ಚಿತ್ರ ಮತ್ತು ಶಿಲ್ಪಕಲೆ ಕೂಡ ಈ ಕಾಲದಲ್ಲೇ ಪ್ರಾರಂಭವಾಗಿರಬಹುದೆಂದು ಬಹು ಜನರ ಅಭಿಮತ. ಈ ಕಲಾಕೃತಿ ಗಳು ಫ್ರಾನ್ಸ್‌ನ ಹಲವು ಸುಣ್ಣಕಲ್ಲು ಗುಹೆಗಳ ಗೋಡೆಗಳ ಮೇಲೂ ಅವರು ವಾಸಿಸುತ್ತಿದ್ದ ಗುಹಾಪ್ರದೇಶಗಳಲ್ಲೂ ದೊರಕಿವೆ. ಈ ಸಂಸ್ಕೃತಿ ಮಧ್ಯಫ್ರಾನ್ಸ್‌ನಲ್ಲಿ ಹೆಚ್ಚಾಗಿ ಕಂಡುಬರುವುದಾದರೂ ಅದರ ಮೂಲ ಅಥವಾ ಶಾಖೆಗಳನ್ನು ಪುರ್ವಯೂರೋಪ್ ಮತ್ತು ವಾಯವ್ಯ ಏಷ್ಯದಲ್ಲೂ ಕಾಣಬಹುದು.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →