Топ-100
Back

ⓘ ಹೆಬ್ರಿ ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ತಾಲೂಕು. ಉಡುಪಿಯಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ಹೆಬ್ರಿ ಪಟ್ಟಣ ಸಿಗುತ್ತದೆ. ಆಕರ್ಷಕ ಆಗು ..                                               

ಅಜೆಕಾರು

ಅಜೆಕಾರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಸ್ಥಳ.ಸುಮಾರು ೭೦೦೦ ಜನಸಂಖ್ಯೆ ಇರುವ ಈ ಊರು ಕಾರ್ಕಳ - ಆಗುಂಬೆ ರಸ್ತೆಯಲ್ಲಿದೆ. ಈ ಗ್ರಾಮವು ಕಾರ್ಕಳ, ಹೆಬ್ರಿ ಮತ್ತು ಆಗುಂಬೆಗೆ ಸಂಪರ್ಕಿಸುವ ರಸ್ತೆಯಲ್ಲೇ ಇದೆ. ಇದು ಬಸ್ಸುಗಳು, ಜೀಪ್ ಮತ್ತು ಮೂರು ಚಕ್ರ ವಾಹನ ರಿಕ್ಷಾಗಳಂತಹ ಉತ್ತಮ ಸಾರಿಗೆ ಸೌಲಭ್ಯವನ್ನು ಹೊಂದಿದೆ.ಅದರ ಹೆಸರನ್ನು ಋಷಿ ಅಜದಿಂದ ನೇರವಾಗಿ ಪಡೆಯಲಾಗಿದೆ ಎಂದು ಹೇಳುವ ದಂತಕಥೆ ಇದೆ. ಈ ಸ್ಥಳದಲ್ಲಿ ಅಜ ಋಷಿ ತನ್ನ ತಪಸ್ಸು ಮಾಡಿದಂತೆ ಹೇಳಲಾಗುತ್ತದೆ. ಈ ಗ್ರಾಮವು ಪ್ರಾಥಮಿಕ ಮತ್ತು ಪ್ರೌಢಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್, ಪೋಸ್ಟ್ ಮತ್ತು ದೂರಸಂಪರ್ಕ ಸೌಕರ್ಯಗಳಂತಹ ಇತರ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಕೃಷಿ ಅಜೇಕರ್ ಜನರ ಪ್ರಮುಖ ಉದ್ಯೋಗವಾಗಿದ್ದರೂ ಸಹ, ವ್ಯವಹಾರ ಮತ ...

                                               

ವಿ ಸುನಿಲ್ ಕುಮಾರ್

ಒಂದರಿಂದ ನಾಲ್ಕನೇ ತರಗತಿ ಕಾರ್ಕಳದ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಪುಲ್ಕೇರಿ. ಐದರಿಂದ ಏಳನೇ ತರಗತಿ ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಶಿವಮೊಗ್ಗ ಜಿಲ್ಲೆಯ ಪದವಿ ಪೂರ್ವ ಕಾಲೇಜು ಹಿತ್ತಲ. ಚಿಕ್ಕಮಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕಲಾ ಪದವಿ ಪಡೆದು ಪತ್ರಕರ್ತರಾಗಿ ಸೇವೆ ಸಲ್ಲಿಸಿ ತದನಂತರ ಸಂಪೂರ್ಣವಾಗಿ ಸಮಾಜ ಸೇವೆಗಾಗಿ ತನ್ನನ್ನು ತಾನು ಸಮರ್ಪಣೆ.

ಹೆಬ್ರಿ
                                     

ⓘ ಹೆಬ್ರಿ

ಹೆಬ್ರಿ ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ತಾಲೂಕು. ಉಡುಪಿಯಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ಹೆಬ್ರಿ ಪಟ್ಟಣ ಸಿಗುತ್ತದೆ. ಆಕರ್ಷಕ ಆಗುಂಬೆ ಘಾಟ್ ನ ಕೆಳ ಭಾಗದಲ್ಲಿರುವ ಈ ಪಟ್ಟಣ ಗೋಡಂಬಿ ಸಂಸ್ಕರಣೆ, ಅಕ್ಕಿ ಗಿರಣಿಗಳು, ತೈಲ ಗಿರಣಿಗಳು ಪಶು ಆಹಾರ ತಯಾರಿ ಮುಂತಾದ ಕೃಷಿಯಾಧಾರಿತ ಕೈಗಾರಿಕೆಗಳಿಂದ ಪ್ರಸಿದ್ಧಿ. ಸೀತಾ ನದಿ ಇಲ್ಲಿ ಹರಿಯುತ್ತದೆ. ಉತ್ತಮ ಮಳೆಯಾಗುವುದರಿಂದ ಇಲ್ಲಿನ ಪರಿಸರ ಹಸಿರು ಭತ್ತದ ಗದ್ದೆಗಳು, ಅಡಿಕೆ, ತೆಂಗು ಮತ್ತು ಗೋಡಂಬಿ ತೋಟ ಮತ್ತು ಹಸಿರು ಕಾಡುಗಳಿಂದ ಆವ್ರತಗೊಂಡು ಶಾಂತ ವಾತಾವರಣವನ್ನು ಹೊಂದಿದೆ. ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಗೆ ಬರುವ ಸೋಮೇಶ್ವರ ವನ್ಯಜೀವಿಧಾಮ ಹೆಬ್ರಿಗೆ ತಾಗಿಕೊಂಡಿದೆ. ಅಳಿವಿನಂಚಿನಲ್ಲಿರುವ ಸಾಕಷ್ಟು ಜೀವ ಪ್ರಭೇದಗಳಿಗೆ ಇದು ಆಶ್ರಯ ತಾಣ. ಕಾಳಿಂಗ ಸರ್ಪ ಇವುಗಳಲ್ಲೊಂದು.

ಹೆಬ್ಬೇರಿ ಎಂಬ ಹೆಸರು ಕಾಲಕ್ರಮೇಣ ಹೆಬ್ರಿ ಎಂದು ಬದಲಾಯಿತೆಂದು ನಂಬಲಾಗಿದೆ. ವಿಕೋಪಗಳ ಸಮಯದಲ್ಲಿ ಜನರನ್ನು ಎಚ್ಚರಿಸಲು ಒಂದು ದೊಡ್ಡ "ಭೇರಿ"ಯನ್ನು ಈ ಗ್ರಾಮ ಹೊಂದಿತ್ತು. ಇದೇ ಭೇರಿ ಹಿರಿದು ಭೇರಿ - ಹೆಬ್ಬೇರಿ ಈ ಪಟ್ಟಣಕ್ಕೆ ಒಂದು ಸುಂದರ ಹೆಸರು ತಂದಿತು.

                                     

1. ಸಮುದಾಯಗಳು, ಸಂಸ್ಕೃತಿ ಹಾಗೂ ಭಾಷೆಗಳು

ಬಿಲ್ಲವ ಮತ್ತು ಬಂಟ ಇಲ್ಲಿ ಕಂಡು ಬರುವ ಪ್ರಮುಖ ಜಾತಿಗಳು. ಉಳಿದಂತೆ ಬಾಹ್ಮಣ, ಗೌಡ ಸಾರಸ್ವತ ಬಾಹ್ಮಣ, ದೇವಾಡಿಗ ಮುಂತಾದ ಹಿಂದೂ ಧರ್ಮೀಯರು ನೆಲೆಸಿದ್ದಾರೆ. ಕ್ರೈಸ್ತರು ಮತ್ತು ಮುಸ್ಲಿಮರು ಕಡಿಮೆ.

ಕುಂದಗನ್ನಡ ಸಾಮಾನ್ಯ ಆಡು ಭಾಷೆ. ಕೆಲವರು ತುಳುವಿನಲ್ಲೂ ವ್ಯವಹರಿಸುತ್ತಾರೆ. ಕೊಂಕಣಿಯಂತ ಸಮುದಾಯ ಕೇಂದ್ರಿತ ಭಾಷೆಗಳೂ ಬಳಕೆಯಲ್ಲಿದೆ.

ಅನಂತ ಪದ್ಮನಾಭ ಹೆಬ್ರಿಯ ಗ್ರಾಮ ದೇವರು. ಅನಂತ ಪದ್ಮನಾಭ ದೇವಾಲಯ ಮುಖ್ಯ ರಸ್ತೆಗೆ ತಾಗಿಕೊಂಡಿದೆ. ಕಪ್ಪು ಗ್ರಾನೈಟ್ ಶಿಲ್ಪದಿಂದ ಕೆತ್ತಿರುವ ಮೂರು ಅಡಿ ಎತ್ತರದ ಸುಂದರ ದೇವರ ಮೂರ್ತಿ ನಿಂತಿರುವ ಭಂಗಿಯಲ್ಲಿದೆ,

                                     

2. ಪ್ರವಾಸೀ ತಾಣಗಳು

  • ಕೂಡ್ಲು ತೀರ್ಥ ಜಲಪಾತ: ಕೂಡ್ಲು ತೀರ್ಥ ಜಲಪಾತವು ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು.ಈ ಜಲಪಾತವು ಸೀತಾ ನದಿಯ ಮೂಲವೆಂದು ಕರೆಯಲ್ಪಡುವ ಒಂದು ಕೊಳದಿಂದ ಸುಮಾರು 126 ಅಡಿ ಮೇಲಿನಿಂದ ಧುಮ್ಮಿಕ್ಕಿ ಹರಿಯುತ್ತದೆ. ಪ್ರವಾಸಿಗರು ಮೂರರಿಂದ್ ನಾಲ್ಕು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಈ ಜಲಪಾತವನ್ನು ತಲುಪಬಹುದು.
  • ಒನಕೆ ಅಬ್ಬಿ ಜಲಪಾತ: ಒನಕೆ ಅಬ್ಬಿ ಜಲಪಾತವು ಆಗುಂಬೆಯ ಪ್ರವಾಸಿ ತಾಣಗಳಲ್ಲಿಯೇ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಜಲಪಾತಕ್ಕೆ ಮನೆಗಳಲ್ಲಿ ಕುಟ್ಟಲು ಬಳಸುವ ಒನಕೆಯಂತೆ ಕಾಣುವುದರಿಂದ ಒನಕೆ ಹೆಸರು ಬಂದಿದೆ. ಈ ಜಲಪಾತವನ್ನು ಹೆಬ್ರಿಯಿಂದ ಸೋಮೇಶ್ವರಕ್ಕೆ ತೆರೆಳಿ ಚಾರಣದ ಮೂಲಕ ತಲುಪಬಹುದು. ಈ ಜಲಪಾತ ಮೇಲ್ಭಾಗಕ್ಕೆ ಆಗುಂಬೆಯಿಂದ ಕೂಡ ತಲುಪಬಹುದು. ಜಲಪಾತದ ಕವಲಿನ ತುದಿ ತಲುಪಲು ಮೆಟ್ಟಿಲುಗಳನ್ನು ಸಹಾ ಕೊರೆದಿದ್ದು ಪ್ರವಾಸಿಗರು ಹತ್ತಿ ಅಲ್ಲಿಂದ ಜಲಪಾತದ ನಯನ ಮನೋಹರ ಸೌಂದರ್ಯವನ್ನು ಸವಿಯಬಹುದು.
  • ಚಾರಶಹರಾ: ಶಹರಾ ಎಂದರೆ ಈಗಿನ ಚಾರ. ಇಲ್ಲಿ ಜೈನ ಕಾಲದಲ್ಲಿ ವ್ಯಾಪಾರ ಕೇಂದ್ರವಾಗಿದೆ. ಅಲ್ಲದೆ ಇಲ್ಲಿ ಪ್ರಮುಖ ಗ್ರಾಮದ ಅಧಿದೇವತೆಯಾದ ಚಾರ ದುರ್ಗಾಪರಮೇಶ್ವರೀ ಮಹಿಷಮರ್ದಿನಿ ಅಮ್ಮನವರು ಸುಮಾರು ಯುಗಾಂತರದ ದೇಗುಲವಾಗಿದೆ. ಹಿಂದೆ ತ್ರೇತ್ರಾಯುಗದಲ್ಲಿ ಶಾಗ ಮಾತಂಗರ ಮಗನಾದ ರಾಮ ಭಕ್ತೆ ತಾಯಿ ಶಬರಿಯ ಅನುಜ ಶೌಬರ ಮುನಿ ಮಾಡಿದ ದೇಗುಲ. ಅಲ್ಲದೆ ಹಿಂದೆ ಸೇನಾನಿ ಖರಾಸುರ ತನಗೆ ಮಕ್ಕಳಾಗಲಿಲ್ಲ ಎಂದು ತಿಳಿದು ಪಾತಾಳಕ್ಕೆ ಹೋಗಿ ಮಾವ ಮಾಯಾಸುರನಿಂದ ಏಳು ಲಿಂಗಗಳನ್ನು ತಂದು ಅಲ್ಲಲ್ಲಿ ಒಂದು ಲಿಂಗವನ್ನು ಇಟ್ಟನು, ಆ ಒಂದು ಮಾಯಾಸುರ ನಿರ್ಮಿತ ಲಿಂಗ ಇಂದು ಶಹರಾಚಾರದ ಭುವಿಯಲ್ಲಿ ಇಟ್ಟನು. ಅದರ ಹತ್ತಿರವೇ ಖರಾಸುರನ ಮಡದಿಯಾದ ಕುಂಭಮುಖಿಯು ಪ್ರೇರಣೆಯಂತೆ ದುರ್ಗಾಪರಮೇಶ್ವರಿ ತಂದು ಭುವಿಯಲ್ಲಿ ಇಟ್ಟನು. ಹೀಗೆ ಪುರಾಣ ಪ್ರಸಿದ್ಧ ಚಾರ ಮಹಿಷಮರ್ದಿನಿದುರ್ಗಾಪರಮೇಶ್ವರಿ ನಡುಬಯಲಿನ ಪ್ರಶಾಂತವಾಗಿ ಹಸಿರುವನ ಸಿರಿಯಲ್ಲಿ ಗ್ರಾಮದೇವತೆಯಾಗಿ ಭಕ್ತರನ್ನು ಹರಿಸುವಳು, ಅಲ್ಲದೆ ಸಪ್ತಋಷಿ ಮುನಿವರ್ಯ ಅಗಸ್ಯ ಮಹರ್ಷಿಯರು ಹಿಂದೆ ಪಶ್ಚಿಮ ಘಟ್ಟದಿಂದ ಇಳಿದು ಬರುವಾಗ, ಸೋಮೇಶ್ವರದ ಸೋಮನಾಥೇಶ್ವರನನ್ನು ಪೂಜಿಸಿ, ಮುಂದೆ ಸೀತಾನದಿಯ ಕಿನಾರೆಯಲ್ಲಿ ನಡೆಯುತ್ತಾ ಬರುವಾಗ ಸಂಧ್ಯಾ ಸಮಯವಾದ್ದರಿಂದ, ಶಹರಾದ ಸಮೀಪ ಅಲ್ಲೇ ಸೀತಾವಾಹಿನಿಯು ಹರಿಯುತ್ತಿದ್ದರಿಂದ ಪ್ರಶಾಂತವಾದ ಪ್ರದೇಶದಲ್ಲಿ ಅಗಸ್ಯಮುನಿ ಶಿವಲಿಂಗವನ್ನು ಭುವಿಯಲ್ಲಿ ಇತ್ತು ಮಹಾಲಿಂಗ ಎಂದು ಪ್ರತಿಷ್ಠೆ ಮಾಡಿದರು. ನಂತರ ಹಲವು ದಿನ ಪೂಜಿಸಿ ತಪಗೈದನು. ಆ ಲಿಂಗವು ಜೈನರು ಮುಂದೆ ಪೂಜಿಸಿ ಆರಾಧಿಸಿದರು. ಅಲ್ಲದೆ ಇಲ್ಲಿನ ಪಾಳೇಗಾರ ತಿಮ್ಮರಸನು ಬಾರನಕೂರಿನ ಅರಸ ಜಯಪಾಂಡ್ಯನ ಸೋಲಿಸಿ ಬಾರನಕೂರಿನ ಕಲ್ಲಿನ ಸಿಂಹಾಸನದಲ್ಲಿ ರಾಜ್ಯ ಬಾರವನ್ನು ಮಾಡಿ, ಈ ಶಹರಾ ಪಟ್ಟಣವನ್ನು ಬಾರನಕೂರಿನ ಎರಡನೇ ರಾಜಧಾನಿಯಾಗಿ ಮಾಡಿದನು. ಅಲ್ಲದೆ ಅಲ್ಲಿನ ಎಲ್ಲ ಸಂಪ್ರದಾಯಗಳನ್ನು ಮತ್ತು ಸೂರಾಲಿನ ಅರಸನ ಮಗಳನ್ನು ತಾನು ಮದುವೆ ಮಾಡಿಕೊಂಡು ಬಾರನಕೂರಿನ ಸ್ಥಳದ ಇತಿಹಾಸದಲ್ಲಿ ಶಹರಾ ಪಟ್ಟಣ ಸೇರಿತು. ಅಲ್ಲದೆ ಜೋಮ್ಲ್ ತೀರ್ಥ ಶೌಬರ ಮುನಿ ಪ್ರತಿಷ್ಠೆ ಮಾಡಿದ ಬಬ್ಬರ್ಯ, ಕೆರೆಬೆಟ್ಟು ಮಾಹಾಲಿಂಗೇಶ್ವರ, ಬಿಲ್ಲವ ಸಮಾಜದ ಗರಡಿ ಮುಂತಾದವುಗಳಿವೆ. ಇಲ್ಲಿನ ವಾಣಿಜ್ಯ ಉದ್ಯಮ ಗೇರುಬೀಜ ಕಾರ್ಖಾನೆ ಮತ್ತು ಅಕ್ಕಿ ಕಾರ್ಖಾನೆ, ತೆಂಗಿನ ಕಾಯಿ ಕಾರ್ಖಾನೆ, ಭತ್ತ, ಅಡಿಕೆ, ತೆಂಗು ಬಾಳೆ, ಪ್ರಮುಖ ಬೆಳೆಗಳಾಗಿವೆ.
  • ವರಂಗ ಕೆರೆ ಬಸದಿ: ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ.14 ಎಕರೆ ವಿಸ್ತಾರದ ತುಂಬಿ ತುಳುಕುವ ಕೆರೆಯ ನಡುವೆ ನೆಲೆ ನಿಂತಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿ ಚೆಲುವನ್ನು ನೋಡಿಯೇ ಆನಂದಿಸಬೇಕು. ಪದ್ಮಾವತಿ ದೇವಿಯ ಸನ್ನಿಧಿಯನ್ನು ತಲುಪಲು ದೋಣಿಯೊಂದೇ ದಾರಿ. ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಯಾವ ಮಳೆ, ಬಿಸಿಲು ಕಾಲದಲ್ಲೂ ದೋಣಿಯ ಮೂಲಕವೇ ಕ್ರಮಿಸಬೇಕು. ಆ ದೋಣಿ ಪಯಣವೇ ಒಂದು ರೋಚಕ ಅನುಭವ.
  • ಸೀತಾನದಿ ನಿಸರ್ಗ ಧಾಮ: ಕರ್ನಾಟಕ ಸರ್ಕಾರದ ಒಡೆತನದ ಸೀತಾನದಿ ನಿಸರ್ಗ ಧಾಮ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಒಂದು ಭಾಗವಾಗಿದೆ. ಸೀತಾನದಿಯ ತಟದಲ್ಲಿದೆ.ಪ್ರಕೃತಿಯನನ್ನು ಸವಿಯುತ್ತಾ ವಾರಾಂತ್ಯ ಕಳೆಯಲು ಹೇಳಿ ಮಾಡಿಸಿದ ಜಾಗ. ಮಳೆಗಾಲದಲ್ಲಿ ಇಲ್ಲಿ ರಾಫ್ಟಿಂಗ್ ಸೌಲಭ್ಯ ಕೂಡ ಇರುತ್ತದೆ.
  • ಜೊಮ್ಲು ತೀರ್ಥ ಜಲಪಾತ: ಬ್ರಹ್ಮಾವರ-ಹೆಬ್ರಿ ಮಧ್ಯಭಾಗದಲ್ಲಿದೆ. ಉಡುಪಿಯಿಂದ 35ಕಿಮೀ. ದೂರದಲ್ಲಿರೋ ಈ ಜಲಪಾತ ಬೆಳ್ವೆ ಎಂಬ ಗ್ರಾಮದಲ್ಲಿದ್ದು, ಇಲ್ಲಿಗೆ ಹೋಗಲು ರಸ್ತೆ ಸೌಕರ್ಯವಿದೆ. ಯಾವುದೇ ವಾಹನದಲ್ಲಾದರೂ ಇಲ್ಲಿಗೆ ಪ್ರಯಾಣ ಬೆಳೆಸಬಹುದು. 20 ಅಡಿ ಎತ್ತರದಿಂದ ಹರಿಯುವ ಸೀತಾನದಿ ಇಲ್ಲಿ ನಿಸರ್ಗ ರಮಣೀಯ ಜಲಧಾರೆಯಾಗಿ ಸೃಷ್ಟಿಯಾಗಿದೆ.
  • ಕಬ್ಬಿನಾಲೆ: ಪಶ್ಚಿಮ ಘಟ್ಟಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಅತ್ಯಂತ ಸುಂದರ ಸ್ಥಳ. ಕನಿಷ್ಠ 6000 ವರ್ಷಗಳ ಹಿಂದಿನ ಶಿಲಾಯುಗದ ಸಂಸ್ಕೃತಿಯ ಕುರುಹುಗಳು ಈ ಹಳ್ಳಿಯಲ್ಲಿ ಗೋಚರಿಸುತ್ತವೆ. ಅರಣ್ಯ ಮತ್ತು ನ್ಯಾಷನಲ್ ಪಾರ್ಕ್ ಒಳಗೆ ಅಲ್ಲಲ್ಲಿ ವಸಾಹತುಗಳು ಕಂಡುಬರುತ್ತವೆ.
                                               

ಕರ್ನಾಟಕ ರಾಜ್ಯ ಹೆದ್ದಾರಿಗಳ ಪಟ್ಟಿ

ರಾಜ್ಯ ಹೆದ್ದಾರಿಗಳು ರಾಜ್ಯದ ಪ್ರಮುಖ ಮಾರ್ಗಗಳಾಗಿದ್ದು, ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುತ್ತವಲ್ಲದೆ, ರಾಜ್ಯದಲ್ಲಿನ ಮತ್ತು ನೆರೆಯ ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುತ್ತವೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →