Топ-100
Back

ⓘ ಸತ್ಯಂ. ಈ ಲೇಖನವು ಸಂಗೀತ ನಿರ್ದೇಶಕ ಸತ್ಯಂ ಅವರ ಬಗ್ಗೆ. ಸತ್ಯಂ - ಮಾಹಿತಿ ತಂತ್ರಜ್ಞಾನ ಕಂಪನಿಯ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ. ಸತ್ಯಂ - ಕನ್ನಡ ಚಿತ್ರರಂಗದಲ್ಲಿ ಖ್ಯಾತ ಸಂಗೀತ ನಿರ್ದೇಶ ..                                               

ಟೆಕ್‌ ಮಹೀಂದ್ರಾ

ಟೆಕ್‌ ಮಹೀಂದ್ರಾ ಲಿಮಿಟೆಡ್‌ ಎಂಬುದು ಒಂದು ಮಾಹಿತಿ ತಂತ್ರಜ್ಞಾನ ಸೇವಾದಾರ ಕಂಪನಿಯಾಗಿದ್ದು, ಭಾರತದ ಪುಣೆಯಲ್ಲಿ ತನ್ನ ಕೇಂದ್ರ ಕಾರ್ಯಾಲಯವನ್ನು ಹೊಂದಿದೆ. ಇದು ಮಹೀಂದ್ರಾ ಸಮೂಹ ಮತ್ತು UKಯ BT ಗ್ರೂಪ್‌ ಪಿಎಲ್‌ಸಿ ನಡುವಿನ ಒಂದು ಜಂಟಿ ಉದ್ಯಮವಾಗಿದ್ದು, ಇದರಲ್ಲಿನ ಸಾಮಾನ್ಯ ಷೇರಿನ ಪೈಕಿ M&M 44%ನಷ್ಟು ಹಿಡುವಳಿಯನ್ನು ಹೊಂದಿದ್ದರೆ, BT 39%ನಷ್ಟು ಹಿಡುವಳಿಯನ್ನು ಹೊಂದಿದೆ. ಟೆಕ್‌ ಮಹೀಂದ್ರಾ ತನ್ನ ಕೇಂದ್ರ ಕಾರ್ಯಾಲಯವನ್ನು ಪುಣೆಯಲ್ಲಿ ಹೊಂದಿದೆ. ಕ್ಷಿಪ್ರವಾಗಿ ಬೆಳೆದಿರುವ ಟೆಕ್‌ ಮಹೀಂದ್ರಾ ಭಾರತದಲ್ಲಿನ 5ನೇ ಅತಿದೊಡ್ಡ ತಂತ್ರಾಂಶ ರಫ್ತುದಾರ ಮತ್ತು ಭಾರತದಲ್ಲಿನ 1ನೇ ಅತಿದೊಡ್ಡ ದೂರಸಂಪರ್ಕ ತಂತ್ರಾಂಶ ಸರಬರಾಜುದಾರ ಎಂಬ ಕೀರ್ತಿಗೆ ಪಾತ್ರವಾಗಿದೆ. 2010ರ ಮಾರ್ಚ್‌ ವೇಳೆಗೆ ಇದ್ದಂತೆ, ಇದು 33.524ಕ್ಕೂ ಹೆಚ್ಚಿನ ಉದ್ಯೋ ...

                                               

ಯಂಡಮೂರಿ ವೀರೇಂದ್ರನಾಥ್‌

ಇವರು ತೆಲುಗಿನ ಖ್ಯಾತ ಲೇಖಕರು. ಇವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ.

                                               

ಅಮೆಷಾ ಸ್ಪೆಂಟಾ

ಅಮೆಷಾ ಎಂದರೆ ನಿತ್ಯರು, ಅಮರರು ಎಂದೂ ಸ್ಪೆಂಟಾ ಎಂದರೆ ಉಪಕಾರ ಮನೋವೃತ್ತಿಯುಳ್ಳವರು, ಹಿತಕರರು ಎಂದೂ ಅರ್ಥ" ಯಹೂದ್ಯ, ಕ್ರೈಸ್ತ ಇತ್ಯಾದಿ ಮತಗಳಲ್ಲಿನ ದೇವದೂತರು, ಹಿಂದೂಧರ್ಮದಲ್ಲಿನ ಆದಿತ್ಯರು, ನಿತ್ಯಸೂರಿಗಳು ಇವರುಗಳಿಗೆ ಅಮೆಷಾ ಸ್ಪೆಂಟಾರನ್ನು ಹೋಲಿಸಬಹುದು.

                                               

ಸಂಧ್ಯಾವಂದನ ಪೂರ್ಣಪಾಠ

ಸಂಧ್ಯಾವಂದನೆ ಎಂಬುದು ಉಪನಯನವಾದ ಹಿಂದೂಗಳು ಆಚರಿಸುವ ಒಂದು ದೈನಂದಿನ ಕ್ರಿಯೆ. ಮೂರು ಸಂಧ್ಯಾ ಕಾಲಗಳಾದ ಪ್ರಾತಃ ಸಂಧ್ಯೆ, ಮಧ್ಯಾಹ್ನಿಕ, ಸಾಯಂ ಸಂಧ್ಯೆ ಎಂಬ ತ್ರಿಸಂಧ್ಯೆಗಳ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ.

                                               

ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ

ಸಾಂಸ್ಥಿಕ ವ್ಯವಹಾರಗಳ ಸಚಿವಾಲಯ ಅಥವಾ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ವು ಭಾರತೀಯ ಸರ್ಕಾರದ ಸಚಿವಾಲಯವಾಗಿದೆ. ಇದು ಮುಖ್ಯವಾಗಿ ಕಂಪನಿಗಳ ಕಾಯ್ದೆ 2013, ಕಂಪೆನಿಗಳ ಕಾಯ್ದೆ 1956, ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ಕಾಯ್ದೆ, 2008, ದಿವಾಳಿತನ ಮತ್ತು ದಿವಾಳಿತನ ಸಂಹಿತೆ, 2016 ಮತ್ತು ಇತರ ಸಂಬಂಧಿತ ಕಾಯಿದೆಗಳು ಮತ್ತು ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸಲಾಗಿದೆ-ಮುಖ್ಯವಾಗಿ ಅದರ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಲು ಕಾರ್ಪೊರೇಟ್ ವಲಯವು ಕಾನೂನಿಗೆ ಅನುಸಾರವಾಗಿದೆ. ಇದು ಮುಖ್ಯವಾಗಿ ಕೈಗಾರಿಕಾ ಮತ್ತು ಸೇವಾ ಕ್ಷೇತ್ರದಲ್ಲಿ ಭಾರತೀಯ ಉದ್ಯಮಗಳ ನಿಯಂತ್ರಣಕ್ಕೆ ಕಾರಣವಾಗಿದೆ. ಸಚಿವಾಲಯವನ್ನು ಹೆಚ್ಚಾಗಿ ಭಾರತೀಯ ಕಾರ್ಪೊರೇಟ್ ಕಾನೂನು ಸೇವಾ ಅಧಿಕಾರಿಗಳ ಕೇಡರ್ ಒದಗಿಸುತ್ತದೆ. ಯುಪಿಎಸ್ಸಿ ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯ ...

                                               

ಜೆನಿಲಿಯಾ ಡಿಸೋಜ

ಜೆನಿಲಿಯಾ ಡಿಸೋಜ ಇವರು ಭಾರತದ ಪ್ರಸದ್ದ ನಟಿಯರಲ್ಲಿ ಒಬ್ಬರು. ಇವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮತ್ತು ಬಾಲಿವುಡ್ ಚಿತ್ರಗಳಲ್ಲಿ ತೆರೆಕಂಡರು. ಪಾರ್ಕರ್ ಪೆನ್ನಲ್ಲಿ ಅಮಿತಾಬಚನ್ ಅವರ ಜೊತೆ ಜಾಹಿರಾತು ನಟನೆಗೆ ಆಕರ್ಶಿತರಗಿ, ಮೆಚ್ಚುಗೆಯನ್ನು ಪಡೆದರು. ನಂತರ ೨೦೦೩ರಲ್ಲಿ ಜೆನಿಲಿಯಾರವರು ವ್ರತ್ತಿಜೀವನವನ್ನು ತುಜೆ ಮೇರಿ ಕಸಮ್ ನ ಸಾಧನೆಯೊಂದಿಗೆ ಪ್ರಾರಂಭಿಸಿದರು. ಅದೇ ಸಮಯದಲ್ಲಿ ಇವರು ಬಾಯ್ಸ್ ಎನ್ನುವ ಚಿತ್ರದೊಂದಿಗೆ ಪ್ರಸಿದ್ಧಿಯಾಗಿದ್ದರು. ನಂತರ ೨೦೦೩-೨೦೦೫ರ ಸಮಯದಲ್ಲಿ ಜೆನಿಲಿಯಾ ತೆಲುಗು ಚಿತ್ರರಂಗದಲ್ಲಿ ನಟನೆಯನ್ನು ಮುಂದುವರಿಸಿದರು. ಜೆನಿಲಿಯಾ ಮೊಟ್ಟಮೊದಲಿಗೆ ೨೦೦೬ ರಲ್ಲಿ ರೋಮಾಂಚಕವಾದ ತೆಲುಗು ಚಿತ್ರವಾದ ಬೊಮ್ಮರಿಲ್ಲುಗೆ, ಫಿಲ್ಮ್ ಫೇರ್ ಅವಾರ್ಡನ್ನು ಗಳಿಸಿಕೊಂಡರು. ಇದೇ ಸಿನಿಮಾ ತಮಿಳಿನಲ್ಲಿ ಸಂತೋಷ್ ಸುಬ್ರಹ್ಮಣಿಯಮ ...

                                               

ಆದಿ ಪರಾಶಕ್ತಿ

ಆದಿ ಪರಾಶಕ್ತಿ ಹಿಂದೂ ಧರ್ಮದ ಶಕ್ತಿ ಪಂಥದಲ್ಲಿ ಸರ್ವೋಚ್ಚ ಎಂದು ಪರಿಗಣಿಸಲಾಗಿದೆ. ಆಕೆಯನ್ನು ಪರಮ ಶಕ್ತಿ, ಆದಿ ಶಕ್ತಿ, ಮಹಾಶಕ್ತಿ, ಮಹಾದೇವಿ, ಮಹಾಗೌರಿ, ಮಹಾಸರಸ್ವತಿ, ಮಹಾಲಕ್ಷ್ಮಿ, ಮಹಾಕಾಳಿ, ಸತ್ಯಂ ಶಕ್ತಿ ಅಥವಾ ಸರಳವಾಗಿ ಶಕ್ತಿ. ಪರಮ ಎಂದರೆ ಸಂಪೂರ್ಣ. ಸತ್ಯ ಎಂದರೆ ಅನೇಕ ಶಕ್ತಿ ಪಠ್ಯಗಳ ಪ್ರಕಾರ ಸತ್ಯ. ಆದಿ ಪರಶಕ್ತಿ ಇಡೀ ಬ್ರಹ್ಮಾಂಡದ ಮೂಲ ಸೃಷ್ಟಿಕರ್ತ, ವೀಕ್ಷಕ ಮತ್ತು ವಿನಾಶಕ ಎಂದು ದೇವಿ-ಭಾಗವತ ಪುರಾಣ ಹೇಳುತ್ತದೆ. ಪಾರ್ವತಿ ದೇವಿಯು ಆದಿ ಪರಶಕ್ತಿಯ ಸಂಪೂರ್ಣ ಮತ್ತು ನೇರ ಅವತಾರ ಎಂದು ನಂಬಲಾಗಿದೆ. ಆದಿ ಪರಶಕ್ತಿ ಎಂದರೆ "ಮೊದಲ ಸರ್ವೋಚ್ಚ ಶಕ್ತಿ". ಆದಿ ಎಂದರೆ "ಪ್ರಾರಂಭ" ಎಂದರ್ಥ. ಶಕ್ತಿ ಎಂದರೆ ಭೌತಿಕ ವಿಶ್ವವನ್ನು ಮೀರಿದ ಶಕ್ತಿಯನ್ನು ಸೂಚಿಸುತ್ತದೆ. ಈ ಪದವು ಮೂಲದಿಂದ ಬಂದಿದೆ.

                                               

ಹಿಪ್ ಹಾಪ್ ತಮಿಳ

ಆಧಿ ಸಿನಿಮಾ ಅಥವಾ ಸಂಗೀತದ ಬಗ್ಗೆ ಆರಿತ ಕುಟುಂಬದಲ್ಲಿ ಜನಿಸಿದವರಲ್ಲಾ. ತನ್ನ ತಂದೆ ಭಾರತಿಯಾರ್ ವಿಶ್ವವಿದ್ಯಾನಿಲಯದಲ್ಲಿ ಕೆಲಸಮಾಡುತ್ತಿದರು. ಆಧಿ ಅವರಾ ತಂದೆ ಆರಂಭದಲ್ಲಿ ಆಧಿ ಸಂಗೀತವನ್ನು ತನ್ನ ವೃತ್ತಿಯನ್ನಾಗಿ ಆರಿಸಿ ಕೊಳ್ಳುವುದು ಇಷ್ಟವಿರಲಿಲ್ಲ. ಆದರಿಂದ ಅವನ ಕಲ್ಪನೆಯನ್ನು ವಿರೋಧಿಸಿದರು. ಆಧಿ ಸಂಗೀತದಲ್ಲಿ ಯಾವುದೇ ಶಿಕ್ಷಣ ಪಡೆದಿರಲಿಲ್ಲಾ. ಆಧಿ ಅವರು ಸ್ವತಃ ತನ್ನ ಆಸಕ್ತಿಯನ್ನು ಬೆಳೆಸಿಕೊಡರು.ಆಧಿಗೆ ಸಂಗೀತದ ಆಸಕ್ತಿ ಪ್ರರಂಭಿಸಿದು ಹತ್ತನೆಯ ತರಗತಿಯಲ್ಲಿ ಅವರು ಚಿಕ್ಕ ಚಿಕ್ಕ ರಾಪ್ ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡುತ್ತಿದರು. ಇವರ ರಾಪ್ ಕೇಳಿದ ಜನರು ಪ್ರೋತ್ಸಾಹ ನೀಡಿದರು. ಆಧಿಯ ಸ್ನೇಹಿತರು ಪ್ರೋತ್ಸಾಹಿಸಿದರು. ತಮಿಳಿನಲ್ಲಿ ರಾಪಿಂಗ್ ಆರಂಭಿಸಲು ತುಂಬಾ ಜನ ಆಸಕ್ತಿ ನೀಡಿದರು. ಆದರೆ ಆಧಿಯ ತಂದೆಗೆ ತನ್ನ ಮಗ ಉನ್ನತ ಶಿ ...

                                               

ದೇವತಾರ್ಚನ ವಿಧಿ

|| ಶ್ರೀ ಕೃಷ್ಣಾರ್ಪಣಮಸ್ತು || ಇತಿ ಸಂಕ್ಷಿಪ್ತ ದೇವತಾರ್ಚನ ವಿಧಿಃ ||

                                     

ⓘ ಸತ್ಯಂ

ಈ ಲೇಖನವು ಸಂಗೀತ ನಿರ್ದೇಶಕ ಸತ್ಯಂ ಅವರ ಬಗ್ಗೆ. ಸತ್ಯಂ - ಮಾಹಿತಿ ತಂತ್ರಜ್ಞಾನ ಕಂಪನಿಯ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ.

ಸತ್ಯಂ - ಕನ್ನಡ ಚಿತ್ರರಂಗದಲ್ಲಿ ಖ್ಯಾತ ಸಂಗೀತ ನಿರ್ದೇಶಕರಾಗಿದ್ದರು.

ಹಾರ್ಮೋನಿಯಂನಿಂದ ಸಂಗೀತ ನೀಡಿದವರಿದ್ದಾರೆ,ವೀಣೆಯಿಂದ ಸಂಗೀತ ನೀಡಿದವರಿದ್ದಾರೆ,ಗಿಟಾರದಿಂದಲೂ ಸಂಗೀತ ನೀಡಿದವರಿದ್ದಾರೆ.ಆದರೆ "ಡೋಲಕ್" ನಿಂದ ಸಂಗೀತ ನಿರ್ದೇಶನ ಮಾಡಿದ ಏಕೈಕ ಸಂಗೀತ ನಿರ್ದೇಶಕರೆಂದರೆ "ಸತ್ಯಂ".

ಸತ್ಯಂ ಮೂಲತ: ತೆಲುಗಿನವರು.ಸತ್ಯಂ ಅವರ ಪೂರ್ಣ ಹೆಸರು"ಚೌಳ್ಳ ಪಿಳ್ಳೆ ಸತ್ಯ ನಾರಾಯಣ ಶಾಸ್ತ್ರಿ ಜನಿಸಿದ್ದು ೧೯೩೫ ಮೇ ೧೭ ರಂದು ಆಂದ್ರ ಪ್ರದೇಶದ ವಿಜಯ ನಗರ ಜಿಲ್ಲೆಯ ಗಾದೆವಲಪ ಗ್ರಾಮದಲ್ಲಿ.ತಾಯಿ ಕಾಂತಮ್ಮ ಉತ್ತಮ ಹಾಡುಗಾರ್ತಿ,ತಂದೆ ಹನುಮಂತ ಶಾಸ್ತ್ರಿಗಳು ಕೂಡಾ ಭಾಗವತ ಮೇಳಗಳಿಗೆ ಪ್ರಸಿದ್ಧರಾದವರು.ಅವರ ಹಾಡೆಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು.ತಂದೆ ಹತೂರುಗಳ ಜಹಗೀರುದಾರರು.ವೈಭವದ ಬಾಲ್ಯವನ್ನು ಕಂಡ ಸತ್ಯಂ ಅವರಿಗೆ ಸಂಗೀತದ ಹುಚ್ಚ್ಚು ಎಳವೆಯಿಂದಲೇ ಹಿಡಿಯಿತು.ತಂದೆಗಾದರೂ ಮಗ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕೆಂಬ ಕನಸು.ಅದ್ದರೆ ಸತ್ಯಂ ತಲೆಗೆ ವಿದ್ಯೆ ಹತ್ತಲಿಲ್ಲ,ತಂದೆ ಬಿಡಲಿಲ್ಲ.ಪ್ರೌಡಶಾಲೆಯ ಎರಡನೇ ವಷ೯ದಲ್ಲಿ ನಪಾಸಾದಾಗ ತಂದೆಯ ಉಗ್ರ ಶಿಕ್ಷೆಯ ಅನುಭವಗಳನ್ನು ಪಡೆದಿದ್ದ ಬಾಲಕ ಸತ್ಯಂ ಮನೆಬಿಟ್ಟು ಓಡಿದ.ಸಕಲ ಐಶ್ವರ್ಯದ ಬದುಕಿಗೆ ತಿಲಾಂಜಲಿ ನೀಡಿ ಸೇರಿದ್ದು ಕಾಕಿನಾಡದ "ಹ್ಯಾಪಿ ಹೋಂ" ಅನ್ನು.

ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಊಟ ಬಟ್ಟೆ ನೀಡಿ ಸಂಗೀತ ಕಲಿಸಲಾಗುತಿತ್ತು.ಅನಾಥ ಎಂದು ಹೇಳಿ ಸತ್ಯಂ ಅಲ್ಲಿ ಪ್ರವೇಶ ಪಡೆದಿದ್ದರು.ಇದೇ ಸಂಸ್ಥೆಯಲ್ಲಿ ಎಸ್.ವಿ.ರಂಗರಾವ್,ಅಂಜಲೀ ದೇವಿ,ರೇಲಂಗಿ ಮೊದಲಾದವರಿದ್ದರು.ಅವರಲ್ಲರ ಒಡನಾಟ ಸತ್ಯಂ ಕಲಾಭಿರುಚಿ ವಿಕಸಿತವಾಗಲು ಕಾರಣವಾಯಿತು.ಅಲ್ಲಿ ಪರಿಚಿತರಾದ ಒಬ್ಬ ಮಹನೀಯರೆಂದರೆ ಆದಿನಾರಾಯಣರಾವ್.ಅವರಾಗಲೇ "ಅಂಜಲಿ"ಚಿತ್ರದ ಕುಹೂ ಕುಹೂ ಬೋಲೆ ಕೊಯಲಿಯಾ ಅಮರಗೀತೆಯಿಂದ ಪ್ರಸಿದ್ದರಾಗಿದ್ದರು.ಅವರು ಮುಂದೆ "ಮಯಾಲಮಾರಿ"ಸ್ವಂತ ಚಿತ್ರ ತಯಾರಿಸಲು ನಿರ್ದರಿಸಿದಾಗ ಸತ್ಯಂ ಅವರನ್ನು ಕರೆಸಿಕೊಂಡರು,ಆ ಚಿತ್ರದಲ್ಲಿ ಅವರದು ಸಹಾಯಕ ನಿರ್ದೇಶಕನಿಂದ ಹಿಡಿದು ವಾದ್ಯಗೋಷ್ಠಿ ನಿರ್ವಹಣೆಯವರೆಗೆ ದಶವಾತರ. ಒಮ್ಮೆ ಢೋಲಕ್ ವಾದಕ ಬಾರದಾಗ ಸತ್ಯಂ ತಾವೇ ನುಡಿಸಿದರು.ಅದಕ್ಕೆ ಪ್ರಸಿದ್ದರೂ ಆದರು.ಹಲವು ಹಿಂದಿ ಚಿತ್ರಗಳಿಗೆ ಢೋಲಕ್ ನುಡಿಸಿದರು. ಆದಿನಾರಾಯಣರಾವ್ ಅವರ "ಸ್ವರ್ಣ ಸುಂದರಿ"ಯಲ್ಲಂತೂ ಅವರ ಢೋಲಕ್ ವಾದನ ಪರಿಣಾಮಕಾರಿಯಾಗಿತ್ತು.

ಮದರಾಸಿನಲ್ಲಿನ "ಫಿಲಂ ಸೆಂಟರ್" ಕಲಾಪ್ರೇಮಿಗಳ ನೆಚ್ಹಿನ ತಾಣವಾಗಿತ್ತು.ಎಲ್ಲಾ ಬಾಷೆಯ ಚಿತ್ರ ನಿರ್ಮಾತೃಗಳು ಅಲ್ಲಿ ಸೇರುತ್ತಿದ್ದರು.ಅಲ್ಲಿಗೆ ಬಂದಿದ್ದ ಹೋಟೆಲ್ ಉದ್ಯಮಿ ಎಂ.ಎಸ್.ನಾಯಕ್ ಅವರಿಗೆ ಸತ್ಯಂ ಖ್ಯಾತಿ ತಿಳಿಯಿತು.ಅವರಾಗ ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದರು.ಅದಕ್ಕೇ ಸತ್ಯಂ ಅವರನ್ನೇ ಏಕೆ ಸಂಗೀತ ನಿರ್ದೇಶಕನಾಗಿ ಬಳಸಬಾರದು ಎಂದು ಯೋಚಿಸಿದರು.ಡೋಲು ವಾದನಕ್ಕೇ ಸೀಮಿತರಾಗಿದ್ದ ಸತ್ಯಂ ಅವರಿಗೂ ಬದಲಾವಣೆ ಬೇಕಾಗಿತ್ತು.ಹೀಗೆ ೧೯೬೩ರಲ್ಲಿ ತೆರೆಕಂಡ"ಶ್ರೀ ರಾಮಾಂಜನೇಯ ಯುದ್ದ ಚಿತ್ರದ ಮೂಲಕ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾದರು.ಈ ಚಿತ್ರದ ಹನುಮನ ಪ್ರಾಣ",ಜಗದೀಶನಾಡುವ ಜಗವೇ ನಾಟಕ ರಂಗ", "ಜಯ ರಾಮ ಜಯ ಘನ ಶ್ಯಾಮ "ಮೊದಲಾದ ಗೀತೆಗಳು ಪ್ರಸಿದ್ದವಾದವು. ಮುಂದೆ ಸತ್ಯಂ ಕನ್ನಡದಲ್ಲಿ ಗಟ್ಟಿ ಸಂಗೀತ ನಿರ್ದೇಶಕರಾಗಿ ನೆಲೆ ನಿಂತರು."ಒಂದೇ ಬಳ್ಳಿಯ ಹೂವುಗಳು ಚಿತ್ರದಲ್ಲಿ ಸತ್ಯಂ ತಮ್ಮ ಹಿಂದಿ ಚಿತ್ರರಂಗದ ನಂಟನ್ನು ಬಳಸಿ "ಮಹಮದ್ ರಫಿ ಅವರಿಂದ "ನೀನೆಲ್ಲಿ ನಡೆವೆ ದೂರ "ಗೀತೆಯನ್ನು ಹಾಡಿಸಿದರು.ಗಾಂದಿ ನಗರ ಚಿತ್ರದ "ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ ಹಾಡು ಅತ್ಯಂತ ಜನಪ್ರಿಯವಾಯಿತು.

ಕನ್ನಡಕ್ಕೆ ಬಂದು ಐದು ವರ್ಷದ ನಂತರ ೧೯೬೮ ರಲ್ಲಿ ಸತ್ಯಂ "ಪಾಲ ಮನಸಲು"ಚಿತ್ರಕ್ಕೆ ಸಂಗೀತ ನೀಡುವ ಮೂಲಕ ತೆಲುಗು ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.ಆದರೆ ಅಲ್ಲಿ ಬಹು ಬೇಡಿಕೆಯ ಸಂಗೀತ ನಿರ್ದೇಶಕರಾದರು. ೩೬ ವರ್ಷಗಳಲ್ಲಿ ೩೧೨ ತೆಲುಗು,೧೩೧ ಕನ್ನಡ,೧೦ ತಮಿಳು,ತಲಾ ಒಂದೊಂದು ಮಲಯಾಳಿ ಮತ್ತು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿದ್ದ ಸತ್ಯಂ ಬಡ ನಿರ್ಮಾಪಕರ ಪಾಲಿಗೆ ಕಾಮಧೇನುವಾಗುತಿದ್ದರು.ಹಣ ಎಷ್ಟೇ ಕಡಿಮೆ ಕೊಟ್ಟರೂ ಅವರ ಸಂಗೀತದಲ್ಲಿನ ತಾಜಾತನ ಬದಲಾಗುತ್ತಿರಲಿಲ್ಲ.

ರೌಡಿ ರಂಗಣ್ಣ, ಕ್ರಾಂತಿವೀರ, ನಾಗಕನ್ಯೆ, ಅಪರಾದಿ, ನಾಗರಹೊಳೆ, ಸಹೋದರರ ಸವಾಲ್,ಸೀತಾ ರಾಮು,ಸವತಿಯ ನೆರಳು, ಆರದ ಗಾಯ,ತಾಯಿಯ ಮಡಿಲಲ್ಲಿ,ಕೆರಳಿದ ಸಿಂಹ, ಸಾಹಸಸಿಂಹ, ತಿರುಗು ಬಾಣ,ಗಂಡ ಭೇರುಂಡ, ಮೊದಲಾದ ಚಿತ್ರಗಳಿಗೆ ಅವರು ಕೊಟ್ಟ ಸಂಗೀತ ಇಂದಿಗೂ ಗಮನಾರ್ಹವಾಗಿದೆ,ಅದರ ಗೀತೆಗಳು ಪ್ರಸಿದ್ದವಾಗಿವೆ.೧೯೮೯ರ ಜನವರಿ ೧೨ ರಂದು ತಮ್ಮ ೫೪ ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಶಿವರಂಜಿನಿ,ಕಲ್ಯಾಣಿ,ಮಧ್ಯಮಾವತಿ ರಾಗಗಳನ್ನು ಹೊಸ ನೆಲೆಗೆ ಒಯ್ದಿದ್ದ ಸತ್ಯಂ "ಸೆಕೆಂಡ್ ಫಾಲೋ ಎಂಬ ಸಂಗೀತ ಸಂಯೋಜನೆಯ ಹೊಸ ಸಾಧ್ಯತೆಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದರು.ಅನಂತ ಕನಸುಗಳನ್ನು ಹೊತ್ತ,ಹತ್ತಾರು ಯೋಜನೆಗಳನ್ನು ರೂಪಿಸಿದ್ದ ಅವರ ಬದುಕು ಅಪೂರ್ಣವಾದದ್ದು ಭಾರತೀಯ ಚಿತ್ರ ರಂಗಕ್ಕೇ ದೊಡ್ಡ ನಷ್ಟವೆನ್ನ ಬಹುದು. "ನಮನ

                                               

ಸಂಧ್ಯಾವಂದನೆ ಮಂತ್ರ

ಹವ್ಯಕ ನಿತ್ಯ ಕರ್ಮಗಳು ದೇವತಾರ್ಚನ ವಿಧಿ ಶ್ರೀ ಸಿದ್ಧಿ ವಿನಾಯಕ ಗಾಯತ್ರಿ ಮತ್ತು ಗಾಯತ್ರೀ ಪುಟ೨ ಅರ್ಥ- ವಿವರಣೆ ಸಂಧ್ಯಾವಂದನ ಪೂರ್ಣಪಾಠ ಟಿಪ್ಪಣಿ, ಅರ್ಥ, ಸೂಚನೆ ಗಳೊಂದಿಗೆ. ಟಿಪ್ಪಣಿ:- ಅಭ್ಯಾಸವಾದರೆ ಈಕ್ರಮದ ಸಂಧ್ಯಾವಂದನೆಯನ್ನು ೧೦-೧೨ ನಿಮಿಷಗಳಲ್ಲಿ ಮಾಡಿ ಮುಗಿಸಬಹುದು. ಶಾಲೆಗೆ ಹೋಗುವ ಮಕ್ಕಳಿಗಾಗಿ ಮುಖ್ಯಾಂಶಗಳನ್ನು ಮಾತ್ರಾ ಸಂಗ್ರಹಿಸಿದೆ ಮತ್ತುವಿವರಣೆ ಕೊಟ್ಟಿದೆ. ಚಂ. ಸಂಕ್ಷಿಪ್ತ ಪೂಜಾಕ್ರಮ ಹೆಚ್ಚಿನ ವಿಷಯಕ್ಕೆ ಹವ್ಯಕ | ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿ ಟಿಪ್ಪಣಿ ರಹಿತ

                                               

ಕಾಡ್ಗಿಚ್ಚು (ಚಲನಚಿತ್ರ)

ಕಾಡ್ಗಿಚ್ಚು, ಎಸ್.ಆರ್.ಸಿಂಗ್ ನಿರ್ದೇಶನ ಮತ್ತು ಮೋಹಿನಿ ಪ್ರೊಡಕ್ಷನ್ಸ್ ನಿರ್ಮಾಪಣ ಮಾಡಿರುವ ೧೯೭೭ ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್ ಮತ್ತು ಉದಯಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಡ್ಗಿಚ್ಚು ೧೯೭೭ರಲ್ಲಿ ತೆರೆ ಕಂಡ ಒಂದು ಕನ್ನಡ ಚಲನಚಿತ್ರ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →