Топ-100
Back

ⓘ ಶ್ರುತಿ, ನಟಿ. ಶ್ರುತಿ ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಕನ್ನಡ ಚಿತ್ರರಂಗದ ಪ್ರಧಾನ ನಟಿಯರಲ್ಲೊಬ್ಬರು. ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉ ..                                               

ಹರಿಪ್ರಿಯಾ

ಶ್ರುತಿ ಎಂಬ ಮೂಲ ಹೆಸರನ್ನುಳ್ಳ, ಚಲನಚಿತ್ರರಂಗದಲ್ಲಿ ಹರಿಪ್ರಿಯಾ ಎಂಬ ಹೆಸರಿನಿಂದ ಪ್ರಸಿದ್ಧರಾದ ಈಕೆ ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ. ನಟಿಯಾಗಿ ಅವರು ದಕ್ಷಿಣ ಭಾರತೀಯ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

                                               

ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ದಕ್ಷಿಣ ಭಾರತದ ಭಾರತೀಯ ಚಲನಚಿತ್ರ ನಟಿ. ಮಲಯಾಳಂ ಚಲನಚಿತ್ರ ಪ್ರೇಮಂ ನಲ್ಲಿ ಮೇರಿ ಜಾರ್ಜ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸಥಮಾನಂ ಭವತಿ ನಲ್ಲಿ ನಿತ್ಯಾ ಪಾತ್ರದಲ್ಲಿ, ನಟಸಾರ್ವಭೌಮನಲ್ಲಿ ಶ್ರುತಿ ಮತ್ತು ಮಹಾ ಪಾತ್ರದಲ್ಲಿ ವುನ್ನಾಧಿ ಒಕಟೆ ಜಿಂದಗಿ ರಲ್ಲಿ ಕಾಣಿಸಿಕೊಂಡಿದ್ದಾರೆ.

                                               

ದಿಶಾ ಪಾಂಡೆ

ದಿಶಾ ಪಾಂಡೆ ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ. ಅವರು ತಮಿಳು ಭಾಷೆಗಳಲ್ಲಿ, ಮುಖ್ಯವಾಗಿ ತಮಿಜ್ ಪದಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

                                     

ⓘ ಶ್ರುತಿ (ನಟಿ)

ಶ್ರುತಿ ದಕ್ಷಿಣ ಭಾರತ ಚಿತ್ರರಂಗದ, ಅದರಲ್ಲೂ ಕನ್ನಡ ಚಿತ್ರರಂಗದ ಪ್ರಧಾನ ನಟಿಯರಲ್ಲೊಬ್ಬರು.

ಚಿತ್ರರಂಗದಲ್ಲಿ ಬಂದು ಹೋಗುವ ಕಲಾವಿದರ ಸಂಖ್ಯೆ ಅಪಾರ. ಆದರೆ ಅಲ್ಲಿ ಸುದೀರ್ಘ ಕಾಲ ಉಳಿಯುವವರು ತುಂಬಾ ಕಡಿಮೆ. ಅದರಲ್ಲೂ ಕನ್ನಡ ಚಿತ್ರರಂಗದಂತಹ ಸೀಮಿತ ಮಾರುಕಟ್ಟೆಯ ಪರಿಮಿತಿಗಳಲ್ಲಿ ಕೆಲವೊಂದು ನಾಯಕನಟರುಗಳು ಹಲವು ದಶಕಗಳು ನೆಲೆ ನಿಂತಿದ್ದಾಗ ಇಲ್ಲಿಗೆ ಹೆಚ್ಚು ಬಂದು ಹೋಗುತ್ತಿದ್ದವರು ಇತರ ಭಾಷೆಗಳ ಕೆಲವೊಂದು ಪ್ರಸಿದ್ಧ ಚಿತ್ರನಟಿಯರು, ಇಲ್ಲವೇ ಕೆಲವೊಂದು ಪರಭಾಷಾ ನಟಿಯರು. ಇಂತಹವರ ನಡುವೆ ಇಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಸಿಕರ ಹೃದಯದಲ್ಲಿ ನೆಲೆನಿಂತವರಲ್ಲಿ ಕನ್ನಡದ ಸ್ಥಳೀಯ ಪ್ರತಿಭೆ, ಲಕ್ಷಣವಾದ ಹುಡುಗಿ ಶ್ರುತಿ ಪ್ರಮುಖರು. ಸುಮಾರು 120 ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿರುವ ಶ್ರುತಿ ಕನ್ನಡ ಚಿತ್ರರಂಗದ ಸ್ಥಳೀಯ ಪ್ರತಿಭೆಗಳಲ್ಲಿ ಪ್ರಮುಖರು.

                                     

1. ಚಿತ್ರ ಜೀವನ

ವೀರ ಸಿಂಧೂರ ಲಕ್ಷ್ಮಣ ಚಿತ್ರದಲ್ಲಿ ಒಂದು ವರ್ಷದ ಮಗುವಾಗಿದ್ದಾಗಲೇ ಪರದೆಯ ಮೇಲೆ ಮೂಡಿದ್ದ ಮಗು ಇವರು. ಕಲಾವಿದರ ಕುಟಂಬದಲ್ಲಿ ಬೆಳೆದು ಬಂದ ಹುಡುಗಿ ಪ್ರಿಯದರ್ಶಿನಿ ಕೆಲವೊಂದು ಚಿತ್ರಗಳಲ್ಲಿ ಪುಟ್ಟ ಪುಟ್ಟ ಒಂದೆರಡು ಚಿತ್ರಗಳಲ್ಲಿ ಪಾತ್ರವಹಿಸಿದ ನಂತರ ೧೯೯೦ರ ವರ್ಷದಲ್ಲಿ ತೆರೆಕಂಡ ದ್ವಾರಕೀಶರು ನಿರ್ಮಿಸಿದ ‘ಶ್ರುತಿ’ ಚಿತ್ರದಲ್ಲಿ ‘ಹಾಡೊಂದ ಹಾಡುವೆನು ಹೃದಯ ರಾಗದಲ್ಲಿ’ ಎಂದು ಹಾಡುತ್ತಾ ಬಂದು ಆ ಚಿತ್ರದ ಯಶಸ್ಸಿನ ಮೂಲಕ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲೊಬ್ಬರಾದರು. ಆ ಚಿತ್ರದ ನಾಯಕಿಯಾದಾಗ ಅವರಿಗೆ ಇನ್ನೂ ಹದಿನಾಲ್ಕು ಹದಿನೈದು ವರ್ಷ ವಯಸ್ಸು.

                                     

2. ವೈವಿಧ್ಯತೆ

ಒಂದೇ ರೀತಿಯ ಏಕತಾನತೆಗಳ ಪಾತ್ರಗಳು ವೃತ್ತಿಯಾಗಿ ದುಡಿಯುವ ಕಲಾವಿದರಿಗೆ ಒಂದು ರೀತಿಯ ಅನಿವಾರ್ಯ. ಹಾಗೆಂದ ಮಾತ್ರಕ್ಕೆ ಅದು ಅವರಿಗಿರುವ ಸೀಮಿತ ಸಾಮರ್ಥ್ಯ ಎಂದೇನಲ್ಲ. ಈ ಮಾತು ಶ್ರುತಿ ಅವರಿಗೆ ಹೆಚ್ಚು ಅನ್ವಯಿಸುತ್ತದೆ. ಡಾ. ಅಶೋಕ್ ಪೈ ಅವರ ಕಥೆಯ ಆಧಾರಿತ ಸುರೇಶ ಹೆಬ್ಳೀಕರ್ ನಿರ್ದೇಶನದ ‘ಆಘಾತ’; ತಮಿಳಿನಲ್ಲಿ ಶ್ರೇಷ್ಠ ನಿರ್ದೇಶಕ ಕೆ. ಬಾಲಚಂದರ್ ಅವರು ನಿರ್ದೇಶಿಸಿ ತಮಿಳು ಚಿತ್ರರಂಗದಲ್ಲಿ ಶ್ರುತಿ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ತಂದು ಕೊಟ್ಟ ‘ಕಲ್ಕಿ’ ; ವಿಷ್ಣುವರ್ಧನ್ ಅವರ ಜೊತೆ ನಟಿಸಿದ ಸುಂದರ ಚಿತ್ರಗಳಿಗೆ ಸೇರುವ ‘ವೀರಪ್ಪನಾಯ್ಕ’, ‘ಸೂರಪ್ಪ’; ಕವಿತಾ ಲಂಕೇಶ್ ಅವರ ‘ಅವ್ವ’, ರಾಷ್ಟ್ರ ಪ್ರಶಸ್ತಿ ‘ಪುಟ್ಟಕ್ಕನ ಹೈವೇ’ ಮುಂತಾದವು ಶ್ರುತಿ ಅವರಿಗಿರುವ ಅಭಿನಯ ಶಕ್ತಿಯನ್ನು ಸಾರಿಹೇಳುತ್ತವೆ.

‘ರಾಮ, ಶ್ಯಾಮ, ಭಾಮ’ ಚಿತ್ರದಲ್ಲಿ ಕಮಲ ಹಾಸನ್ ಅವರೊಂದಿಗೆ ಸರಿ ಸಮಾನವಾಗಿ, ಸುಂದರವಾಗಿ, ಲೀಲಾಜಾಲವಾಗಿ ನಟಿಸಿದ್ದು ಶ್ರುತಿ ಅವರ ನಟನಾ ಸಾಮರ್ಥ್ಯವನ್ನು ಮತ್ತಷ್ಟು ಸಾರಿ ಹೇಳುತ್ತವೆ. ತಾವೇ ನಿರ್ಮಿಸಿದ ‘ಗಟ್ಟಿಮೇಳ’ ಚಿತ್ರದಲ್ಲಿ ಚಿತ್ರಕಥೆಗೂ ಅವರು ಸಾಕಷ್ಟು ಕೆಲಸ ಮಾಡಿದ್ದರು.

                                     

3. ಬದುಕಿನ ಬಗ್ಗೆ

ತಮ್ಮ ಬದುಕಿನಲ್ಲಿ ಮೂಡಿದ ಹಲವಾರು ಗೊಂದಲಗಳ ಬಗ್ಗೆ ಶ್ರುತಿ ಅವರು ಹೇಳಿದ ಮಾತಿವು." ನಾನು ಯಶಸ್ಸು ಬಂದಾಗ ಹಿಗ್ಗಲಿಲ್ಲ, ಕಷ್ಟ ಬಂದಾಗ ಮೂಲೆ ಸೇರಲಿಲ್ಲ. ಕಷ್ಟ ಎಂಬುದು ಪ್ರತಿಯೊಬ್ಬರ ಬದುಕಿನಲ್ಲೂ ಬರುತ್ತದೆ. ಬದುಕಿನಲ್ಲಿ ನನ್ನ ಕರ್ತ್ಯವ್ಯಗಳೇನು ಉಂಟೋ ಅದರ ಬಗ್ಗೆ ಶ್ರದ್ಧಾಪೂರ್ವಕವಾಗಿ ಮುನ್ನಡೆಯುತ್ತೇನೆ”.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →