Топ-100
Back

ⓘ ಭಾರತೀಯ ಸಾಹಿತ್ಯ ಪದವು ೧೯೪೭ರ ವರೆಗೆ ಭಾರತೀಯ ಉಪಖಂಡದಲ್ಲಿ ಮತ್ತು ಅಲ್ಲಿಂದ ಮುಂದೆ ಭಾರತದ ಗಣರಾಜ್ಯದಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ನಿರ್ದೇಶಿಸುತ್ತದೆ. ಭಾರತದ ಗಣರಾಜ್ಯವು ೨೨ ಅಧಿಕೃತವಾಗಿ ಮ ..                                               

ಭಾರತೀಯ ಕಾವ್ಯ ಮೀಮಾಂಸೆ

ಭಾರತೀಯ ಕಾವ್ಯಮೀಮಾಂಸೆಗೆ ಸುಮಾರು ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿದೆ. ಕವಿ ಮತ್ತು ಕಾವ್ಯದ ಲಕ್ಷಣಗಳು, ಕಾವ್ಯ ಪ್ರಭೇದಗಳು. ಕಾವ್ಯಾಲಂಕಾರಗಳು, ಕಾವ್ಯದ ವಸ್ತು ಇತ್ಯಾದಿ ಕಾವ್ಯನಿರ್ಮಿತಿಗೆ ಸಂಬಂಧಿಸಿದ ಮಹತ್ತ್ವದ ಅಂಶಗಳ ಶಾಸ್ತ್ರೀಯ ನಿರೂಪಣೆಯೇ ಕಾವ್ಯನಿಮೀಮಾಂಸೆ. ಇದನ್ನು ಅಲಂಕಾರ ಶಾಸ್ತ್ರವೆಂದೂ ಕರೆಯಲಾಗುತ್ತದೆ. ಪ್ರಾಚೀನ ಯುಗದಲ್ಲಿ ಅಲಂಕಾರಶಾಸ್ತ್ರವೆಂದರೆ ಪ್ರಧಾನವಾಗಿ ನಾಟ್ಯ ನೃತ್ಯ ಇತ್ಯಾದಿ ರಂಗ ಸಂಸ್ಕರಣ ಅಥವಾ ನಾಟ್ಯಕಲೆಯನ್ನು ಸರ್ವಾಂಗ ಸುಂದರವಾಗಿ ಮಾಡುವ ಒಂದು ಪರಿಷ್ಕಾರ ಶಾಸ್ತ್ರವಾಗಿದ್ದಿತು. ಕಾಲಕ್ರಮೇಣ ಇದು ಕಾವ್ಯಕಲೆಯನ್ನು ಪರಿಷ್ಕರಿಸುವ ಶಾಸ್ತ್ರವಾಗಿ ಪರಿಣಮಿಸಿತು. ಇದರ ಆರಂಭ ಯಾವಾಗ ಯಾರಿಂದ ಆಯಿತೆಂದು ಇತ್ಯರ್ಥಪಡಿಸುವುದು ಕಷ್ಟದ ಕೆಲಸ. ಸಾಹಿತ್ಯದಲ್ಲಿ ಸೌಂದರ್ಯೋಪಾಸನೆ ಪ್ರಾರಂಭವಾದಂದಿನಿಂದಲೂ ಪಂಡಿ ...

                                               

ವಿಮರ್ಶೆ

ವಿಮರ್ಶೆ ಯು ಒಂದು ಬೌದ್ಧಿಕ ಕ್ರಿಯೆ. ಯಾವುದೇ ಕೃತಿಯನ್ನು ತೂಗಿನೋಡಿ ಮೌಲ್ಯ ನಿರ್ಧರಿಸುವ ಸಾಮಥ್ರ್ಯ ಅಥವಾ ಕಲೆ. ಈ ಪದ ಗ್ರೀಕ್ ಮೂಲದ ಕ್ರಿನೈನ್‍ದಿಂದ ಬಂದದ್ದು. ಅಂದರೆ ಬೇರ್ಪಡಿಸು, ವಿವೇಕಿಸು, ವಿಶ್ಲೇಷಿಸು ಎಂದರ್ಥ. ಕ್ರಿಯಾಶೀಲ ಬರೆಹಗಾರರು, ಪ್ರಾರಂಭಿಕ ಬರೆಹಗಾರರು, ವೃತ್ತಿಶೀಲ ವಿಮರ್ಶಕರು ಎಲ್ಲರ ವಿಶ್ಲೇಷಣೆಯನ್ನು ವಿಮರ್ಶೆಯೆಂದೇ ಕರೆಯಲಾಗುತ್ತದೆ. ಇಂದು ಬಳಸುತ್ತಿರುವ ವಿಮರ್ಶೆ ಎಂಬ ಪದ ಇಂಗ್ಲಿಷ್‍ನ ಕ್ರಿಟಿಸಿಸಂ ಪದಕ್ಕೆ ಸಂವಾದಿ.

                                               

ಗೋಲ್ಡ್‌ಸ್ಟಕರ್, ಥಿಯಡೋರ್

ಜರ್ಮನಿಯ ಕೋನಿಷ್ಬರ್ಗ್ ನಗರದ ಯಹೂದಿ ಮನೆತನವೊಂದರಲ್ಲಿ ಜನಿಸಿದ ಈತ ವ್ಯಾಕರಣ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. ಮುಂದೆ ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿ, ಅದೇ ನಗರದ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ, ಇತಿಹಾಸ, ತತ್ತ್ವಶಾಸ್ತ್ರ ಮತ್ತು ಸಂಸ್ಕೃತ ಭಾಷೆಯನ್ನು ಅಭ್ಯಾಸ ಮಾಡಿ 1838ರಲ್ಲಿ ಪದವೀಧರನಾದ. ಅನಂತರ ಬಾನ್ ವಿಶ್ವವಿದ್ಯಾಲಯದಲ್ಲಿ ಅರಬ್ಬಿ, ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ವಿಷಯಗಳನ್ನು ತೆಗೆದುಕೊಂಡು ಎ.ಡಬ್ಲ್ಯು. ಫಾನ್ ಶ್ಲೆಗಲ್ ಮತ್ತು ಲ್ಯಾಸೆನ್ರವರಂಥ ಪ್ರಸಿದ್ಧ ವಿದ್ವಾಂಸರುಗಳ ಮಾರ್ಗದರ್ಶನದಲ್ಲಿ ಕೇವಲ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿಯನ್ನು 1840 ಪಡೆದ. 1842ರಿಂದ ಮೂರು ವರ್ಷಗಳ ಕಾಲ ಪ್ಯಾರಿಸಿನ ಪ್ರಸಿದ್ಧ ಸಂಸ್ಕೃತಜ್ಞ ಯೂಜಿನ್ ಬರ್ನೌಫ್ನಲ್ಲಿ ಸಂಸ್ಕೃತ ವ್ಯಾಕರಣ, ವೇದಾಂತ, ವೈದಿಕ ಸಾಹಿತ್ ...

                                               

ಪ್ರೇಮಚಂದ್

ಮುನ್ಷಿ ಪ್ರೇಮಚಂದ ರು ಭಾರತೀಯ ಸಾಹಿತ್ಯ ಲೋಕದಲ್ಲಿ ಮಹಾನ್ ಹೆಸರು. ಅವರ ಗೋದಾನ್, ಶತರಂಜ್ ಕೇ ಖಿಲಾಡಿ, ಕೃಷ್ಣ, ವರದಾನ್, ಸೋನೆ ಕೆ ವತನ್ ಮುಂತಾದ ಕಥೆ - ಕಾದಂಬರಿಗಳು ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳ ಸಾಲಿನಲ್ಲಿ ಚಿರವಿರಾಜಮಾನವಾದಂತಹವು. ಕನ್ನಡವನ್ನೂ ಒಳಗೊಂಡಂತೆ ಪ್ರೇಮಚಂದರ ಕೃತಿಗಳು ವಿಶ್ವದೆಲ್ಲೆಡೆಯ ಭಾಷೆಗಳಿಗೆ ತರ್ಜುಮೆಗೊಂಡು ಅಪಾರ ಜನಸ್ತೋಮದ ಮನಸೂರೆಗೊಂಡಿವೆ.

                                               

ಭಾರದ್ವಾಜ

ಭಾರದ್ವಾಜ ರು ಪ್ರಾಚೀನ ಭಾರತದ ಪೂಜನೀಯ ವೈದಿಕ ಋಷಿಗಳಲ್ಲಿ ಒಬ್ಬರು. ಇವರು ಹೆಸರುವಾಸಿ ವಿದ್ವಾಂಸ, ಅರ್ಥಶಾಸ್ತ್ರಜ್ಞ ಹಾಗೂ ಶ್ರೇಷ್ಠ ವೈದ್ಯನಾಗಿದ್ದರು. ಇವರು ಸಪ್ತರ್ಷಿಗಳಲ್ಲಿ ಒಬ್ಬರು. ಪ್ರಾಚೀನ ಭಾರತೀಯ ಸಾಹಿತ್ಯ, ಮುಖ್ಯವಾಗಿ ಪುರಾಣಗಳು ಹಾಗೂ ಋಗ್ವೇದದಲ್ಲಿ ಇವರ ಕೊಡುಗೆಗಳು ಅಂದಿನ ಭಾರತೀಯ ಸಮಾಜದಲ್ಲಿ ಒಳನೋಟ ನೀಡುವಲ್ಲಿ ಗಣನೀಯ ಪಾತ್ರ ವಹಿಸಿದವು. ಇವರು ಮತ್ತು ಇವರ ಶಿಷ್ಯವರ್ಗವು ಋಗ್ವೇದದ ಆರನೇ ಗ್ರಂಥದ ಲೇಖಕರು ಎಂದು ಪರಿಗಣಿಸಲಾಗಿದೆ. ಭಾರದ್ವಾಜರು ಪಾಂಡವರು ಹಾಗೂ ಕೌರವರಿಬ್ಬರಿಗೂ ಗುರುವಾಗಿದ್ದರು, ಮಹಾಭಾರತದ ಒಬ್ಬ ಮುಖ್ಯ ಪಾತ್ರನಾಗಿದ್ದ ಬ್ರಾಹ್ಮಣಯೋಧ ದ್ರೋಣನ ತಂದೆಯಾಗಿದ್ದರು. ಭಾರದ್ವಾಜರನ್ನು ವಿಶ್ವಾಸಾರ್ಹವಾದ ಪ್ರಾಚೀನ ಭಾರತೀಯ ವೈದ್ಯಕೀಯ ಪಠ್ಯವಾದ ಚರಕ ಸಂಹಿತಾದಲ್ಲೂ ಉಲ್ಲೇಖಿಸಲಾಗಿದೆ. ಮಹರ್ಷಿ ಭಾರದ್ವಾಜರನ್ನು ...

                                               

ಸರಸ್ವತಿ

‘ಸರಸ್ವತಿ’ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ, ಚತುರ್ಭುಜಗಳು, ಎರಡು ಕೈಗಳಲ್ಲಿ ವೀಣೆ, ಇನ್ನೊಂದರಲ್ಲಿ ಅಕ್ಷಮಾಲೆ, ನಾಲ್ಕನೆಯದರಲ್ಲಿ ಪುಸ್ತಕ. ಬಿಳಿ ತಾವರೆಯ ಮೇಲೆ ಅಥವ ಬಂಡೆಯ ಮೇಲೆ ಆಸೀನಳಾಗಿರುವ ಶ್ವೇತವಸ್ತ್ರ ಧಾರಿಣಿ, ಶುಭ್ರವರ್ಣದ ಧವಳಕೀರ್ತಿಯ ಸರಸ್ವತಿ ಚಿತ್ರ. ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ತರವಾದುದು.ನದಿ, ನದಿ ದೇವತೆ, ಶಾರದೆ, ವಾಗ್ದೇವತೆ, ವಿದ್ಯಾಧಿದೇವತೆ, ಜ್ಞಾನದೇವತೆ. ಹೀಗೆ ಹಲವಾರು ಸ್ವರೂಪಗಳಲ್ಲಿ ಸರಸ್ವತಿಯು ಪರಿಚಿತಳು. ಬ್ರಹ್ಮನ ಮಗಳೆಂದೂ, ಬ್ರಹ್ಮನ ಸೃಷ್ಟಿಯಾದ ವೇದಗಳಿಗೆ ಅಧಿದೇವತೆಯೆಂದೂ, ವೇದಮಾತೆಯೆಂದೂ ಸರಸ್ವತಿಯನ್ನು ಸ್ತುತಿಸಲಾಗಿದೆ. ಬ್ರಹ್ಮನ ಮಗಳು ಎಂಬ ಪರಿಕಲ್ಪನೆಯನ್ನು ಮೀರಿ, ಸರಸ್ವತಿಗೆ ‘ಬ್ರಹ್ಮನ ಶಕ್ತಿ’ ಎಂಬ ಸ್ವರೂಪವೂ ಬೆಳೆದು ಬಂದಿದೆ.

ಭಾರತೀಯ ಸಾಹಿತ್ಯ
                                     

ⓘ ಭಾರತೀಯ ಸಾಹಿತ್ಯ

ಭಾರತೀಯ ಸಾಹಿತ್ಯ ಪದವು ೧೯೪೭ರ ವರೆಗೆ ಭಾರತೀಯ ಉಪಖಂಡದಲ್ಲಿ ಮತ್ತು ಅಲ್ಲಿಂದ ಮುಂದೆ ಭಾರತದ ಗಣರಾಜ್ಯದಲ್ಲಿ ಸೃಷ್ಟಿಯಾದ ಸಾಹಿತ್ಯವನ್ನು ನಿರ್ದೇಶಿಸುತ್ತದೆ. ಭಾರತದ ಗಣರಾಜ್ಯವು ೨೨ ಅಧಿಕೃತವಾಗಿ ಮಾನ್ಯಮಾಡಲಾದ ಭಾಷೆಗಳನ್ನು ಹೊಂದಿದೆ.

ಭಾರತೀಯ ಸಾಹಿತ್ಯದ ಅತ್ಯಂತ ಮುಂಚಿನ ಗ್ರಂಥಗಳು ಮೌಖಿಕವಾಗಿ ಪ್ರಸಾರ ಮಾಡಲಾಗಿದ್ದವು. ಸಂಸ್ಕೃತ ಸಾಹಿತ್ಯವು ಕ್ರಿ.ಪೂ. ೧೫೦೦-ಕ್ರಿ.ಪೂ. ೧೨೦೦ರ ಕಾಲಮಾನದ ಧಾರ್ಮಿಕ ಋಕ್ಕುಗಳ ಸಂಗ್ರಹವಾದ ಋಗ್ವೇದದಿಂದ ಪ್ರಾರಂಭವಾಗುತ್ತದೆ.

                                     

1. ಹಿನ್ನಲೆ

ಭಾರತದ ಮೊಟ್ಟ ಮೊದಲಸಂಸ್ಕೃತ ಸಾಹಿತ್ಯ ಋಗ್ವೇದ ವರ್ಷ ೧೫೦೦ ರಿಂದ ೧೨೦೦ ಮಧ್ಯೆ ರಚನೆಯಾಗಿರಬಹುದಾದ, ಋಗ್ವೇದ ಮಂತ್ರಗಳನ್ನು ಒಳಗೊಂಡಿದೆ. ಸಂಸ್ಕೃತ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಮೊದಲ ಸಹಸ್ರಮಾನದ ಅಂತ್ಯದಲ್ಲಿ ರಚನೆಯಾಗಿರಬಹುದು ಎಂಬುದೊಂದು ಅಂದಾಜು. ಪ್ರಾಚೀನ ಸಂಸ್ಕೃತ ಸಾಹಿತ್ಯ ಮೊದಲ ಸಹಸ್ರಮಾನದ ಆರಂಭಿಕ ಶತಮಾನಗಳಲ್ಲಿ ಸಮೃದ್ಧವಾಗಿ ಬೆಳೆಯಿತು.

ತಮಿಳಿನ ಸಂಗಮ್‌ ಸಾಹಿತ್ಯ ಇದೇ ಹಂತದಲ್ಲಿ ರಚನೆಯಾಯಿತು. ಮಧ್ಯಕಾಲೀನ ಅವಧಿಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಾಹಿತ್ಯ ಕೃಷಿ ಆರಂಭವಾಯಿತು. ಕನ್ನಡದಲ್ಲಿ 9ನೇ ಶತಮಾನದಲ್ಲೂ, ತೆಲುಗಿನಲ್ಲಿ ೧೧ನೇ ಶತಮಾನದಲ್ಲೂ ಮೊದಲ ಸಾಹಿತ್ಯ ಕೃತಿಗಳು ರಚನೆಯಾದವು. ಅದೇ ರೀತಿ ೧೨ನೇ ಶತಮಾನದಲ್ಲಿ ಮೊದಲ ಮಲಯಾಳಂ ಭಾಷಾ ಸಾಹಿತ್ಯ ಕಾಣಿಸಿಕೊಂಡಿತು. ಬಂಗಾಳಿ, ಮರಾಠಿ, ಹಿಂದಿಯ ಉಪಭಾಷೆಗಳು ಹಾಗೂ ಪರ್ಷಿಯನ್‌ ಮತ್ತು ಉರ್ದು ಭಾಷೆಗಳಲ್ಲಿ ಮೊದಲ ಸಾಹಿತ್ಯ ಕಾರ್ಯಗಳು ಇದೇ ಅವಧಿಯಲ್ಲಿ ಕಾಣಿಸಿಕೊಂಡವು. ರವೀಂದ್ರನಾಥ ಟಾಗೋರ್‌, ರಾಮ್‌ಧಾರಿ ಸಿಂಗ್‌ ’ದಿನಕರ್‌’, ಸುಬ್ರಮಣಿಯ ಭಾರತಿ, ಕುವೆಂಪು, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಮೈಕೇಲ್‌ ಮಧುಸೂದನ ದತ್, ಮುನ್ಷಿ ಪ್ರೇಮಚಂದ್‌, ಮಹಮ್ಮದ್‌ ಇಕ್ಬಾಲ್‌ ಮತ್ತು ದೇವಕಿ ನಂದನ್‌ ಖತ್ರಿ ಇವರು ಭಾರತ ಕಂಡ ಅತ್ಯಂತ ಮಹತ್ವದ ಸಾಹಿತಿಗಳು.

ಗಿರೀಶ್‌ ಕಾರ್ನಾಡ್‌, ಆಗ್ಯೇಯ, ನಿರ್ಮಲ್‌ ವರ್ಮ, ಕಮಲೇಶ್ವರ್‌, ವೈಕೋಮ್ ಮಹಮ್ಮದ್‌ ಬಷೀರ್‌, ಇಂದಿರಾ ಗೋಸ್ವಾಮಿ, ಮಹಾಶ್ವೇತಾ ದೇವಿ, ಅಮೃತಾ ಪ್ರೀತಮ್‌, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಖುರ್ರಾತುಲೇನ್‌ ಹೈದರ‍್ ಮತ್ತು ತಕಾಝಿ ಶಿವಶಂಕರ ಪಿಳ್ಳೈ ಹಾಗೂ ಇನ್ನೂ ಮುಂತಾದವರು ಸಮಕಾಲೀನ ಭಾರತದಲ್ಲಿ ಹೆಚ್ಚಿನ ಪ್ರಶಂಸೆಗೆ ಮತ್ತು ಮಹತ್ವದ ಚರ್ಚೆಗೊಳಗಾಗಿರುವ ಪ್ರಮುಖ ಸಾಹಿತಿಗಳು. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಷಿಪ್‌ ಆಧುನಿಕ ಭಾರತದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುವ ಸೇವೆಯನ್ನು ಪರಿಗಣಿಸಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಗಳಾಗಿವೆ. ಕನ್ನಡ ಭಾಷೆಗೆ ದೇಶದಲ್ಲೇ ಅತಿ ಹೆಚ್ಚಿನ ೮ ಜ್ಞಾನಪೀಠ ಪ್ರಶಸ್ತಿಗಳು ಲಭ್ಯವಾಗಿವೆ.

. ಅದೇ ರೀತಿ ಹಿಂದಿಗೆ ಆರು, ಬಂಗಾಳಿಗೆ ಐದು, ಮಲಯಾಳಂ ಸಾಹಿತ್ಯಕ್ಕೆ ನಾಲ್ಕು ಹಾಗೂ ಮರಾಠಿ, ಗುಜರಾತಿ, ಉರ್ದು ಮತ್ತು ಒರಿಯಾ ಸಾಹಿತ್ಯಕ್ಕೆ ತಲಾ ಮೂರು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ.

                                     

2. ಕಾವ್ಯ

ಕುರುಕ್ಷೇತ್ರ ಯುದ್ಧದ ಸಚಿತ್ರ ವಿವರಣೆ ೭೪೦೦೦ಕ್ಕೂ ಹೆಚ್ಚಿನ ಸಾಲುಗಳು, ಉದ್ದನೆಯ ಗದ್ಯ ಭಾಗಗಳು ಮತ್ತು ಒಟ್ಟು ಸುಮಾರು ೧.೮ ದಶಲಕ್ಷ ಪದಗಳಿರುವ ಮಹಾಭಾರತ ವಿಶ್ವದ ಅತ್ಯಂತ ಬೃಹತ್‌ ಮಹಾಕಾವ್ಯ.

ಋಗ್ವೇದ ಕಾಲದಿಂದಲೂ ಭಾರತ ಕಾವ್ಯ ಮತ್ತು ಗದ್ಯದ ಬಲಿಷ್ಠ ಪರಂಪರೆಯನ್ನು ಹೊಂದಿದೆ. ಕಾವ್ಯ ಎಂಬ ಸಾಹಿತ್ಯ ಪ್ರಕಾರ ಸಂಗೀತ ಸಂಪ್ರದಾಯದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಧಾರ್ಮಿಕ ಜಾಗೃತಿಗಾಗಿ ಪ್ರಮುಖ ಅಸ್ತ್ರವಾಗಿಯೂ ಇದನ್ನು ಬಳಸಲಾಗಿದೆ. ಲೇಖಕರು ಮತ್ತು ತತ್ವಜ್ಞಾನಿಗಳು ಸಾಮಾನ್ಯವಾಗಿ ಪ್ರತಿಭಾವಂತ ಕವಿಗಳೂ ಆಗಿರುತ್ತಾರೆ. ಆಧುನಿಕ ಯುಗದಲ್ಲಿ, ಅಂದರೆ ಭಾರತ ಸ್ವಾತಂತ್ಯ್ರ ಚಳವಳಿಯ ಸಂದರ್ಭದಲ್ಲಿ ಕಾವ್ಯ ರಾಷ್ಟ್ರೀಯತೆಯ ಅಹಿಂಸಾ ಅಸ್ತ್ರವಾಗಿ ಬಹಳ ಮಹತ್ವದ ಪಾತ್ರ ವಹಿಸಿತ್ತು. ಆಧುನಿಕ ಕಾಲದಲ್ಲಿ ರವೀಂದ್ರನಾಥ ಟಾಗೋರ್‌ ಮತ್ತು ಕೆ. ನರಸಿಂಹಸ್ವಾಮಿ ಅವರ ಕಾವ್ಯದಲ್ಲಿ ಈ ಸಂಪ್ರದಾಯಕ್ಕೆ ಅತ್ಯುತ್ತಮ ಉದಾಹರಣೆಗಳು ದೊರೆಯುತ್ತವೆ. ಅದೇರೀತಿ ಮಧ್ಯಕಾಲೀನ ಅವಧಿಯ ಬಸವಣ್ಣನ ವಚನಗಳು, ಕಬೀರ್‌ ಮತ್ತು ಪುರಂದರದಾಸರ ಪದಗಳು ಅಥವಾ ದೇವರ ನಾಮಗಳು ಕೀರ್ತನೆಗಳು ಮತ್ತು ಪ್ರಾಚೀನ ಕಾಲದ ಮಹಾಕಾವ್ಯಗಳಲ್ಲೂ ಇದಕ್ಕೆ ಕುರುಹುಗಳು ಕಾಣಸಿಗುತ್ತವೆ. ಟಾಗೋರರ ಗೀತಾಂಜಲಿ ಭಾರತ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಗಳನ್ನು ಒದಗಿಸಿರುವುದು ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ರಾಮಾಯಣ ಮತ್ತು ಮಹಾಭಾರತಗಳು ಭಾರತದ ಅತ್ಯಂತ ಪ್ರಾಚೀನ ಮತ್ತು ಇಂದಿಗೂ ಅತ್ಯಂತ ಜನಪ್ರಿಯ ಮಹಾಕಾವ್ಯಗಳು. ಥಾಯ್ಲೆಂಡ್‌, ಮಲೇಷ್ಯಾ ಮತ್ತು ಇಂಡೊನೇಷ್ಯಾಗಳು ಇವುಗಳ ವಿವಿಧ ಆವೃತ್ತಿಗಳನ್ನು ಹೊಂದಿದ್ದು ಅವುಗಳನ್ನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳ ಮಹಾಕಾವ್ಯ ಎಂದು ಬಣ್ಣಿಸಿವೆ. ಇವುಗಳ ಜೊತೆಗೆ ಪ್ರಾಚೀನ ತಮಿಳು ಭಾಷೆಯಲ್ಲಿ ಶಿಲಪ್ಪದಿಗಾರಂ, ಮಣಿಮೇಗಲೈ, ಸಿವಕ ಚಿಂತಾಮಣಿ, ತಿರುಟಕ್ಕತೇವರ್‌, ಕುಂದಲಕೇಸಿ ಎಂಬ ಐದು ಮಹಾಕಾವ್ಯಗಳಿವೆ. ರಾಮಾಯಣ, ಮಹಾಭಾರತಗಳ ಪ್ರಾದೇಶಿಕ ಅವತರಿಣಿಕೆಗಳು ನೂರಾರಿವೆ. ಇವು ಮಹಾಕಾವ್ಯದ ವಸ್ತು ಹೊಂದಿದ್ದರೂ ಮಹಾಕಾವ್ಯಗಳಲ್ಲ. ಅವುಗಳೆಂದರೆ, ತಮಿಳಿನ ಕಂಬ ರಾಮಾಯಣ, ಕನ್ನಡದಲ್ಲಿ ಆದಿಕವಿ ಪಂಪ ಬರೆದ ಪಂಪ ಭಾರತ, ಕುಮಾರ ವಾಲ್ಮೀಕಿ ಬರೆದ ತೊರವೆ ರಾಮಾಯಣ ಮತ್ತು ಕುಮಾರವ್ಯಾಸ ವಿರಚಿತ ಕರ್ನಾಟ ಭಾರತ ಕಥಾ ಮಂಜರಿ, ಹಿಂದಿಯ ರಾಮಚರಿತಮಾನಸ, ಮಲಯಾಳಂನ ಆಧ್ಯಾತ್ಮರಾಮಾಯಣಮ್‌ ಇನ್ನೂ ಮುಂತಾದವು.

                                               

ಗಂಗಾ ಪಾದೆಕಲ್

ಜನನ: ೦೧-೦೯-೧೯೪೮, ಪುತ್ತೂರು ವೃತ್ತಿ: ಲೇಖಕಿ ರಾಷ್ಟ್ರೀಯತೆ: ಭಾರತೀಯ ಪ್ರಕಾರ/ಶೈಲಿ: ಸಣ್ಣಕಥೆ, ಕಾದಂಬರಿ, ಸಂಪಾದಿತ ಕೃತಿಗಳು ವಿಷಯ:ಕನ್ನಡ ಪುಲಪೇಡಿ ಕತೆ ರಂಗನಾಟಕವಾಗಿ ಪ್ರಯೋಗವಾಗಿದ್ದು, ಚಲನಚಿತ್ರಕ್ಕೂ ಆಯ್ಕೆಯಾಗಿದೆ. ಪುಲಪೇಡಿ ಕತೆ ಇಂಗ್ಲಿಷ್ ಹಾಗೂ ತೆಲುಗಿಗೆ ಅನುವಾದವಾಗಿ ಪ್ರಕಟವಾಗಿದೆ. ಇವರ ಹೊಸಹೆಜ್ಜೆ ಕಥಾಸಂಕಲನ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ. ಇವರ ಕತೆಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →