Топ-100
Back

ⓘ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು, ಬೆಂಗಳೂರಿನಲ್ಲಿದೆ. ಜಮ್ಷೇಟ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್ ..                                               

ವಿಶ್ವ ವ್ಯಾಪಾರ ಕೇಂದ್ರ ಬೆಂಗಳೂರು

ವಿಶ್ವ ವ್ಯಾಪಾರ ಕೇಂದ್ರ ಬೆಂಗಳೂರು ಭಾರತದ ಬೆಂಗಳೂರಿನ ಮಲ್ಲೇಶ್ವರಂ ಪ್ರದೇಶದ ಪಶ್ಚಿಮದಲ್ಲಿರುವ ಒಂದು ಕಟ್ಟಡ ಸಂಕೀರ್ಣವಾಗಿದ್ದು, ಇದನ್ನು 2010 ರಲ್ಲಿ ಕಾರ್ಯಾಚರಣೆಗಾಗಿ ತೆರೆಯಲಾಯಿತು. ಇದರ ನಿರ್ಮಾಣಕ್ಕಾಗಿ ಡಬ್ಲ್ಯುಟಿಸಿಎ ಪರವಾನಗಿ ಪಡೆದ ಬ್ರಿಗೇಡ್ ಗ್ರೂಪ್ ನಿರ್ಮಿಸಿದ ಈ ಕಟ್ಟಡವು ಮುಂಬೈನ ನಂತರ ಭಾರತದ ಎರಡನೇ ವಿಶ್ವ ವ್ಯಾಪಾರ ಕೇಂದ್ರವಾಯಿತು. 128 ಮೀ ಎತ್ತರವಿರುವ ಡಬ್ಲ್ಯುಟಿಸಿಬಿ ಕಟ್ಟಡ ದಕ್ಷಿಣ ಭಾರತದ ಅತಿ ಎತ್ತರದ ವಾಣಿಜ್ಯ ಕಟ್ಟಡವಾಗಿದೆ ಮತ್ತು ಇದು 2010 ಮತ್ತು 2013 ರ ನಡುವೆ ಬೆಂಗಳೂರಿನಲ್ಲಿ ಅತಿ ಎತ್ತರದ ಕಟ್ಟಡವಾಗಿದೆ. ಓರಿಯನ್ ಮಾಲ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಶೆರಾಟನ್ ಹೋಟೆಲ್, ಬ್ರಿಗೇಡ್ ಶಾಲೆ ಮತ್ತು ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ಗಳ ಜೊತೆಗೆ ಈ ಕಟ್ಟಡವು "ಬ್ರಿಗೇಡ್ ಗೇಟ್‌ವೇ" ಎಂಬ ಸಂಯೋಜಿತ ...

                                               

ಅಮೃತ ವಿಶ್ವ ವಿದ್ಯಾಪೀಠಂ

ಅಮೃತ ವಿಶ್ವ ವಿದ್ಯಾಪೀಠವು ಭಾರತದ ತಮಿಳುನಾಡಿನ ಕೊಯಮತ್ತೂರು ಮೂಲದ ಖಾಸಗಿ ವಿಶ್ವವಿದ್ಯಾನಿಲಯ ಮತ್ತು ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಆಗಿದೆ. ಬಹು-ಕ್ಯಾಂಪಸ್, ಬಹು-ಶಿಸ್ತಿನ ವಿಶ್ವವಿದ್ಯಾಲಯವು ಪ್ರಸ್ತುತ 6 ಕ್ಯಾಂಪಸ್‌ಗಳನ್ನು ಹೊಂದಿದ್ದು, ತಮಿಳುನಾಡು, ಕೇರಳ ಮತ್ತು ಕರ್ನಾಟಕದಾದ್ಯಂತ 15 ಶಾಖಾ ಶಾಲೆಗಳನ್ನು ಹೊಂದಿದೆ. ಇದು ಎಂಜಿನಿಯರಿಂಗ್, ಮೆಡಿಸಿನ್, ಬಿಸಿನೆಸ್, ಕಲಾ & ವಿಜ್ಞಾನ, ಬಯೋಟೆಕ್ನಾಲಜಿ, ಮಾಸ್ ಕಮ್ಯುನಿಕೇಷನ್ ಮತ್ತು ಸೋಷಿಯಲ್ ವರ್ಕ್ನಲ್ಲಿ ಒಟ್ಟು 207 ಪದವಿಪೂರ್ವ, ಸ್ನಾತಕೋತ್ತರ, ಸಂಯೋಜಿತ-ಪದವಿ, ದ್ವಿ-ಪದವಿ, ಡಾಕ್ಟರೇಟ್ ಮತ್ತು ಪ್ರಮಾಣೀಕರಣ ಕಾರ್ಯಕ್ರಮಗಳನ್ನು ನೀಡುತ್ತದೆ. 1994 ರಲ್ಲಿ ಕೊಯಮತ್ತೂರಿನ ಅಮೃತ ಸ್ಕೂಲ್ ಆಫ್ ಎಂಜಿನಿಯರಿಂಗ್ ಅನ್ನು ಮಾತಾ ಅಮೃತಾನಂದಮಯಿ ದೇವಿ ಅವರು ಉದ್ಘಾಟಿಸುವುದರೊಂದಿಗೆ ಈ ವಿ ...

                                               

ಆಯುಷ್ ಸಚಿವಾಲಯ

ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಅಥವಾ ಆಯುಷ್ ಸಚಿವಾಲಯವು ಭಾರತದಲ್ಲಿ ಸ್ಥಳೀಯ ಪರ್ಯಾಯ ಔಷಧ ವ್ಯವಸ್ಥೆಗಳ ಶಿಕ್ಷಣ, ಸಂಶೋಧನೆ ಮತ್ತು ಪ್ರಸರಣವನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ. ಸಚಿವಾಲಯದ ನೇತೃತ್ವವನ್ನು ರಾಜ್ಯ ಸಚಿವರು ವಹಿಸುತ್ತಾರೆ. ಇದನ್ನು ಪ್ರಸ್ತುತ ಶ್ರೀಪಾದ್ ಯೆಸ್ಸೊ ನಾಯಕ್ ವಹಿಸಿಕೊಂಡಿದ್ದಾರೆ. ಜೈವಿಕ ಸಮರ್ಥನೀಯತೆಯನ್ನು ಹೊಂದಿರದ ಮತ್ತು ಪರೀಕ್ಷಿಸದ ಅಥವಾ ನಿರ್ಣಾಯಕವಾಗಿ ಪರಿಣಾಮಕಾರಿಯಲ್ಲ ಎಂದು ಸಾಬೀತಾಗಿರುವ ಧನಸಹಾಯ ವ್ಯವಸ್ಥೆಗಳ ಬಗ್ಗೆ ಸಚಿವಾಲಯವು ಗಮನಾರ್ಹ ಟೀಕೆಗಳನ್ನು ಎದುರಿಸಿದೆ. ಸಂಶೋಧನೆಯ ಗುಣಮಟ್ಟ ಕಳಪೆಯಾಗಿದೆ, ಮತ್ತು ಯಾವುದೇ ಕಠಿಣ ಔಷಧೀಯ ಅಧ್ಯಯನಗಳು ಮತ್ತು ಅರ್ಥಪೂರ್ಣವಾದ ಕ್ಲಿನಿಕಲ್ ಪ್ರಯೋಗವಿಲ್ಲದೆ ಔಷಧಿಗಳನ್ನು ಪ್ರಾರಂಭಿಸಲಾಗಿದೆ ಎ ...

                                               

ಡಿ.ಕೆ.ರವಿ

ದೊಡ್ಡಕೊಪ್ಪಲು ಕರಿಯಪ್ಪ ರವಿ ಕರ್ನಾಟಕದ ಒಬ್ಬ ಐ.ಎ.ಎಸ್. ಅಧಿಕಾರಿಯಾಗಿದ್ದರು. ತಮ್ಮ ಅಧಿಕಾರದ ಅವಧಿಯಲ್ಲಿ ಡಿ.ಕೆ.ರವಿ ಎಂದೇ ಖ್ಯಾತರಾಗಿದ್ದರು. ಆದರೆ ಅವರು ತಮ್ಮ ೩೬ನೆ ವಯಸ್ಸಿನಲ್ಲಿ ತೀರಿಕೊಂಡರು.

                                               

ಧೀರೇಂದ್ರ ಬ್ರಹ್ಮಚಾರಿ

ಧೀರೇಂದ್ರ ಬ್ರಹ್ಮಚಾರಿ, ಓರ್ವ ಭಾರತೀಯ ಯೋಗ ಗುರು. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಯೋಗ ಗುರು ಹಾಗೂ ಆಪ್ತರೂ ಆಗಿದ್ದರು.ತುರ್ತು ಪರಿಸ್ಥಿತಿ ವೇಳೆ ಪ್ರಭಾವಿಯಾಗಿದ್ದ ಇವರ ಮಾತಿಗೆ ಇಂದಿರಾ ಮನ್ನಣೆ ನೀಡುತ್ತಿದ್ದರು. ದೆಹಲಿ, ಜಮ್ಮು ಹಾಗೂ ಕಾತ್ರಾದಲ್ಲಿ ಇವರ ಆಶ್ರಮಗಳನ್ನು ಸ್ಥಾಪಿಸಿದ್ದರು.

                                               

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ

ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಭಾರತೀಯ ವೈರಾಲಜಿ ಸಂಶೋಧನಾ ಸಂಸ್ಥೆಯಾಗಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಭಾಗವಾಗಿರುವ ಮೂಲಭೂತ ವೈದ್ಯಕೀಯ ವಿಜ್ಞಾನ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು ಈ ಹಿಂದೆ ವೈರಸ್ ಸಂಶೋಧನಾ ಕೇಂದ್ರ ಎಂದು ಕರೆಯಲಾಗುತ್ತಿತ್ತು ಮತ್ತು ಇದನ್ನು ರಾಕ್‌ಫೆಲ್ಲರ್ ಫೌಂಡೇಶನ್‌ನ ಸಹಯೋಗದೊಂದಿಗೆ ಸ್ಥಾಪಿಸಲಾಯಿತು. ಇದನ್ನು ಎಸ್ಇ ಏಷ್ಯಾ ಪ್ರದೇಶಕ್ಕೆ ಡಬ್ಲ್ಯುಎಚ್‌ಒ ಎಚ್-೫ ಉಲ್ಲೇಖ ಪ್ರಯೋಗಾಲಯವೆಂದು ಗೊತ್ತುಪಡಿಸಲಾಗಿದೆ. ಸಂಧಿಪದಿಗಳ ಮೂಲಕ ಹರಡುವ ವೈರಸ್‌ಗಳ ಗುಂಪಿನ ಸಂಶೋಧನೆಯ ಜಾಗತಿಕ ಕಾರ್ಯಕ್ರಮದ ಭಾಗವಾಗಿ, ಪುಣೆಯ ವೈರಸ್ ಸಂಶೋಧನಾ ಕೇಂದ್ರವು ವಿಆರ್‌ಸಿ, ಐಸಿಎಂಆರ್ ಮತ್ತು ರಾಕ್‌ಫೆಲ್ಲರ್ ಫೌಂಡೇಶನ್‌ನ ಜಂಟಿ ಆಶ್ರಯದಲ್ಲಿ, ೧೯೫೨ ರಲ್ಲಿ ಅಸ್ತಿತ್ವಕ್ಕೆ ಬಂದಿತು. ...

                                     

ⓘ ಭಾರತೀಯ ವಿಜ್ಞಾನ ಸಂಸ್ಥೆ

ಭಾರತೀಯ ವಿಜ್ಞಾನ ಸಂಸ್ಥೆಯು) ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು, ಬೆಂಗಳೂರಿನಲ್ಲಿದೆ. ಜಮ್ಷೇಟ್ಜಿ ಟಾಟಾ ಹಾಗೂ ಮೈಸೂರಿನ ಮಹಾರಾಜ ಎಚ್.ಎಚ್ ಶ್ರೀ ಕೃಷ್ಣರಾಜ ಒಡೆಯರ್ ರವರ ಸಕ್ರಿಯ ನೆರವಿನೊಂದಿಗೆ ೧೯೦೯ ರಲ್ಲಿ ಸ್ಥಾಪಿಸಲಾಯಿತು. ಕೃಷ್ಣರಾಜ ಒಡೆಯರ್ ೩೭೧ ಎಕರೆ ಭೂಮಿ ದಾನ ಮಾಡಿದರು. ಹಾಗೇ ಜೆಮ್ಷೇಟ್ಜೀ ಟಾಟಾರವರು ಐಐಎಸ್ಸಿ ಸೃಷ್ಟಿಗೆ ಹಲವಾರು ಕಟ್ಟಡಗಳ ಯೋಜನೆಯನ್ನು ನೀಡಿದರು. ಈ ಸಂಸ್ಥೆಯನ್ನು ಸ್ಥಳೀಯವಾಗಿ "ಟಾಟಾ ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ. ಸಂಸ್ಥೆಯ ೩೭ ಅಭಿಯಂತ್ರಿಕ/ವಿಜ್ಞಾನ ವಿಭಾಗಗಳಲ್ಲಿ ೨೦೦೦ಕ್ಕೂ ಹೆಚ್ಚು ಸಂಶೋಧಕ ವಿದ್ಯಾರ್ಥಿಗಳು ಸ್ನಾತಕೋತ್ತರ/ ಪಿ.ಎಚ್.ಡಿ ಪದವಿಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕರೆಂಟ್ ಸೈನ್ಸ್ ಪತ್ರಿಕೆಯು ಸಂಸ್ಥೆಯ ಸಂಶೋಧನಾ ಕೆಲಸದ ಆಧಾರದ ಮೇರೆಗೆ IISc ಗೆ ಪ್ರಥಮ ಸ್ಥಾನ ನೀಡಿದೆ.

                                     

1. ವಿಶ್ವಪ್ರಸಿದ್ಧಿಯ ಹಾದಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ

 • ಇತ್ತೀಚೆಗೆ ಟೈಮ್ಸ್ ಹೈಯರ್ ಎಜುಕೇಶನ್ ಸರ್ವೆ ನಡೆಸಿದ ಜಾಗತಿಕ ವಿಶ್ವವಿದ್ಯಾಲಯಗಳ ಸಮೀಕ್ಷೆಯಲ್ಲಿ – ಐದು ಸಾವಿರಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ – ಜಗತ್ತಿನ ಅತ್ಯಂತ ಶ್ರೇಷ್ಠ ಸಂಸ್ಥೆಗಳಲ್ಲಿ ಎಂಟನೆಯ ಸ್ಥಾನವನ್ನು ಪಡೆಯುವ ಮೂಲಕ ಸಮಸ್ತ ಭಾರತೀಯರಿಗೂ ಐ.ಐ.ಎಸ್‌ಸಿ.ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್‌ ಸೈನ್ಸ್ - ಐ.ಐ.ಎಸ್‌ಸಿ. ಅಥವಾ ‘ಟಾಟಾ ಇನ್ಸ್‌ಟಿಟ್ಯೂಟ್’ ಎಂದೇ ಜಾಗತಿಕವಾಗಿ ಚಿರಪರಿಚಿತವಾಗಿರುವ ಸಂಶೋಧನಾ ಸಂಸ್ಥೆ ಹೆಮ್ಮೆ ತಂದಿದೆ.
 • 20 Mar, 2017;
                                     

2. ಉನ್ನತ ಶಿಕ್ಷಣದ ರ್‍ಯಾಂಕಿಂಗ್ ಮತ್ತದರ ಲಾಭಗಳು

 • ವಿಜ್ಞಾನ-ತಂತ್ರಜ್ಞಾನದ ಹೊಸ ಆವಿಷ್ಕಾರಗಳ ಮೂಲಕ ಮಾನವನ ಮತ್ತು ಜಗತ್ತಿನ ಕಲ್ಯಾಣದ ಸಾಧ್ಯತೆಗಳೇನೆಂಬುದನ್ನು ಇಪ್ಪತ್ತನೆಯ ಶತಮಾನದಲ್ಲಿ ನಾವು ಕಂಡುಕೊಂಡಿದ್ದೇವೆ. ಹಾಗಾಗಿಯೇ ಇಂದು ಜಗತ್ತಿನ ಎಲ್ಲಾ ದೇಶಗಳು ತಮ್ಮ ಅಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯನ್ನು ಬಹಳ ಪ್ರಮುಖವಾದ ಸಾಧನವೆಂದು ಗುರುತಿಸಿವೆ. ಜ್ಞಾನದ ಉತ್ಪತ್ತಿ ಮತ್ತು ಪ್ರಸರಣವನ್ನು ಹೆಚ್ಚು ಸಮರ್ಪಕವಾಗಿ ನಿರ್ವಹಿಸಲು ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಬೋಧನೆ, ಸಂಶೋಧನೆ, ಅದರ ಆನ್ವಯಿಕತೆ, ಮೂಲಭೂತ ವ್ಯವಸ್ಥೆಗಳು ಇತ್ಯಾದಿ ಅನೇಕ ಮಾನದಂಡಗಳನ್ನಿಟ್ಟುಕೊಂಡು ಜಗತ್ತಿನಾದ್ಯಂತ ಜ್ಞಾನ ಹೇಗೆ ಬೆಳೆಯುತ್ತಿದೆ ಎಂಬುದನ್ನು ಅಳತೆ ಮಾಡುತ್ತವೆ. ಉದಾಹರಣೆಗೆ ಅಕಾಡಮಿಕ್ ರ್‍ಯಾಂಕಿಂಗ್ ಆಫ್ ವರ್ಲ್ಡ್ ಯೂನಿವರ್ಸಿಟೀಸ್ ಶಾಂಘೈ ರ್‍ಯಾಂಕಿಂಗ್, ಸೆಂಟರ್ ಫಾರ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್, ಗ್ಲೋಬಲ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, ಎಚ್‌ಇಇಎಸಿಟಿ, ಲೀಡೆನ್ ರ್‍ಯಾಂಕಿಂಗ್ಸ್‌, ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್, ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್್ಸ್ ಇತ್ಯಾದಿ ಅನೇಕ ಸಂಸ್ಥೆಗಳು ವಿಶ್ವವಿದ್ಯಾನಿಲಯಗಳ ಸಮೀಕ್ಷೆಯನ್ನು ಜಾಗತಿಕ ಮಟ್ಟದಲ್ಲಿ ನಡೆಸುತ್ತವೆ. ಈ ಸಮೀಕ್ಷೆಗಳ ವಿಶ್ಲೇಷಣೆ ಮೂಲಕ ನಿರ್ದಿಷ್ಟ ಸಂಸ್ಥೆಯೊಂದು ಯಾವ ಕ್ಷೇತ್ರದಲ್ಲಿ ತನ್ನ ಶಿಕ್ಷಣದ ಗುಣಮಟ್ಟಕ್ಕಾಗಿ ಯಾವ ರೀತಿಯ ಒತ್ತನ್ನು ನೀಡಬೇಕೆಂಬುದನ್ನು ಗುರುತಿಸಿಕೊಳ್ಳಬಹುದು. ಅಂದರೆ ಬೋಧನೆ, ಬೋಧನಾ ಕೌಶಲ, ನಿಯತಕಾಲಿಕೆಗಳಲ್ಲಿ ಪ್ರಕಟಣೆ, ಪೇಟೆಂಟ್ ಇತ್ಯಾದಿಗಳಲ್ಲಿ ಯಾವ ಕ್ಷೇತ್ರದಲ್ಲಿ ಸಂಸ್ಥೆಯೊಂದು ನಿರ್ದಿಷ್ಟವಾಗಿ ಇಂದು ಯಾವ ಸ್ಥಿತಿಯಲ್ಲಿದೆ ಮತ್ತು ಮುಂದೆ ಕ್ರಮಿಸಬೇಕಾದ ಹಾದಿಯೇನು ಎಂದು ಈ ಸಮೀಕ್ಷೆಗಳ ಮೂಲಕ ಸ್ಪಷ್ಟವಾಗುತ್ತದೆ. ಇಂತಹ ಮಾನದಂಡಗಳ ಕುರಿತಾದಂತೆ ತಕರಾರುಗಳೇನೇ ಇದ್ದರೂ ಈ ಸಮೀಕ್ಷೆಗಳು ವಿಶ್ವವಿದ್ಯಾನಿಯಗಳಿಗೆ ಗುಣಾತ್ಮಕವಾಗಿ ಸಂಶೋಧನೆ ಮತ್ತು ಜ್ಞಾನಪ್ರಸರಣೆಯ ಕಾರ್ಯಕ್ಕೆ ದಿಕ್ಸೂಚಿಯನ್ನು ನೀಡುತ್ತವೆ.
                                     

3. ಐ.ಐ.ಎಸ್‌ಸಿ.: ಶತಮಾನದ ಹಾದಿ

 • ಟೈಮ್ಸ್ ಸಮೀಕ್ಷೆಯ ಪ್ರಕಾರ ಜಾಗತಿಕವಾಗಿ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಈ ವರ್ಷ ಎಂಟನೆಯ ಸ್ಥಾನಕ್ಕೇರಿರುವ ಐ.ಐ.ಎಸ್‌ಸಿ. ತನ್ನ ಅಸ್ತಿತ್ವದ ಶತಮಾನದ ನಂತರವೂ ನಿರಂತರವಾಗಿ ಸಂಶೋಧನೆಯಲ್ಲಿ ತೊಡಗಿದೆ. 19ನೆಯ ಶತಮಾನದ ಕೊನೆಯ ಭಾಗದಲ್ಲಿ ಸ್ವಾಮಿ ವಿವೇಕಾನಂದರ ಅಣತಿಯಂತೆ ಜೆ. ಎನ್. ಟಾಟಾರವರು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸಹಕಾರದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನೆಗಾಗಿ ಐ.ಐ.ಎಸ್‌ಸಿ.ಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ಖ್ಯಾತ ರಸಾಯನಶಾಸ್ತ್ರಜ್ಞ ಮೂರಿಸ್ ಟ್ರಾವರ್ಸ್ ಅವರ ನಿರ್ದೇಶನದಲ್ಲಿ 1909ರಲ್ಲಿ ಐ.ಐ.ಎಸ್‌ಸಿ. ಕೆಲಸ ಪ್ರಾರಂಭಿಸಿತು. ಸರ್ ಸಿ.ವಿ. ರಾಮನ್‌ರವರು ಇಲ್ಲಿಂದಲೇ ನೊಬೆಲ್ ಪಾರಿತೋಷಕವನ್ನು ಪಡೆದಿದ್ದಲ್ಲದೆ ಐ.ಐ.ಎಸ್‌ಸಿ.ಯ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದರು. ವಿಜ್ಞಾನಕ್ಷೇತ್ರದ ದಿಗ್ಗಜಗಳಾದ ಹೋಮಿ ಭಾಭಾ, ವಿಕ್ರಂ ಸಾರಾಭಾಯ್, ಸತೀಶ್ ಧನವ್, ಜೆ.ಸಿ. ಘೋಷ್, ಜಿ.ಎನ್. ರಾಮಚಂದ್ರನ್ – ಹೀಗೆ ಹಲವರು ಮೇಧಾವಿಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಖ್ಯಾತಿ ಈ ಸಂಸ್ಥೆಯದು.
                                     

4. ಐ.ಐ.ಎಸ್‌ಸಿ.ಯ ಸಾಧನೆಗಳು

 • ಶತಮಾನಕ್ಕೂ ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿರುವ ಐ.ಐ.ಎಸ್‌ಸಿ.ಯ ಸಾಧನೆಗಳನ್ನು ಪಟ್ಟಿ ಮಾಡಿದರೆ ಮುಗಿಯಲಾರದಷ್ಟು ದೊಡ್ಡದು. ಅದು ಸಾಮಾನ್ಯ ಹಳ್ಳಿಗನಿಗೂ ಹಿಂದೆ ಪರಿಚಿತವಿದ್ದ ಅಸ್ತ್ರ ಒಲೆಯಿಂದ ಹಿಡಿದು ಸೂಪರ್ ಕಂಪ್ಯೂಟರ್, ನ್ಯಾನೋ ಟೆಕ್ನಾಲಜಿವರೆಗಿನ ವಿಜ್ಞಾನದ ವಿವಿಧ ಕ್ಷೇತ್ರಗಳವರೆಗೆ ಹರಡಿದೆ. ಕೇವಲ ಉನ್ನತ ಶಿಕ್ಷಣದ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಐ.ಐ.ಎಸ್‌ಸಿ.ಯ ಇತ್ತೀಚಿನ ಕೆಲವೇ ವರ್ಷಗಳ ಸಾಧನೆಗಳನ್ನು ಉದಾಹರಣೆಗಾಗಿ ಪಟ್ಟಿ ಮಾಡಬಹುದು.
 • 1) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ 2017: ಜಗತ್ತಿನ ಅಗ್ರಗಣ್ಯ ಸಣ್ಣ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎಂಟನೆಯ ಸ್ಥಾನ.
 • ನಮಗೆಲ್ಲರಿಗೂ ತಿಳಿದಂತೆ ಭಾರತದಲ್ಲಿ ಆಧುನಿಕ ವಿಜ್ಞಾನವನ್ನು ಅತ್ಯಂತ ಕ್ರಮಬದ್ಧವಾಗಿ ಕಲಿಸುವ ಮತ್ತು ನಿರಂತರ ಸಂಶೋಧನೆಯ ಮೂಲಕ ಮುಂದಿನ ತಲೆಮಾರಿಗೆ ಸಮಗ್ರವಾಗಿ ದಾಟಿಸುವ ಕೆಲಸವನ್ನು ಪ್ರಾರಂಭಿಸಿದ ಕೆಲವೇ ಸಂಸ್ಥೆಗಳಲ್ಲಿ ಐ.ಐ.ಎಸ್‌ಸಿ.ಯೂ ಒಂದು. ಒಂದರ್ಥದಲ್ಲಿ ಸಂಶೋಧನಾ ವಾತಾವರಣ ಮತ್ತು ಅದಕ್ಕೆ ಪೂರಕವಾಗಿ ಬೇಕಾಗಿರುವ ಎಲ್ಲ ಸಂಗತಿಗಳ ಕುರಿತು ಪ್ರಯೋಗ ಮಾಡಿ ಅದನ್ನು ಅಭಿವೃದ್ಧಿಗೊಳಿಸಿದ ಕೀರ್ತಿಯಲ್ಲೂ ಐ.ಐ.ಎಸ್‌ಸಿ.ಗೆ ಹೆಚ್ಚಿನ ಪಾಲು ಸಲ್ಲುತ್ತದೆ. ಐ.ಐ.ಎಸ್‌ಸಿ.ಯ ಕಾರ್ಯವ್ಯಾಪ್ತಿಯು ವಿಜ್ಞಾನದ ನಿಯತಕಾಲಿಕೆಗಳಿಂದ ಮೊದಲುಗೊಂಡು ಪ್ರಯೋಗಶಾಲೆಗಳವರೆಗೆ, ತರಬೇತಿಯಿಂದ ಹಿಡಿದು ಸಾಮಾನ್ಯ ಜನರ ಸಮಸ್ಯೆಯವರೆಗೆ, ಎಲ್ಲ ರೀತಿಯಲ್ಲೂ ಯೋಚಿಸಿ, ಅದಕ್ಕೆ ಪೂರಕ ಮೂಲಭೂತ ಸೌಕರ್ಯಗಳನ್ನು ಸಜ್ಜುಗೊಳಿಸುವವರೆಗೆ ಈ ಪ್ರಯತ್ನಗಳು ವಿಸ್ತರಿಸಿವೆ. ಆ ಕಾರಣಕ್ಕಾಗಿಯೇ ಒಂದರ್ಥದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತದಲ್ಲಿ ಸಂಶೋಧನೆ ಮಾಡುವ ಸಾಧ್ಯತೆಯ ಬಗ್ಗೆ ನಿರಂತರ ಆಶಾದಾಯಕ ಸ್ಥಿತಿಯನ್ನು ನಿರ್ಮಿಸಿದೆ. ಈಗ ಜಗತ್ತಿನ ಹತ್ತು ಶ್ರೇಷ್ಠ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಭಾರತೀಯರಿಗೆ ಹೊಸ ಸ್ಫೂರ್ತಿಯನ್ನು ಕೊಟ್ಟಿದೆ ಎಂದರೆ ಅತಿಶಯೋಕ್ತಿ ಆಗಲಾರದು.
 • 3) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ 2015: ಜಾಗತಿಕ ವಿಶ್ವವಿದ್ಯಾಲಯಗಳಲ್ಲಿ 147ನೆಯ ಸ್ಥಾನ.
 • 6) ಅಕಾಡಮಿಕ್ ರ್‍ಯಾಂಕಿಂಗ್ಸ್‌ ಆಫ್ ವರ್ಲ್ಡ್ ಯೂನಿವರ್ಸಿಟೀಸ್: 2011ರಲ್ಲಿ ಮೊದಲ ಬಾರಿಗೆ ಶಾಂಘೈ ರ್‍ಯಾಂಕಿಂಗ್‌ನಲ್ಲಿ ಜಾಗತಿಕ ಐದುನೂರು ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರಿದ ಮೊದಲ ಭಾರತೀಯ ಸಂಸ್ಥೆ.
 • 4) ಟೈಮ್ಸ್ ಹೈಯರ್ ಎಜ್ಯುಕೇಶನ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌ ಫಾರ್ ಬ್ರಿಕ್ಸ್ ಆಂಡ್ ಎಮರ್ಜಿಂಗ್ ಇಕನಾಮಿಕ್ಸ್: ಆರನೆಯ ಸ್ಥಾನ.
 • 5) ಗ್ಲೋಬಲ್ ಎಂಪ್ಲಾಯಬಲಿಟಿ ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌, 2015: ಜಾಗತಿಕವಾಗಿ 20ನೇ ಸ್ಥಾನ.
 • 2) ಕ್ಯುಎಸ್ ವರ್ಲ್ಡ್ ಯೂನಿವರ್ಸಿಟೀಸ್ ರ್‍ಯಾಂಕಿಂಗ್ಸ್‌ 2016: ನಿಯತಕಾಲಿಕೆಗಳಲ್ಲಿ ವೈಜ್ಞಾನಿಕ ಲೇಖನಗಳ ಪ್ರಕಟಣೆ - 11ನೆಯ ಸ್ಥಾನ.


                                     

5. ಸಾಧ್ಯತೆಗಳು ಮತ್ತು ಸವಾಲುಗಳು

 • ಒಂದೆಡೆ ಐ.ಐ.ಎಸ್‌.ಸಿ. ಮತ್ತು ಐ.ಐ.ಟಿ.ಯಂಥ ಸಂಸ್ಥೆಗಳ ಸಾಧನೆಗಳು ನಮಗೆ ಹುರುಪು ತಂದರೆ, ಇನ್ನೊಂದೆಡೆ ಅವು ಅನೇಕ ಪ್ರಶ್ನೆಗಳನ್ನೂ ಸೃಷ್ಟಿಸುತ್ತವೆ. ಇಷ್ಟೆಲ್ಲ ಸಂಸ್ಥೆಗಳಿದ್ದರೂ ಭಾರತದಲ್ಲಿ ಯುವ ಪ್ರತಿಭೆಗಳಿಗೆ ಸಂಶೋಧನೆಯನ್ನು ಒಂದು ವೃತ್ತಿಜೀವನವಾಗಿ ತೋರಿಸಿಕೊಡುವಲ್ಲಿ ವಿಫಲರಾಗಿದ್ದೇವೆ. ಐ.ಟಿ., ಬಿ.ಟಿ., ಕಾರ್ಪೊರೇಟ್ ಉದ್ಯೋಗ ಅಥವಾ ಸಿವಿಲ್ ಸರ್ವೀಸ್‌ಗಳಂತೆ ಸಂಶೋಧನೆಯನ್ನೂ ಆಯ್ಕೆ ಮಾಡಬಹುದಾದ ವೃತ್ತಿಯಾಗಿಸಲು ಇರುವ ತೊಂದರೆಗಳೇನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವೇಕೆ?
 • ಭಾರತದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸಲು ಐ.ಐ.ಎಸ್‌ಸಿ.ಯಂಥದ್ದೇ ಸಂಸ್ಥೆಗಳನ್ನು ಕಟ್ಟುವಲ್ಲಿ ನಾವೇಕೆ ವಿಫಲರಾಗಿದ್ದೇವೆ ಎನ್ನುವುದು ಕೂಡ ಇಂದು ನಮ್ಮ ಮುಂದಿರುವ ಗಂಭೀರವಾದ ಪ್ರಶ್ನೆ. ಐ.ಐ.ಎಸ್‌ಸಿ.ಯ ಸುತ್ತಲೂ ಇರುವ ಕೆಲವು ಜಿಲ್ಲೆಗಳಲ್ಲಿನ ನಾಲ್ಕಾರು ವಿಶ್ವವಿದ್ಯಾಲಯಗಳಲ್ಲಿ ಹೊರಬರುವ ಸಂಶೋಧನೆಗೂ ಐ.ಐ.ಎಸ್‌ಸಿ.ಯ ಸಂಶೋಧನೆಗೂ ಗುಣಾತ್ಮಕವಾಗಿ ಅಜಗಜಾಂತರದಷ್ಟು ವ್ಯತ್ಯಾಸವಿದೆ.
 • ಹಾಗಾದರೆ ಈ ರೀತಿ ಅಪ್ರತಿಮ ಜ್ಞಾನ ಪ್ರಸರಣೆ ಮತ್ತು ಸಂಶೋಧನಾ ಕೌಶಲವನ್ನು ಐ.ಐ.ಎಸ್‌ಸಿ.ಯಿಂದ ಬೇರೆ ಕಡೆಗೂ ಹರಡುವ ಕಾರ್ಯದಲ್ಲಿ ಇರಬಹುದಾದ ತೊಂದರೆ ಏನು ಎಂಬುದು ನಮಗೆ ಅರ್ಥವಾದಂತಿಲ್ಲ. ಬೇರೆ ಬೇರೆ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯ ನಂತರ ವಿಜ್ಞಾನಸಂಸ್ಥೆಗೆ ಬರುವುದು ಇದುವರೆಗೂ ವಾಡಿಕೆಯಾಗಿತ್ತು. ಈಗ ಐ.ಐ.ಎಸ್‌ಸಿ. ಸ್ವತಃ ಸ್ನಾತಕ ಪದವಿಗಳನ್ನು ಪ್ರಾರಂಭಿಸಿರುವುದು, ಐ.ಐ.ಎಸ್‌ಸಿ.ಗೂ ಇತರ ವಿಶ್ವವಿದ್ಯಾಲಯಗಳಿಗೂ ಇದ್ದ ಸಂಬಂಧವನ್ನು ಮತ್ತಷ್ಟು ಮೊಟಕುಗೊಳಿಸಿದೆ. ಇದಲ್ಲದೆ ಐ.ಐ.ಎಸ್‌ಸಿ. ಇಂದು ಒಂದು ಕಡೆ ಜಗತ್ತಿನ ವಿವಿಧ ಉನ್ನತ ಶಿಕ್ಷಣ ಪಡೆಯಲು ರಹದಾರಿಯಂತೆ ಕಂಡರೆ, ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಸಂಬಳವನ್ನು ಪಡೆಯುವ ಉದ್ಯೋಗದ ಮಾರ್ಗೋಪಾಯವಾಗಿಯೂ ಕಾಣುತ್ತಿದೆ.
 • ಇದೊಂದು ಕಳವಳಕಾರಿ ಸಂಗತಿ ಎನ್ನುವುದು ವಿಜ್ಞಾನಕ್ಷೇತ್ರದ ಹಲವರು ಗಣ್ಯರ ಅಭಿಪ್ರಾಯವಾಗಿದೆ. ಮಾತ್ರವಲ್ಲ, ಈ ವಿಜ್ಞಾನಸಂಸ್ಥೆ ಮೂಲಭೂತ ವಿಜ್ಞಾನದ ಸಂಶೋಧನೆಗಳಿಂದ ದೂರ ಸರಿದು ಆನ್ವಯಿಕಗಳ ಕಡೆಗೆ ಮುಖ ಮಾಡಿರುವುದು ಕೂಡ ಅತ್ಯಂತ ಕಳವಳಕಾರಿ ಬೆಳವಣಿಗೆ. ಇದರ ಜೊತೆಗೆ, ಭಾರತದಲ್ಲಿ ವಿಜ್ಞಾನ – ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟು ಮಹತ್ಸಾಧನೆ ಮಾಡುವುದು ಸಾಧ್ಯವಾಗಿರುವಾಗ ಇದೇ ರೀತಿಯಲ್ಲಿ ಸಮಾಜವಿಜ್ಞಾನ ಮತ್ತು ಮಾನವಿಕಗಳ ಅಧ್ಯಯನದಲ್ಲಿಯೂ ಇಂಥ ಸಾಧನೆ ಆಗದಿರುವುದಕ್ಕೆ ಕಾರಣಗಳನ್ನು ಕೇಳಿಕೊಳ್ಳಬೇಕಾಗುತ್ತದೆ. ಈ ಎಲ್ಲ ಪ್ರಶ್ನೆಗಳ ನಡುವೆಯೂ ಐ.ಐ.ಎಸ್‌ಸಿ.ಯ ಸಾಧನೆ ಅತ್ಯಂತ ಮಹತ್ತರ ಹಾಗೂ ಭಾರತೀಯರೆಲ್ಲರೂ ಸಂಭ್ರಮಿಸಬೇಕಾದ ಸಂಗತಿ.
                                     

6. ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ

 • ೨೦೧೬-೧೭ ರ ರ್ಯಾಂಕಿಂಗ್‌ ಪಟ್ಟಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಐಐಎಸ್‌ಸಿ ಸತತ ಎರಡನೇ ವರ್ಷವೂ ಪಾತ್ರವಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ್ಯಾಂಕಿಂಗ್‌ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ.
 • 3 Apr, 2017;
 • ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಐಐಟಿ ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ಬಿಎಚ್‌ಯು 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಎರಡನೇ ಆವೃತ್ತಿಯ ರ್ಯಾಂಕಿಂಗ್‌ ಅನ್ನು ೨-೪-೨೦೧೭ ಸೋಮವಾರ ಪ್ರಕಟಿಸಿದ್ದಾರೆ.
 • ಕಳೆದ ತಿಂಗಳು ಮಾರ್ಚಿ ೨೦೧೭ ರಲ್ಲಿ ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್‌ ಉನ್ನತ ಶಿಕ್ಷಣ ರ್‍ಯಾಂಕಿಂಗ್‌’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು. ಹೆಚ್ಚು ಅನುದಾನ ಸ್ವಾಯತ್ತೆ: ವಾರ್ಷಿಕ ರ್‍ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ.


                                     

6.1. ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ ಆರು ವಿಭಾಗಗಳಲ್ಲಿ ರ್ಯಾಂಕ್‌

 • ೨೦೧೭ರ ಈ ವರ್ಷ ಆರು ವಿಭಾಗಗಳಲ್ಲಿ ರ್ಯಾಂಕ್‌ ನೀಡಲಾಗಿದೆ. ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ್ಯಾಂಕ್‌ ನೀಡಲಾಗಿದೆ. ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ್ಯಾಂಕ್‌ ಗಳಿಸಿದೆ.
                                     

6.2. ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ ಆಯ್ಕೆ ಕ್ರಮ

 • ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟಿನ ಎನ್‌ಐಆರ್‌ಎಫ್‌ ಅಡಿಯಲ್ಲಿ ರ‍್ಯಾಕಿಂಗ್‌ ನೀಡಲಾಗುತ್ತದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.
                                     

6.3. ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ ಐಐಎಂಬಿಗೆ 2ನೇ ಸ್ಥಾನ

 • ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಐಐಎಂಬಿ ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಮೊದಲ ಸ್ಥಾನ ಗಳಿಸಿದೆ. ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್‌ ಐಐಟಿ–ಮದ್ರಾಸ್‌ ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
                                     

6.4. ಐಐಎಸ್‍ಸಿ ದೇಶದ ನಂ1 ಶಿಕ್ಷಣ ಸಂಸ್ಥೆ ಮಾನದಂಡಗಳು

 • ಗ್ರಹಿಕೆ
 • ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ
 • ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ
 • ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ
 • ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು
                                     

7. ಹೊರಗಿನ ಸಂಪರ್ಕಗಳು

 • ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕೃತ ತಾಣ
 • ವಿವಾದಾಸ್ಪದ ವಿಷಯಗಳ ಚರ್ಚೆಗೆ ಸೈನ್ಸ್‌ ಕಾಂಗ್ರೆಸ್‌ ವೇದಿಕೆಯಾಗಿಯೇ ಇಲ್ಲ. ಸೈನ್ಸ್ ಕಾಂಗ್ರೆಸ್: ಬದಿಗಿಟ್ಟ ಚರ್ಚೆಗಳು; ಟಿ.ಆರ್. ಅನಂತರಾಮು;: 15 ಡಿಸೆಂಬರ್ 2018
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →