Топ-100
Back

ⓘ ವಚನ ಸಾಹಿತ್ಯ. ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾ ..                                               

ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ವಿಜಯಪುರ

ವಚನಪಿತಾಮಹ ಡಾ.ಫ.ಗು.ಹಳಕಟ್ಟಿ ಕನ್ನಡನಾಡು ಕಂಡ ಅಪರೂಪದ ವ್ಯಕ್ತಿ-ಶಕ್ತಿ. ವಿಜಯಪುರದ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡ ಅವರು ಅದರ ಸರ್ವತೋಮುಖ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತವರು. ಕಾಲಗರ್ಭದ ಕತ್ತಲೆಯಲ್ಲಿ ನಶಿಸಿಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ, ಪ್ರಕಟಿಸಿದ ಅಪ್ರತಿಮ ಸಂಶೋಧಕರು. ಅವರ 60 ವರ್ಷಗಳ ನಿರಂತರ ಶ್ರಮದ ಫಲವನ್ನು ಇಂದು ನಾವು ಸವಿಯುತ್ತಿದ್ದೇವೆ. ಡಾ. ಹಳಕಟ್ಟಿಯವರು ವಿಜಯಪುರದ ಬಿ.ಎಲ್.ಡಿ.ಇ.ಸಂಸ್ಥೆಯನ್ನು 1910ರಲ್ಲಿ ಹುಟ್ಟು ಹಾಕಿದರು. ಅಂದು ಅವರು ನೆಟ್ಟ ಈ ಶಿಕ್ಷಣ ಸಸಿ ಇಂದು ಹೆಮ್ಮರವಾಗಿ ಸ್ವಾಯತ ವಿಶ್ವವಿದ್ಯಾಲಯದೊಂದಿಗೆ ಸುಮಾರು 80 ವಿವಿಧ ವಿದ್ಯಾಸಂಸ್ಥೆಗಳನ್ನು ನಡೆಸುತ್ತ ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಈಗ ಈ ಸಂಸ್ಥೆಗೆ 108 ವ ...

                                               

ಪ್ರೀತಿ ಶುಭಚಂದ್ರ

ಡಾ. ಪ್ರೀತಿ ಶುಭಚಂದ್ರ, ವಿಮರ್ಶಕಿಯಾಗಿ, ಲೇಖಕಿಯಾಗಿ, ಮಹಿಳಾವಾದಿಯಾಗಿ ಹೆಸರು ಮಾಡಿದವರು. ವರ್ತಮಾನದ ಮಹಿಳಾ ಸಂವೇದನೆ ಅವರ ಬರಹಗಳ ಮೂಲಸೆಲೆ. ವಚನ ಸಾಹಿತ್ಯ ಮತ್ತು ಜೈನ ಸಾಹಿತ್ಯ ಅವರ ಆಸಕ್ತಿ. ಕಾವ್ಯಾನಂದ ಪುರಸ್ಕಾರ, ಜೈನ ಮಹಾಸಮ್ಮೇಳನದ ಉನ್ನತಿ ಪ್ರಶಸ್ತಿ ಗಳಿಗೆ ಭಾಜನರಾಗಿರುವ ಪ್ರೀತಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ 50 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದವರು ಪ್ರೀತಿ.

                                               

ಲಿಂಗಾಯತ ಧರ್ಮದ ಪುನರುತ್ಥಾನ

ಗುರುಬಸವಣ್ಣನವರು ತಮ್ಮ ಜೀವಿತ ಅವಧಿಯಲ್ಲಿಯೇ ಒಂದು ಪರಿಪೂರ್ಣ ಧರ್ಮವನ್ನು ಕೊಟ್ಟರು. ಧಾರ್ಮಿಕ ಲಾಂಛನಗಳಾದ ಅಷ್ಟಾವರಣಗಳು, ಆಚರಣೆಗಳಾದ ಪಂಚಾಚಾರಗಳನ್ನು ಕೊಟ್ಟರು. ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ, ಭೂ ಮಂಡಲದ ಯಾವುದೇ ಭಾಗದಲ್ಲಿ, ಒಂದು ಧರ್ಮ ಗುರುವಿನ ಜೀವಿತ ಅವಧಿಯಲ್ಲೇ ಲಿಂಗಾಯತ ಧರ್ಮದಷ್ಟು ಪರಿಪೂರ್ಣವಾದ ಧರ್ಮ ಮತ್ತಾವುದೂ ಆಗಲಿಲ್ಲ. ಗುರುಬಸವಣ್ಣನವರು ಅಂದು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅನುಯಾಯಿಗಳನ್ನು ಹೊಂದಿದ್ದರು. ಧಾರ್ಮಿಕ ಸಂಹಿತೆಯಾಗಿ ವಚನ ಸಾಹಿತ್ಯವನ್ನು ಕೊಟ್ಟರು. ತಾವೊಬ್ಬರೇ ವಚನಗಳನ್ನು ಬರೆಯದೇ ತಮ್ಮ ಸನ್ನಿಧಿಗೆ ಬಂದ ಎಲ್ಲರಿಗೂ ಶಿಕ್ಷಣವನ್ನು ಕೊಟ್ಟು, ಅನುಭಾವದ ನುಡಿಗಲಿಸಿ ಅವರಿಂದಲೂ ಅನುಭಾವದ ನುಡಿಗಳು ವಚನಗಳ ರೂಪದಲ್ಲಿ ಹೊರ ಹೊಮ್ಮುವಂತೆ ಮಾಡಿದರು. ಗುರುಬಸವಣ್ಣನವರು ತತ್ವವನ್ನು ಕೇವಲ ಬೋಧಿಸಿದೆ ಅದನ ...

                                               

ಉಪ

ವಚನ ಸಾಹಿತ್ಯ ಕನ್ನಡ ನಾಡಿನ ಶಿವ ಶರಣರರಲ್ಲಿ ದೇವರ ದಾಸಿಮಯ್ಯನವರು 11 ನೇ ಶತಮಾನದಲ್ಲಿ ಆಗಿ ಹೋದ ಶರಣರು. ಮಹಾಶಿವಶರಣರಲ್ಲಿ ಇವರೊಬ್ಬರು. ಶಿವ ಶರಣರಲ್ಲಿ ಮೊದಲಿಗರಾದ ಮೊಟ್ಟ ಮೊದಲ ವಚನಕಾರ ದೇವರ ದಾಸಿಮಯ್ಯನವರು, ಜನಪದ ಜಗದ್ಗುರು ಎಂಬ ಬಿರುದು ಸಹ ಇವರಿಗೆ ಇದೆ. ದೇವರ ದಾಸಿಮಯ್ಯನು ಒಬ್ಬ ಐತಿಹಾಸಿಕ ಪುರುಷ ನೆಂಬುದಕ್ಕೆ ಶಿಲಾ ಶಾಸನಗಳು ಬಲವಾದ ಪ್ರಮಾಣಗಳಾಗಿವೆ. ಅವರ ನಂತರ ಸ್ವಲ್ಪ ಕಾಲ ದಲ್ಲಿಯೇ ಅವತರಿಸಿದ ಬಸವಣ್ಣನವರು ಈ ಶರಣ ದಂಪತಿಗಳ ಮಹಿಮೆಯನ್ನು ಅವರ ಚರಿತ್ರೆಯಲ್ಲಿ ಘಟನೆಗಳನ್ನು, ವಚನಗಳನ್ನು ತನ್ನ ವಚನ ವಾಜ್ಞಯದಲ್ಲಿ ನಿರರ್ಗಳವಾಗಿ ಉಲ್ಲೇಖಿಸಿದ್ದಾರೆ. ದೇವರ ದಾಸಿಮಯ್ಯನವರ ಉಪಲಬ್ಧ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸ ...

                                               

ದಾನಪ್ಪ ಜತ್ತಿ ಶಾಸ್ತ್ರಿ

ದಾನಪ್ಪ ಜತ್ತಿಶಾಸ್ತ್ರಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ತಿಕೋಟದಲ್ಲಿ. ತಂದೆ ಸಿದ್ರಾಮಪ್ಪ ಜತ್ತಿ, ತಾಯಿ ದೊಡ್ಡಮ್ಮ. ಪ್ರಾರಂಭಿಕ ಶಿಕ್ಷಣ ತಿಕೋಟದಲ್ಲಿ. ಓದು ಮುಂದುವರೆಸಲಾಗದ ಪರಿಸ್ಥಿತಿಯಿಂದ ಬಂದ ಅಡೆ-ತಡೆ. ಆದರೆ ಪ್ರವಚನ, ಕೀರ್ತನೆ ಹೇಳುವ ಕಲೆ ಬಾಲ್ಯದಿಂದಲೇ ಸಿದ್ಧಿಸಿದ ವಿದ್ಯೆ. ಚಿಕ್ಕ ವಯಸ್ಸಿನಿಂದಲೇ ರಂಗಭೂಮಿಯಿಂದ ಆಕರ್ಷಿತರು. ಸ್ತ್ರೀ ಪಾತ್ರದಲ್ಲಿ ಪಡೆದ ಜನ ಮೆಚ್ಚುಗೆ. ಧಾರವಾಡದ ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಂಡ ಹಲವಾರು ನಾಟಕಗಳು. ಬಸವಾದಿ ಪ್ರಥಮರ ಚರಿತ್ರೆ, ದಾಸ ಸಾಹಿತ್ಯ, ವಚನ ಸಾಹಿತ್ಯಗಳ ದಾರ್ಶನಿಕ ತತ್ತ್ವ ನಿರೂಪಣೆ, ಸಂಗೀತದೊಂದಿಗೆ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಭಾವೈಕ್ಯತೆಯ ಮತ್ತು ರಾಷ್ಟ್ರೀಯ ಪ್ರಜ್ಞೆಯೊಂದಿಗೆ ಜನಸಮುದಾಯಕ್ಕೆ ಮುಟ್ಟಿಸುವಲ್ಲಿ ಅದ್ವಿತೀಯರು. ಹಲವಾರು ಸಾಹಿತ್ ...

                                               

ವೈ.ಚಂದ್ರಶೇಖರ ಶಾಸ್ತ್ರಿ

ವೈ. ಚಂದ್ರಶೇಖರ ಶಾಸ್ತ್ರಿ ಗಳು ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ಜನಿಸಿದರು. ಗದಗದಲ್ಲಿ ಆರಂಭದ ಶಿಕ್ಷಣ ಮುಗಿಸಿ ಕಾಶಿ, ಕೋಲಕಾಟಾಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದು ‘ ವ್ಯಾಕರಣ ತಿರ್ಥ’ ಪದವಿ ಪಡೆದರು. ನಂತರ ಯಾದಗಿರಿಯ ‘ಶಂಕರ ಸಂಸ್ಕೃತ ಕಾಲೇಜಿ’ನಲ್ಲಿ, ಅಧ್ಯಾಪಕರಾಗಿ, ಹುಬ್ಬಳ್ಳಿಯ ‘ ಶ್ರೀ ಜಗದ್ಗುರು ಗಂಗಾಧರ ಕಾಲೇಜಿ’ ನಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ಚಂದ್ರಶೇಖರ ಶಾಸ್ತ್ರಿಗಳ ಕೃತಿಗಳು: ಬಸವತತ್ವ ರತ್ನಾಕರ, ಚಾಣಕ್ಯನೀತಿ ದರ್ಪಣ, ರೇಣುಕಾವಿಜಯ, ಸಿದ್ಧೇಶ್ವರ ವಚನ, ರಾಜಗಿರಿ, ಮದನಮೋಹನ ಮಾಳವೀಯ ಚರಿತೆ ೧೯೪೦ರಲ್ಲಿ ಧಾರವಾಡದಲ್ಲಿ ಜರುಗಿದ ೨೫ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

                                               

ಕಾಪ್ಟಿಕ್ ಭಾಷೆ ಮತ್ತು ಸಾಹಿತ್ಯ

ಇಂದು ಮೃತ ಭಾಷೆಗಳ ವರ್ಗಕ್ಕೆ ಸೇರಿಹೋಗಿರುವ ಈಜಿಪ್ಟಿನ ಭಾಷೆಗಳಲ್ಲಿ ಕಾಪ್ಟಿಕ್ ಭಾಷೆಯೂ ಒಂದು. ಇದು ಪ್ರಾಚೀನ ಈಜಿಪ್ಷಿಯನ್ ಭಾಷೆಯಿಂದ ಉದಿಸಿದ ಭಾಷೆಗಳಲ್ಲೊಂದಾಗಿದೆ. ಭಾಷೆಯ ವರ್ಗೀಕರಣದ ದೃಷ್ಟಿಯಿಂದ ಹ್ಯಾಮಿಟೊ ಭಾಷಾವರ್ಗಕ್ಕೆ ಸೇರಿರುವ ಭಾಷೆ ಇದು. ಈಜಿಪ್ಟಿನವರು ಎಂಬ ಅರ್ಥವನ್ನು ಸೂಚಿಸುವ ಗ್ರೀಕ್ ಭಾಷೆಯ ಐಗುಪ್ತೊಯ್ ಎಂಬುದರಿಂದ ನಿಷ್ಪನ್ನವಾದ ಕುಬ್ತ್ ಅಥ ಕುóಬ್ತ್ ಎಂಬ ಅರಬ್ಬೀ ಶಬ್ದದ ಐರೋಪ್ಯ ರೂಪವೇ ಕಾಪ್ಟ್ ಇರಬೇಕೆಂದು ವಿದ್ವಾಂಸರು ಭಾವಿಸಿದ್ದಾರೆ. ಮತ್ತೆ ಕೆಲವರು ಇದು ಉತ್ತರ ಈಜಿಪ್ಟಿನಲ್ಲಿದ್ದ ಕಾಪ್ಪೋಸ್ ಎಂಬ ಪ್ರಾಚೀನ ನಗರಕ್ಕೆ ಸಂಬಂಧಪಟ್ಟಿರುವ ಭಾಷೆ. ಈ ಭಾವನೆಯೇ ಕಾಪ್ಟ್ ಎನ್ನುವ ಶಬ್ದ ರೂಪಗೊಳ್ಳಲು ಕಾರಣವಾಗಿರಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಕಾಪ್ಟ್ ಎಂಬುದು ಏಕಪ್ರಕೃತಿವಾದಿ ಜಾಕೊಬೈಟ್ ಪಂಥದ ಈಜಿಪ್ಟಿನ ಕ್ರೈಸ್ ...

                                               

ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ

1.ಧರ್ಮವೀರ ಶಂಕ್ರಣ್ಣನವರ ಚರಿತ್ರೆ 2.ಮದನಮೋಹನ ಮಾಲವೀಯರ ಚರಿತ್ರೆ 3.ಸ್ವತಂತ್ರ ಸಿದ್ದಲಿಂಗೇಶ್ವರ ವಚನ 4.ಸಿದ್ದೇಶ್ವರ ವಚನ 5.ರಾಗಗಿರಿ 6.ಶಬರಶಂಕರ ಪಾರ್ಥಪುರುಷ 7.ಲಿಂಗಧಾರಣವೂ ವೇಧಮಂತ್ರಗಳೂ 8.ಚಾಣಕ್ಯನೀತಿ ದರ್ಮಣ 9.ಭಗವಾನ್ ಬಸವೇಶ್ವರ ಜಯಂತಿ 10.ರೇಣುಕ ವಿಜಯ 11.ಕೊಲ್ಲಿ ಪಾಕಿ 12.ಆತ್ಮಚರಿತ್ರೆ-ಓಳಗೊಂಡಿದೆ ಚಂದ್ರಶೇಖರ ಶಾಸ್ತ್ರಿಗಳು ಸಂಸ್ಕ್ರತ ವಿದ್ವಾಂಸರಾಗಿ ಹಾಗೂ ಪಾಂಡಿತ್ಯಪೂರ್ಣ ಕೃತಿರಚನಾಕಾರರಾಗಿದರು. ಶ್ರೇಷ್ಠ ಆಡಳಿತಗಾರರಾಗಿ ಉತ್ತಮ ಸಂಶೋಧಕರಾಗಿ ಪತ್ರಿಕೋದ್ಯಮಿಯಾಗಿ ಸಂಘಟಕರಾಗಿ ರಾಜಕೀಯ ವಿಮರ್ಶಕರಾಗಿ ಕೃಷಿಕರಾಗಿ ಚಲನಚಿತ್ರ ನಿರ್ಮಾಪಕರಾಗಿ ಹೀಗೆಯೇ ಹತ್ತು ಹಲವು ಕ್ಷೇತ್ರವಾಗಿ ತಮ್ಮ ವ್ಯಕ್ತಿತ್ವವನ್ನು ಪ್ರಕಾಶಿಸಿದವರು. 1919 ರಿಂದ ನಿರಂತರವಾಗಿ ಸುಮಾರು ಅರ್ಧ ಶತಮಾನದ ಕಾಲ ನಾಡಿನ ವಿವಿಧ ಪತ್ರಿಕೆಗಳಿಗೆ ಧರ್ಮ ಸ ...

ವಚನ ಸಾಹಿತ್ಯ
                                     

ⓘ ವಚನ ಸಾಹಿತ್ಯ

ಸಮಗ್ರ ವಚನ ಸಾಹಿತ್ಯ ಕನ್ನಡದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದು. ೧೧ನೇ ಶತಮಾನದ ಉತ್ತರಾರ್ಧದಲ್ಲಿ ಉದಯಿಸಿ ೧೨ನೇ ಶತಮಾನದ ಕಡೆಯವರೆಗೂ ಬಸವಣ್ಣನವರ-ಜನಸಾಮಾನ್ಯರ ಆಂದೋಲನದ ಭಾಗವಾಗಿ ಬೆಳೆದು ಬಂತು. ಇದು ಸಾಹಿತ್ಯ ಪರಿಭಾಷೆಯ ಒಂದು ವಿಶಿಷ್ಟ ಸಾಹಿತ್ಯ ಪ್ರಕಾರದ ಕಾವ್ಯ. ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ ಕನ್ನಡದ ವಿಶೇಷ ಕಾವ್ಯ ಪ್ರಕಾರ. ವಚನ ಸಾಹಿತ್ಯವು ತನ್ನ ಕಾಲದಲ್ಲಿನ ಜನರ ಮನೋಭಿವ್ಯಕ್ತಿಗೆ ಸಂಗಾತಿಯಾಯಿತು. ವಚನ ಎಂದರೆ ಪ್ರಮಾಣ, ಕೊಟ್ಟ ಮಾತು ಎಂದರ್ಥ.

                                     

1. ಇತಿಹಾಸ

  • ವಿಸ್ತೃತ ಲೇಖನ:ಕನ್ನಡದಲ್ಲಿ ವಚನ ಸಾಹಿತ್ಯ

೧೧ನೇ ಶತಮಾನದಲ್ಲಿ ಉದಯಿಸಿದ ಧರ್ಮ ಪ್ರೇರಿತ ಸಾಹಿತ್ಯವಾದ ವಚನವು, ಕನ್ನಡದ ಪ್ರಾಚೀನ ಸಾಹಿತ್ಯದಡಿಯಲ್ಲಿ ವರ್ಗಾಯಿಸಲ್ಪಟ್ಟಿದೆ. ಸ್ವಂತಿಕೆಯಿಂದ ಮೆರೆವ ವಚನಗಳು ಕನ್ನಡ ಸಾಹಿತ್ಯದಲ್ಲಿ ಪ್ರಭಾವಶಾಲಿ ಆತ್ಮವಿಮರ್ಶೆಯ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ವಿಜೃಂಭಿಸಿ ಮುಂದಿನ ಸಾಹಿತ್ಯ ಪರಂಪರೆಗಳ ಮೇಲೆ ಪ್ರಭಾವ ಬೀರಿ ವಿಶ್ವಸಾಹಿತ್ಯದಲ್ಲೂ ಒಂದು ಅವಿಭಾಜ್ಯ ಅಂಗವಾಗಿ ಉಳಿದಿದೆ. ವಚನ ಸಾಹಿತ್ಯವನ್ನು, ವಚನಗುರು ದೇವರ ದಾಸಿಮಯ್ಯ ಮಾದಾರ ಚೆನ್ನಯ್ಯ ನವರ ಆದಿಯಾಗಿ ಗುರು ಬಸವಣ್ಣನವರು ಮತ್ತು ಅವರ ಸಮಕಾಲೀನ ಶರಣರು ನೀಡಿದರು.

ವಚನಗುರು ಮಾದಾರ ಚನ್ನಯ್ಯ ರವರು ೧೦ ರಿಂದ ೧೧ನೇ ಶತಮಾನದ ಬಸವ ಪೂರ್ವ ಯುಗ ದಲ್ಲಿಯೇ ಇದ್ದರು ಎಂದು ಸಂಶೋಧನೆಗಳ ಮೂಲಕ ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಬಿಳಿಗಾವಲು ಗ್ರಾಮದಲ್ಲಿ ಜನಿಸಿದ್ದರು ಎನ್ನಲಾಗಿದೆ. ಇವರು ರಚಿಸಿದ ಹಲವು ವಚನಗಳಲ್ಲಿ ೧೦ ವಚನಗಳು ಮಾತ್ರ ಲಭ್ಯವಾಗಿದೆ. ಮಾದಾರ ಚನ್ನಯ್ಯ ನವರು ವಚನಕಾರರಲ್ಲಿಯೇ ಮೊದಲಿಗರು ಎಂದು ತಿಳಿಯಲು ಜೇಡರ ದಾಸಿಮಯ್ಯ ತಮ್ಮ ವಚನಗಳಲ್ಲಿ ಸ್ಮರಿಸಿರುವುದನ್ನು ಕಾಣಬಹುದಾಗಿದೆ.

                                     

2. ಪರಿಣಾಮ

ಸಮಾಜದ ಎಲ್ಲಾ ಜಾತಿಯವರೂ ವಚನವನ್ನು ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ಅನುಭವಗಳನ್ನು ಹೇಳಿಕೊಳ್ಳತೊಡಗಿದ್ದರಿಂದ ವಚನ ಸಾಹಿತ್ಯ ಒಂದು ಚಳವಳಿಯೂ ಆಯಿತು. ಬಂಡಾಯ ಸಾಹಿತ್ಯಕ್ಕಿಂತ ಮೊದಲು ಕನ್ನಡ ನಾಡಿನಲ್ಲಿ ವಚನ ಒಂದು ಚಳವಳಿಯ ಮುಖವಾಣಿಯಾಗಿತ್ತೆಂದರೆ ಅದರ ಸಾಮಾಜಿಕ ವ್ಯಾಪಕತೆ ಅಪಾರವಾದುದೆಂಬುದು ಅರಿವಿಗೆ ಬಾರದೆ ಇರದು. ವಚನಗಳು ಅತ್ಯಂತ ಸರಳ ಹಾಗೂ ನೇರವಾಗಿ ದೇಸಿಯ ಸೊಗಡಿನಿಂದ ಕೂಡಿವೆ. ಹಲವಾರು ಕವಿಗಳು, ಮಠಾಧೀಶರು ಲಿಂಗಾಯತ ಸಿದ್ಧಾಂತವನ್ನು ಅಳವಡಿಸಿ ಸಾಹಿತ್ಯ ರಚಿಸಿದ್ದರೂ, ಇಡೀ ಲಿಂಗಾಯತ ಸಾಹಿತ್ಯದಲ್ಲಿ ಮುಖ್ಯ ಮತ್ತು ಅಪರೂಪದ ಅಭಿವ್ಯಕ್ತಿಯೆಂದರೆ ವಚನ ಸಾಹಿತ್ಯ. ಅದು ಸ್ಥಾವರ ಸಮಾಜವನ್ನು ತಿರಸ್ಕರಿಸಿ ಜಂಗಮ ಸಮಾಜವನ್ನು ನಂಬಿದ ಬಹಳ ದೊಡ್ಡ ಮಾನವೀಯ ಮೌಲ್ಯ. ಕಾಯಕ ಮತ್ತು ದಾಸೋಹಗಳ ಮೂಲಕ ಸಮಾಜೋತ್ಪನ್ನಗಳ ಸಮಪಾಲು ಸಿದ್ಧಾಂತವನ್ನು ಮಂಡಿಸುವ ಈ ಚಳವಳಿ ಭಾರತೀಯ ಸಂಸ್ಕೃತಿಯಲ್ಲೇ ಅತಿ ಪ್ರಮುಖವಾದುದು.

                                     

3. ಪ್ರಮುಖ ವಚನಕಾರರು

ವಚನ ಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಜನ ಶರಣರು ಶ್ರಮಿಸಿದ್ದಾರೆ. ತಮ್ಮ ವಚನಗಳಲ್ಲಿ ತಮ್ಮದೇ ಆದ ಅಂಕಿತನಾಮಗಳನ್ನು ಬಳಸಿದ್ದಾರೆ. ದೇವರ ದಾಸಿಮಯ್ಯ ರಾಮನಾಥ ಎಂದು ಬಳಸಿದರೆ, ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನ ಹಾಗೂ ಬಸವಣ್ಣನವರು ಕೂಡಲ ಸಂಗಮದೇವಮತ್ತು ಎಂದು ಬಳಸಿದ್ದಾರೆ. ಮತ್ತಿತರ ಸುಪ್ರಸಿದ್ಧ ವಚನಕಾರರೆಂದರೆ: ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಸೂಳೆ ಸಂಕವ್ವೆ, ಏಕಾಂತ ರಾಮಯ್ಯ, ಹಡಪದ ಅಪ್ಪಣ್ಣ, ಒಕ್ಕಲು ಮಾದಯ್ಯ, ಮಡಿವಾಳ ಮಾಚಯ್ಯ,ಆಯ್ದಕ್ಕಿ ಲಕ್ಕಮ, ಹೆಂಡದ ಮಾರಯ್ಯ, ಅಂಗಸೋಂಕಿನ ಲಿಂಗತಂದೆ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಅಕ್ಕಮ್ಮ, ಅಖಂಡ ಮಂಡಲೇಶ್ವರ, ಅಗ್ಘವಣಿ ಹಂಪಯ್ಯ, ಅಗ್ಘವಣಿ ಹೊನ್ನಯ್ಯ, ಅಜಗಣ್ಣ ತಂದೆ, ಅರಿವಿನ ಮಾರಿತಂದೆ, ಅನುಗಲೇಶ್ವರ, ಅನಾಮಿಕ ನಾಚಯ್ಯ, ಅಪ್ರಮಾಣ ಗುಹೇಶ್ವರ, ಅಪ್ಪಿದೇವಯ್ಯ, ಅವಸರದ ರೇಕಣ್ಣ, ಅಮರಗುಂಡದ ಮಲ್ಲಿಕಾರ್ಜುನ ತಂದೆ, ಅಮುಗೆ ರಾಯಮ್ಮ, ಅಮುಗಿದೇವಯ್ಯ, ಅಲ್ಲಮಪ್ರಭುದೇವರು,ಅಶ್ವಥರಾಮ, ಆಯ್ದಕ್ಕಿ ಮಾರಯ್ಯ, ಆಯ್ದಕ್ಕಿ ಲಕ್ಕಮ್ಮ, ಆದಯ್ಯ, ಆನಂದ ಸಿದ್ಧೇಶ್ವರ, ಆನಂದಯ್ಯ, ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ, ಈಶ್ವರೀಯ ವರದ ಚೆನ್ನರಾಮ, ಉಗ್ಘಡಿಸುವ ಗಬ್ಬಿದೇವಯ್ಯ, ಉರಿಲಿಂಗದೇವ, ಉರಿಲಿಂಗಪೆದ್ದಿ, ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ, ಉಪ್ಪರಗುಡಿಯ ಸೋಮಿದೇವಯ್ಯ, ಉಳಿಯುಮೇಶ್ವರ ಚಿಕ್ಕಣ್ಣ, ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ, ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ, ಎಲೆಗಾರ ಕಾಮಣ್ಣ, ಏಕಾಂತ ವೀರಸೊಡ್ಡಳ, ಏಕಾಂತರಾಮಿತಂದೆ, ಏಕೋರಾಮೇಶ್ವರ ಲಿಂಗ, ಏಲೇಶ್ವರ ಕೇತಯ್ಯ, ಒಕ್ಕಲಿಗ ಮುದ್ದಣ್ಣ, ಕಂಬದ ಮಾರಿತಂದೆ, ಕರಸ್ಥಲದ ಮಲ್ಲಿಕಾರ್ಜುನೊಡೆಯ, ಕರುಳ ಕೇತಯ್ಯ, ಕದಿರಕಾಯಕದ ಕಾಳವ್ವೆ, ಕದಿರರೆಮ್ಮವ್ವೆ ಕನ್ನಡಿಕಾಯಕದ ಅಮ್ಮಿದೇವಯ್ಯ, ಕನ್ನಡಿಕಾಯಕದ ರೇಮಮ್ಮ, ಕನ್ನಡ ಮಾರಿತಂದೆ, ಕಲಕೇತಯ್ಯ, ಕಲ್ಲಯ್ಯದೇವರು, ಕುರಂಗಲಿಂಗ, ಕುರಂಗಲಿಂಗ, ಕುರಂಗೇಶ್ವರಲಿಂಗ, ಕುಷ್ಟಗಿ ಕರಿಬಸವೇಶ್ವರ, ಕೂಗಿನ ಮಾರಯ್ಯ, ಕೂಡಲಸಂಗಮೇಶ್ವರ, ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ, ಕಾಡಸಿದ್ಧೇಶ್ವರ, ಕಾಮಾಟದ ಭೀಮಣ್ಣ, ಕಾಲಕಣ್ಣಿಯ ಕಾಮಮ್ಮ, ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ, ಕೊಟ್ಟಣದ ಸೋಮಮ್ಮ, ಕೊಟಾರದ ಸೋಮಣ್ಣ, ಕೋಲ ಶಾಂತಯ್ಯ, ಕಿನ್ನರಿ ಬ್ರಹ್ಮಯ್ಯ, ಕೀಲಾರದ ಭೀಮಣ್ಣ, ಗಂಗಾಂಬಿಕೆ, ಗಜೇಶ ಮಸಣಯ್ಯ, ಗಜೇಶಮಸಣಯ್ಯದ ಪುಣ್ಯಸ್ತ್ರೀ, ಗಣದಾಸಿ ವೀರಣ್ಣ, ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ, ಗುರು ವಿಶ್ವೇಶ್ವರಾ, ಗುರುಪುರದ ಮಲ್ಲಯ್ಯ, ಗುರುಬಸವೇಶ್ವರ, ಮೋಳಿಗೆ ಮಾರಯ್ಯ,

                                               

ಪಿ.ವಿ.ನಾರಾಯಣ

ಡಾ| ಪಿ.ವಿ.ನಾರಾಯಣ ಇವರು ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಪ್ರವಾಚಕರಾಗಿದ್ದಾರೆ." ಬಳ್ಳಿಗಾವೆ”," ವಚನ ಚಳುವಳಿ”," ವಚನ ಸಾಹಿತ್ಯ-ಒಂದು ಸಾಂಸ್ಕೃತಿಕ ಅಧ್ಯಯನ” ಮೊದಲಾದ ವಿಮರ್ಶಾ ಗ್ರಂಥಗಳನ್ನಲ್ಲದೆ ಮೂರು ಸಂಪಾದಿತ, ಆರು ಅನುವಾದಿತ ಕೃತಿಗಳನ್ನು ಹಾಗು ಎಂಟು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಬಸವಣ್ಣನವರನ್ನು ಕುರಿತು ತೀವ್ರ ವಿವಾದ ಉಂಟು ಮಾಡಿದ ಇವರ ಕೃತಿ "ಧರ್ಮಕಾರಣ"ವನ್ನು ಸಾರ್ವಜನಿಕರ ಒತ್ತಾಯದ ಮೆರೆಗೆ ಕರ್ನಾಟಕ ಸರ್ಕಾರವು ನಿಷೇಧಿಸಿದೆ. ಸುಪ್ರೀಂ ಕೋರ್ಟ ಕೂಡಾ ಈ ಕೃತಿಯ ನಿಷೇಧವನ್ನು ಎತ್ತಿ ಹಿಡಿದಿದೆ.

                                               

ವಚನಕಾರರ ಅಂಕಿತ ನಾಮಗಳು

೧೨ ನೆ ಶತಮಾನದ ಮೂಲ ವಚನಕಾರರಿಂದಿಡಿದು, ೨೦ನೇ ಶತಮಾನದ ವಚನಕಾರರವರೆವಿಗೂ ನೂರಾರು ಜನ ತಮ್ಮದೇ ಧಾಟಿಯಲ್ಲಿ ವಚನಗಳನ್ನು ರಚಿಸಿ, ಅಂಕಿತನಾಮಗಳಿಂದ ತಮ್ಮನ್ನು ಗುರ್ತಿಸಿ ಕೊಂಡಿದ್ದಾರೆ. ಇದರೊಳಗೆ ದಾಸವರೇಣ್ಯರುಗಳು ಬರುವುದು ವಿಶೇಷವಾಗಿದೆ. ಅಂತಹ ವಚನಕಾರರ ಪಟ್ಟಿಯನ್ನು ಈ ಕೆಳಕಂಡಂತೆ ಕೊಡಲಾಗಿದೆ.

                                               

ಗಂಗಮ್ಮ

ಗಂಗಮ್ಮ ಹಾದರದ ಕಾಯಕ ಮಾಡುತ್ತಿದ್ದವಳು. ವೃತ್ತಿಗೌರವ ವಚನ ಸಾಹಿತ್ಯ ಕಾಲದ ಅಪೂರ್ವ ಕೊಡುಗೆ. ಅವಳ ದೃಷ್ಟಿಯಲ್ಲಿ ವ್ಯಕ್ತಿ ಸಮಾಜದಲ್ಲಿ ನಿಷ್ಠೆ ಯಿಂದ, ಪ್ರಾಮಾಣಿಕತೆಯಿಂದ ಮೈಗಳ್ಳನಾಗದೆ ಬದುಕುವುದು ಮುಖ್ಯವೆ ಹೊರತು, ಅವನದು ಮೇಲು ಕಾಯಕ, ನನ್ನದು ಕೀಳು ಕಾಯಕವೆಂಬ ಕೀಳರಿಮೆ ಹೊಂದ ಬಾರದು. ತನ್ನ ವೃತ್ತಿಯ ಬಗ್ಗೆ ಅಭಿಮಾನ,ಗೌರವವನ್ನು ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ. ನಂತರ ಬಸವಣ್ಣನವರ ಮಾರ್ಗದರ್ಶನದಂತೆ ತನ್ನ ಕಾಯಕವನ್ನು ಬಿಟ್ಟು ಮಾರಯ್ಯ ಎಂಬುವನನ್ನು ವರಿಸಿ ಗೃಹಿಣಿಯಾಗುತ್ತಾಳೆ. ಈಕೆಯ ವಚನಗಳ ಅಂಕಿತ "ಗಂಗೇಶ್ವರಲಿಂಗ".

                                               

ಗೊಗ್ಗವ್ವೆ

ಗೊಗ್ಗವ್ವೆ ಬಾಲ್ಯದಿಂದಲೂ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ ಗೊಗ್ಗಳೇಶ್ವರ ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು ಧೂಪದ ಗೊಗ್ಗವ್ವೆಯೆಂದೂ ಕರೆಯುವರು. ಈಕೆಯ ವಚನಗಳ ಅಂಕಿತ ನಾಸ್ತಿನಾಥಾ.

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →