Топ-100
Back

ⓘ ಪ್ಯಾರಿಸ್ ಪ್ರಣಯ, ಚಲನಚಿತ್ರ. ಪ್ಯಾರಿಸ್ ಪ್ರಣಯ ೨೦೦೩ರ ಕನ್ನಡ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ..                                               

ನನ್ ಲೈಫ್ ಅಲ್ಲಿ (ಚಲನಚಿತ್ರ)

ನಾಗತಿಹಳ್ಳಿ ಸಿನಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ದೇಶಕ ರಾಮ್ ದೀಪ್ ಸಾರಥ್ಯದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಚಲನಚಿತ್ರ. ಮೂಲತಹ ಕರ್ನಾಟಕದವರಾದ ರಾಮ್ ದೀಪ್ ವಿದೇಶದಲ್ಲಿ ಕೆಲವು ವರ್ಷಗಳ ಕಾಲ ತಂತ್ರಾಂಶ ತಂತ್ರ ಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡಿ, ಕನ್ನಡ ಚಲನಚಿತ್ರ ರಂಗದಲ್ಲಿ ಮೇಷ್ಟ್ರು ಎಂದು ಕರೆಯಲ್ಪಡುವ ನಾಗತಿಹಳ್ಳಿ ಚಂದ್ರಶೇಖರ್ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಾಗತಿಹಳ್ಳಿ ಚಂದ್ರಶೇಖರ್ ಗರಡಿಯಲ್ಲಿ ಕನ್ನಡದ ಪ್ಯಾರಿಸ್ ಪ್ರಣಯ, ಅಮೃತಧಾರೆ ಚಲನಚಿತ್ರಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಸಂಪೂರ್ಣವಾಗಿ ಕರ್ನಾಟಕದಲ್ಲಿಯೇ ಚಿತ್ರಿಸಲಾಗಿದೆ. ಕರ್ನಾಟಕದ ಉಡುಪಿ, ಮಂಗಳೂರು, ಹಾಸನ, ಸಕಲೇಶಪುರ ಮತ್ತು ಬೆಂಗಳೂರುಗಳಲ್ಲಿ ಚಿತ್ರೀಕರಣ ನಡೆದಿದ್ದು, ಯುವ ಮತ್ತು ಇತ್ತೀಚಿಗೆ ಪ್ರ ...

                                     

ⓘ ಪ್ಯಾರಿಸ್ ಪ್ರಣಯ (ಚಲನಚಿತ್ರ)

ಪ್ಯಾರಿಸ್ ಪ್ರಣಯ ೨೦೦೩ರ ಕನ್ನಡ ಪ್ರಣಯಪ್ರಧಾನ ನಾಟಕೀಯ ಚಲನಚಿತ್ರವಾಗಿದೆ. ಇದನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹೊಸಬರಾದ ರಘು ಮುಖರ್ಜಿ ಮತ್ತು ಮಿನಲ್ ಪಾಟಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೆ ರಾಜೇಶ್, ತಾರ ಮತ್ತು ಶರತ್ ಲೋಹಿತಾಶ್ವ ಇತರ ಗಮನಸೆಳೆಯುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ವೆಂಟಿ ಫ಼ಸ್ಟ್ ಸೆಂಚುರಿ ಲಯನ್ಸ್ ಸಿನಮಾ ಚಿತ್ರವನ್ನು ನಿರ್ಮಿಸಿತು.

ಚಿತ್ರವು ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ೧೮ ಎಪ್ರಿಲ್ ೨೦೦೩ರಂದು ಬಿಡುಗಡೆಯಾಯಿತು. ಪ್ಯಾರಿಸ್, ರೋಮ್, ದಕ್ಷಿಣ ಫ಼್ರಾನ್ಸ್ ಮತ್ತು ಸ್ಪೇನ್ನಂತಹ ಅನೇಕ ಐರೋಪ್ಯ ದೇಶಗಳಲ್ಲಿ ವ್ಯಾಪಕವಾಗಿ ಚಿತ್ರೀಕರಣವಾದ ಈ ಚಿತ್ರವು ಡೆಟ್ರಾಯಿಟ್‍ನಲ್ಲಿ ನಡೆದ ವಾರ್ಷಿಕ "ವಿಶ್ವ ಕನ್ನಡ ಸಮ್ಮೇಳನ - ೨೦೦೨"ರ ದೃಶ್ಯವನ್ನು ಒಳಗೊಂಡಿದೆ. ಇದು ೨೦೦೩ರ ವರ್ಷಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಗೆದ್ದಿತು.

                                     

1. ಪಾತ್ರವರ್ಗ

 • ಸೆಲ್ ಸೀತಾ ಆಗಿ ತಾರಾ
 • ಹರಿನಾಥ್ ಪೋಲಿಚರ್ಲ
 • ಆದಿತ್ಯ ಆಗಿ ಶರತ್ ಲೋಹಿತಾಶ್ವ
 • ಕ್ರಿಶ್ ಉರುಫ್ ಕೃಷ್ಣ ಆಗಿ ರಘು ಮುಖರ್ಜಿ
 • ಪೂರ್ವಿ ಆಗಿ ಮಿನಲ್ ಪಾಟಿಲ್
 • ಎಚ್. ಕೆ. ಮಾಸ್ತರ್ ಆಗಿ ರಾಜೇಶ್
 • ಸುಮಲತಾ
 • ನಾಗತಿಹಳ್ಳಿ ಚಂದ್ರಶೇಖರ್ ಅತಿಥಿ ಪಾತ್ರ
 • ಸುಧಾ ಬೆಳವಾಡಿ

ಅಶರೀರವಾಣಿ

 • ಮಿನಲ್ ಪಾಟಿಲ್‍ಗೆ ನಂದಿತ ಧ್ವನಿ ನೀಡಿದ್ದಾರೆ
 • ರಘು ಮುಖರ್ಜಿಗೆ ರಾಜೇಶ್ ಕೃಷ್ಣನ್ ಧ್ವನಿ ನೀಡಿದ್ದಾರೆ
                                     

2. ಸಂಗೀತ

ಚಿತ್ರದ ಸಂಗೀತವನ್ನು ಸ್ಟೀಫನ್ ಪ್ರಯೋಗ್ ಸಂಯೋಜಿಸಿದ್ದಾರೆ. ಧ್ವನಿವಾಹಿನಿಯು ಮುಖ್ಯವಾಗಿ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಗಳ ಮಿಶ್ರಣ ಸಂಗೀತದ ಮೇಲೆ ಕೇಂದ್ರೀಕರಿಸಿತು. ಹಾಡುಗಳಿಗೆ ಜನಪ್ರಿಯ ಬಾಲಿವುಡ್ ಹಿನ್ನೆಲೆ ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಷಾಲ್ ಧ್ವನಿ ನೀಡಿದರು. ಇದು ಕನ್ನಡ ಚಿತ್ರರಂಗದಲ್ಲಿ ಘೋಶಾಲ್‍ರ ಪ್ರಥಮ ಪ್ರವೇಶವಾಗಿತ್ತು. ಧ್ವನಿವಾಹಿನಿಯು ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಮತ್ತು ಮೆಚ್ಚುಗೆ ಪಡೆದ ಕವಿ ಜಿ.ಎಸ್.ಶಿವರುದ್ರಪ್ಪ ಬರೆದ ಶುದ್ಧ ಕನ್ನಡ ಸುಗಮ ಸಂಗೀತ ಹಾಡು "ಎದೆ ತುಂಬಿ ಹಾಡಿದೆನು"ವನ್ನು ಒಳಗೊಂಡಿತ್ತು. ಇನ್ನೊಂದೆಡೆ, ಇದು ಲುಡ್ವಿಗ್ ವಾನ್ ಬೆಟ್ಹೋವನ್ ಮತ್ತು ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್‌ರಂತಹ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ದಿಗ್ಗಜರು ನುಡಿಸಿದ ಸಂಗೀತ ತುಣುಕುಗಳನ್ನು ಹೊಂದಿತ್ತು. "ಕೃಷ್ಣ ನೀ ಬೇಗನೇ ಬಾರೊ" ಹಾಡು ಮೂಲತಃ ಸಂತ ವ್ಯಾಸತೀರ್ಥರು ಬರೆದು ಯಮುನಾ ಕಲ್ಯಾಣಿ ರಾಗದಲ್ಲಿ ಬರೆದು ಸಂಯೋಜಿಸಿದ ಇದೇ ಹೆಸರಿನ ಪ್ರಸಿದ್ಧ ಶಾಸ್ತ್ರೀಯ ಹಾಡಿನ ರೂಪಾಂತರವಾಗಿದೆ.

                                     

3. ಪ್ರಶಸ್ತಿಗಳು

 • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು
 • ಅತ್ಯುತ್ತಮ ಸಂಗೀತ ನಿರ್ದೇಶಕ - ಸ್ಟೀಫನ್ ಪ್ರಯೋಗ್
 • ಅತ್ಯುತ್ತಮ ಹಿನ್ನೆಲೆ ಗಾಯಕಿ - ನಂದಿತಾ
 • ಅತ್ಯುತ್ತಮ ಗೀತಸಾಹಿತಿ - ನಾಗತಿಹಳ್ಳಿ ಚಂದ್ರಶೇಖರ್
 • ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ
 • ಅತ್ಯುತ್ತಮ ಚಲನಚಿತ್ರ - ತುಮಕೂರು ದಯಾನಂದ್
Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →