Топ-100
Back

ⓘ ಇರಾನ್, ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ, ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ಪಶ್ಚಿಮ ಏಷ್ಯಾ ದೇಶ. ಕ್ರಿ.ಪೂ. 2500ಕ್ಕೂ ಹಿಂದಿನ ಇತಿಹಾಸ ಪಡೆದಿರುವ ಈ ದೇಶ 1935ರಿಂದೀಚೆಗೆ ಇರಾನ್ ..                                               

ಇರಾನಿನ ಇತಿಹಾಸ

ಪ್ರಾಕ್ತನ: ಕ್ಯಾಸ್ಪಿಯನ್ ಸಮುದ್ರದ ಬಳಿ ಇರುವ ಕೆಮೆನ್ ಶಾ ಎಂಬ ಗುಹೆಯಲ್ಲಿನ ಉತ್ಖನನಗಳಿಂದಲೂ ಈ ದೇಶದ ಹಲವು ಸ್ಥಳಗಳಲ್ಲಿ ದೊರಕಿರುವ ಶಿಲಾಯುಧಗಳಿಂದಲೂ ಇರಾನಿನಲ್ಲಿ ಪೂರ್ವಶಿಲಾಯುಗದ ಸಂಸ್ಕøತಿಗಳು ಹರಡಿದ್ದವು ಎಂಬ ವಿಷಯ ತಿಳಿದುಬಂದಿದೆ. ಭಕ್ತಿಯಾರಿ ಪರ್ವತ ಪ್ರದೇಶದಲ್ಲಿನ ತಂಗ್-ಇ-ಪಬ್ಬ ಎಂಬ ಗುಹೆಯಲ್ಲಿನ ಅಗೆತದಿಂದ, ಇರಾನಿನ ಜಾದೋ, ಹಸ್ಸುವಾ ಮುಂತಾದೆಡೆಗಳಲ್ಲಿ ಬೇಟೆಗಾರ ಜನ ಅಲ್ಲಲ್ಲಿ ನೆಲೆಗೊಂಡು ನವಶಿಲಾಯುಗದ ಜೀವನ ವಿಧಾನದತ್ತ ಪರಿವರ್ತನೆಯನ್ನು ಹೊಂದುತ್ತಿದ್ದ ಕಾಲದ ಸಂಸ್ಕøತಿಗಳು ಬೆಳಕಿಗೆ ಬಂದಿವೆ. ಈ ಜನ ಕಲ್ಲಿನ ಕೊಡಲಿ ಸುತ್ತಿಗೆ ಮುಂತಾದ ಆಯುಧಗಳನ್ನು ಉಪಯೋಗಿಸುತ್ತಿದ್ದರಲ್ಲದೆ, ಕೈಯಲ್ಲಿ ಮಾಡಿದ ಮಡಕೆಗಳನ್ನೂ ಬಳಸುತ್ತಿದ್ದರು.

                                               

ಶೇಖ್ ಜಾಯೆದ್ ಮಸೀದಿಯ ವಿಶ್ವದಾಖಲೆಯ ರತ್ನಗಂಬಳಿ

ಮಸೀದಿಯ ಪ್ರಧಾನ ಪ್ರಾರ್ಥನಾ ಕೊಠಡಿಯಲ್ಲಿ ಸಜಾಯಿಸಲಾಗಿರುವ ರತ್ನಕಂಬಳಿ, ೫,೬೨೭ ಚ. ಮೀ.ವಿಸ್ತಾರವಾಗಿದ್ದು, ಪ್ರಪಂಚದಲ್ಲೇ ಅತ್ಯಂತ ವಿಸ್ತಾರದ ರತ್ನಕಂಬಳಿಯೆಂದುಖ್ಯಾತಿಯ ದಾಖಲೆ ಹೊಂದಿದೆ. ಇರಾನ್ ನ ಖ್ಯಾತ ವಿನ್ಯಾಸಕಾರ, ಆಲ್ ಖಾಲಿಖಿಯವರು ವಿನ್ಯಾಸಗೊಳಿಸಿದ್ದಾರೆ. ಇರಾನ್ ನ ಖೊರ್ಸಾನ್ ಯೆಂಬ ಗ್ರಾಮದ ಸುಮಾರು ೧,೨೦೦ ನುರಿತ ಕುಶಲ ಮಹಿಳಾ ನೇಕಾರ ಕಾರೀಗರ್ ಗಳು ಎರಡು ವರ್ಷಗಳ ಕಾಲ ರತ್ನಕಂಬಳಿಯ ವಿನ್ಯಾಸಗಳನ್ನು ಸಂರಚಿಸಿ, ನೇಯ್ದು, ಇಮಾರತ್ ನ ವಿಶಾಲ ಹಜಾರ ಗಳಿಗೆ ಹೊಂದಿಸಿಕೊಟ್ಟಿದ್ದಾರೆ. ನಂತರ ಅಬುಧಾಬಿಗೆ ರವಾನಿಸಿವ ಸವಾಲಿನ ಕೆಲಸವೆಂದರೆ, ಸುಮಾರು ೧, ಮೀ. ಅಗಲದ ಹಾಗೂ ೧೦೦ ಮೀ. ಉದ್ದದ ಬಿಡಿ-ಭಾಗಗಳಲ್ಲಿ ತರಲಾಯಿತು. ಸುಮಾರು ೩೦ ನುರಿತ ಕೆಲಸಗಾರರು ಜೊತೆಯಲ್ಲೇ ಬಂದು, ಬಿಡಿಭಾಗಗಳನ್ನು ಒಂದೊಂದಾಗಿ ತೆಗೆದು ಜೋಡಿಸಿ, ಸುಂದರವಾದ ಒಂ ...

                                               

ಸೊರಾಯಲಾ ಅಮಾನವೀಯ ಕೃತ್ಯ

Soraya ಎಂ ಸ್ಟೋನಿಂಗ್ ಒಂದು ಸತ್ಯ ಕಥೆ ಫ್ರೆಂಚ್ ಪತ್ರಕರ್ತ Freidoune Sahebjam ಅವರ 1990 ಪುಸ್ತಕ la femme Lapidée, ಅಳವಡಿಸಿಕೊಂಡ ಒಂದು 2008 ಅಮೆರಿಕನ್ ಪರ್ಷಿಯನ್ ಭಾಷೆ ನಾಟಕ ಚಿತ್ರ. ಚಿತ್ರ ಸೈರಸ್ Nowrasteh ಮತ್ತು ನಕ್ಷತ್ರಗಳು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶಿತ Shohreh Aghdashloo, Freidoune Sahebjam, ವಿದೇಶಿ ಪತ್ರಕರ್ತ ಜೇಮ್ಸ್ Caviezel ಮತ್ತು Soraya Manutchehri, ಪಾತ್ರದಲ್ಲಿ Mozhan ಮಾರ್ನೊ ನಿರ್ದೇಶನದ ಇದೆ. ಸ್ಟೋನಿಂಗ್ ಇದು ನಿರ್ದೇಶಕ ಚಾಯ್ಸ್ ಪ್ರಶಸ್ತಿಯನ್ನು ಅಲ್ಲಿ 2008 ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತನ್ನ ವಿಶ್ವದ ಮೊದಲ ಪ್ರದರ್ಶನವಾಗಿತ್ತು. ಇದು ಕ್ಯಾಡಿಲಾಕ್ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಎರಡನೇ ರನ್ನರ್ ಅಪ್ ಆಗಿತ್ತು. ಪುಸ್ತಕ ಇರಾನ್ ನಿಷೇಧಿಸಲಾಗಿದ್ದು. ...

                                               

ಫೇಸ್ಬುಕ್

ಫೇಸ್‌ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ. ಬಳಕೆದಾರರು ತಮ್ಮ ಮಿತ್ರರನ್ನು ಇಲ್ಲಿ ಸೇರಿಸಬಹುದು ಮತ್ತು ಅವರಿಗೆ ಸಂದೇಶಗಳನ್ನು ಕಳುಹಿಸಬಹುದು, ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ, ಬಳಕೆದಾರರು ಊರು, ಕಾರ್ಯಾಲಯ, ಶಾಲೆ, ಮತ್ತು ಪ್ರದೇಶದವರು ಸಂಘಟಿಸಿದ ಸಂಪರ್ಕಜಾಲದಲ್ಲಿ ಸೇರಬಹುದು. ವಿಶ್ವವಿದ್ಯಾಲಯದ ನಿರ್ವಾಹಕರು ತಮ್ಮ ವಿದ್ಯಾರ್ಥಿಗಳು ಪರಸ್ಪರರನ್ನು ಒಳ್ಳೆಯ ರೀತಿಯಲ್ಲಿ ಪರಿಚಿತರಾಗಲಿ ಎಂಬ ಉದ್ದೇಶದಿಂದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೊಡುತ್ತಿದ್ದ ಪುಸ್ತಕಗಳ ಆಡುಮಾತಿನ ಹೆಸರಿಂದ ಈ ವೆಬ್‍ಸೈಟ್‌‍ನ ಹೆಸರು ಉಗಮಗೊಂಡಿದೆ. ಮಾರ್ಕ್‌‍ ಜ್ಯೂಕರ್‌ ...

                                               

ಬಲೂಚಿಸ್ತಾನ್, ಪಾಕಿಸ್ತಾನ್

ಬಲೂಚಿಸ್ತಾನ್,ಇದು ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಲ್ಲಿ ಒಂದಾಗಿದೆ. ವಿಸ್ತೀರ್ಣದಲ್ಲಿ ಇದು ಅತಿದೊಡ್ಡ ಪ್ರಾಂತ್ಯವಾಗಿದ್ದು, ದೇಶದ ನೈರುತ್ಯ ಭಾಗದಲ್ಲಿ ಇದೆ. ಹಾಗೂ ಕಡಿಮೆ ಜನಸಂಖ್ಯೆ ಹೊಂದಿದೆ. ಇದರ ಪ್ರಾಂತೀಯ ರಾಜಧಾನಿ ಮತ್ತು ದೊಡ್ಡ ನಗರ ಕ್ವೆಟ್ಟಾ. ಈಶಾನ್ಯದಲ್ಲಿ ಪಂಜಾಬ್ ಮತ್ತು ಖೈಬರ್ ಪಖ್ತುನ್ಖ್ವಾ, ಪೂರ್ವ ಮತ್ತು ಆಗ್ನೇಯದಲ್ಲಿ ಸಿಂಧ್, ದಕ್ಷಿಣಕ್ಕೆ ಅರೇಬಿಯನ್ ಸಮುದ್ರ, ಪಶ್ಚಿಮಕ್ಕೆ ಇರಾನ್ ಮತ್ತು ವಾಯುವ್ಯ ಮತ್ತು ಉತ್ತರದಲ್ಲಿ ಅಫ್ಘಾನಿಸ್ತಾನ ಗಡಿಗಳನ್ನು ಹೊಂದಿದೆ. ಪ್ರಾಂತ್ಯದ ಪ್ರಮುಖ ಜನಾಂಗೀಯ ಗುಂಪುಗಳಾದ ಬಲೂಚ್ ಜನರು ಮತ್ತು ಪಶ್ತೂನ್ಗಳು ಒಟ್ಟು ಜನಸಂಖ್ಯೆಯಲ್ಲಿ ಕ್ರಮವಾಗಿ ೪೬% ಮತ್ತು ೪೨% ರಷ್ಟು ಇರುವರು ಎಂದು ೨0೧೧ ಜನಗಣತಿಯಲ್ಲಿ ತಿಳಿದುಬಂದಿದೆ. ಉಳಿದ 12% ರಷ್ಟು ಸಣ್ಣ ಸಮುದಾಯಗಳಾದ ಬ್ರಾಹುಯಿಸ್, ಹಜಾರಸ್ ...

                                               

ಇರಾನಿನ ಆರ್ಥಿಕ ಚಟುವಟಿಕೆ

ಕೃಷಿ: ಇರಾನಿನ ಉತ್ಪಾದನೆಯ ಹೆಚ್ಚಿನ ಅಂಶ ಕೃಷಿ ವಸ್ತುಗಳೇ. ಇಲ್ಲಿನ ಮುಖ್ಯ ಬೆಳೆಯೆಂದರೆ ಗೋದಿ, ಬಾರ್ಲಿ, ಭತ್ತ, ಟೀ, ಅಂಜೂರ, ಹತ್ತಿ, ಹೊಗೆಸೊಪ್ಪು ಮತ್ತು ಅಫೀಮು. ಉತ್ತರ ಇರಾನಿನಲ್ಲಿ ಅಧಿಕ ಮಳೆ ಇದ್ದು ವಿಶೇಷ ಫಸಲನ್ನು ತೆಗೆಯಲಾಗುತ್ತದೆ. ಆದರೆ ದಕ್ಷಿಣದಲ್ಲಿ ಪದೇ ಪದೇ ಕೊರತೆಯಿರುತ್ತದೆ. ಇರಾನಿನಲ್ಲಿ ಅಫೀಮಿನ ಉತ್ಪಾದನೆ ಪ್ರಪಂಚದಲ್ಲಿ ಔಷಧ ತಯಾರಿಕೆಗೆ ಅಗತ್ಯವಾದ ಪ್ರಮಾಣದ 3ರಷ್ಟಿದೆ ಎಂದು ಅಂದಾಜು ಮಾಡಲಾಗಿದೆ. ಅಫೀಮನ್ನು ಸೇವಿಸುವ ಪರಿಪಾಠವನ್ನು ಇರಾನಿಜನ ಬೆಳೆಸಿಕೊಂಡಿದ್ದಾರೆ. ಇಲ್ಲಿನ ಬೇಸಾಯಕ್ರಮ ತೀರ ಹಿಂದುಳಿದಿದೆ. ತಲಾ ಉತ್ಪಾದನೆ ಹಾಗೂ ಎಕರೆಯೊಂದರ ಉತ್ಪಾದನೆ ತೀರ ಹಿಂದಿದ್ದು, ಕೃಷಿ ರಂಗದಲ್ಲಿ ಅದ್ಭುತ ಪ್ರಗತಿಯೇನೂ ಸಾಧಿತವಾಗಿಲ್ಲ. ಇತ್ತೀಚೆಗೆ ಅಮೆರಿಕದ ಸಹಾಯದಿಂದ ಕೃಷಿರಂಗದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ ...

ಇರಾನ್
                                     

ⓘ ಇರಾನ್

ಇರಾನ್, ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ, ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ಪಶ್ಚಿಮ ಏಷ್ಯಾ ದೇಶ. ಕ್ರಿ.ಪೂ. 2500ಕ್ಕೂ ಹಿಂದಿನ ಇತಿಹಾಸ ಪಡೆದಿರುವ ಈ ದೇಶ 1935ರಿಂದೀಚೆಗೆ ಇರಾನ್ ಎಂಬ ಹೆಸರನ್ನು ಅಧಿಕೃತವಾಗಿ ತಳೆದಿದೆ. ಇದು ಪ್ರಪಂಚದ ೧೮ನೇ ದೊಡ್ಡ ರಾಷ್ಟ್ರವಾಗಿದ್ದು ಸುಮಾರು ೭೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಉತ್ತರಕ್ಕೆ ಅರ್ಮೇನಿಯ, ಅಜರ್‍ಬೈಜಾನ್ ಮತ್ತು ತುರ್ಕ್‍ಮೇನಿಸ್ಥಾನ್, ಪೂರ್ವಕ್ಕೆ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ, ಮತ್ತು ಪಶ್ಚಿಮಕ್ಕೆ ಟರ್ಕಿ ಮತ್ತು ಇರಾಕ್‌ಗಳೊಂದಿಗೆ ಸೀಮೆಯನ್ನು ಹೊಂದಿದೆ. ಅಲ್ಲದೆ ಪರ್ಷಿಯನ್ ಕೊಲ್ಲಿ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ತಟಗಳನ್ನೂ ಹೊಂದಿದೆ. ಶಿಯ ಇಸ್ಲಾಮ್ ಇರಾನ್‍ನ ಅಧಿಕೃತ ಧರ್ಮ ಮತ್ತು ಪರ್ಷಿಯನ್ ಭಾಷೆ ಅಧಿಕೃತ ಭಾಷೆ.

ಇದರ ವಿಸ್ತೀರ್ಣ 6.36.294 ಚ.ಮೈ. ಜನಸಂಖ್ಯೆ 2 1/2 ಕೋಟಿಗಿಂತಲೂ ಹೆಚ್ಚು. ರಾಜಧಾನಿ ಟೆಹರಾನ್.

ದೇಶದಲ್ಲಿ ಸು. 2370 ಮೈ. ರೈಲುಮಾರ್ಗವೂ 16.000 ಮೈ. ರಸ್ತೆಯೂ ಇವೆ.

ಇರಾನ್ನಲ್ಲಿ, ಪರ್ಷಿಯನ್, ಅಜೆರ್ಬೈಜಾನ್, ಕುರ್ದಿಶ್ ಕುರ್ದಿಸ್ತಾನ ಮತ್ತು ಗಿಲಾಕ್ ಪ್ರಮುಖ ಜನಾಂಗೀಯ ಗುಂಪುಗಳಾಗಿವೆ.

                                     

1. ಹೆಸರು

ಪರ್ಷಿಯನ್ನರೆನಿಸಿಕೊಂಡ ಜನರಿರುವ ಜಿಲ್ಲೆಯಾದ ಪುರಾತನ ಪರ್ಷಿಸ್ ಅಥವಾ ಈಗಿನ ಫಾರ್ಸ್ ಪ್ರದೇಶವನ್ನಷ್ಟು ಮಾತ್ರವೇ ಪರ್ಷಿಯವೆನ್ನುವುದು ಹೆಚ್ಚು ಖಚಿತವೆನಿಸಿಕೊಳ್ಳಬಹುದಾದರೂ ಪಾಶ್ಚಾತ್ಯ ದೇಶಗಳಲ್ಲಿ ಇಡೀ ಇರಾನ್ ಪ್ರಸ್ಥಭೂಮಿ ಪ್ರದೇಶವನ್ನೂ ಈ ಪ್ರದೇಶದ ವ್ಯಾಪ್ತಿಗೆ ಒಳಪಟ್ಟ ರಾಷ್ಟ್ರವನ್ನೂ ಪರ್ಷಿಯವೆಂದೇ ಕರೆಯುವ ರೂಢಿ ಬಂದಿದೆ. ಪಾಶ್ಚಾತ್ಯ ಕೈವಾಡದ ನೆನಪು ತಾರದ ಇರಾನ್ ಎಂಬ ಹೆಸರು ಇಲ್ಲಿನ ಜನರ ರಾಷ್ಟ್ರಾಭಿಮಾನಕ್ಕೆ ಹೆಚ್ಚಿನ ಪುಷ್ಟಿಕೊಡುವುದೆಂದು ಭಾವಿಸಲಾಗಿದೆ. ವಿದೇಶಿ ಭಾಷೆಗಳಲ್ಲಿ ಪರ್ಷಿಯ ಎಂಬ ಹೆಸರಿಗೇ ಮತ್ತೆ ಮನ್ನಣೆ ನೀಡಿರುವುದಾಗಿ 1949ರಲ್ಲಿ ಅಲ್ಲಿನ ಸರ್ಕಾರ ಪ್ರಕಟಿಸಿತು. ಆದ್ದರಿಂದ ಈಗ ಇರಾನ್ ಪರ್ಷಿಯಗಳೆಂಬ ಎರಡು ಹೆಸರುಗಳೂ ಬಳಕೆಯಲ್ಲಿವೆ.

                                     

2. ಭೌಗೋಳಿಕ ಮಾಹಿತಿ ಮತ್ತು ಹವಾಗುಣ

ಈ ದೇಶದ ಉತ್ತರದಲ್ಲಿ ರಷ್ಯ ಮತ್ತು ಕ್ಯಾsಸ್ಟಿಯನ್ ಸಮುದ್ರ, ದಕ್ಷಿಣದಲ್ಲಿ ಓಮಾನ್ ಮತ್ತು ಪರ್ಷಿಯನ್ ಖಾರಿ, ಪಶ್ಚಿಮದಲ್ಲಿ ಇರಾಕ್, ಪೂರ್ವದಲ್ಲಿ ಆಫ್ಘಾನಿಸ್ಥಾನ ಮತ್ತು ಪಾಕಿಸ್ತಾನ ಇವೆ. ಪ್ರಸ್ಥಭೂಮಿ ಸಮುದ್ರಮಟ್ಟಕ್ಕೆ 4000ಗಿಂತಲೂ ಎತ್ತರವಾಗಿದೆ. ಸುತ್ತಲೂ ಪರ್ವತಶ್ರೇಣಿಗಳಿವೆ. ಇರಾನಿನಲ್ಲಿ ಖಂಡಾಂತರ ವಾಯುಗುಣವಿದೆ. ನೋಡಿ- ಖಂಡಾಂತರ-ವಾಯುಗುಣ-ಪ್ರದೇಶ-ಮಧ್ಯ-ಅಕ್ಷಾಂಶ). ಭಾರತದ ಬೇಸಗೆಯ ಮಾನ್ಸೂನ್ ಮಾರುತಗಳು ಸಿಂಧೂ ಬಯಲನ್ನೂ ಆಫ್ಘಾನಿಸ್ತಾನ ಬಲೂಚಿಸ್ತಾನಗಳ ಪರ್ವತಗಳನ್ನೂ ದಾಟಿದ ಅನಂತರ ಇರಾನಿನ ಮೇಲೆ ಬೀಸುತ್ತವೆ. ಆದ್ದರಿಂದ ಪೂರ್ವ ತೀರಪ್ರದೇಶಗಳಲ್ಲಿ ವಾತಾವರಣದಲ್ಲಿ ತೇವ ಹೆಚ್ಚು. ಒಳನಾಡಿನಲ್ಲಿ ಬೇಸಗೆಯಲ್ಲಿ ಬಹುತೇಕ ಒಣಹವೆ. ಸೆಯಿಸ್ತಾನ್ ಎಂಬಲ್ಲಿ ಜುಲೈ ತಿಂಗಳಲ್ಲಿ ಮಧ್ಯಸ್ಥ ಉಷ್ಣತೆ 90ಫ್ಯಾ. ಮುಟ್ಟುತ್ತದೆ. 5000ಗಿಂತ ಕಡಿಮೆ ಮಟ್ಟದಲ್ಲಿರುವ ಪ್ರದೇಶದಲ್ಲೆಲ್ಲ ನಡುಹಗಲು; ಬಹು ಘೋರ. ಕ್ಯಾಸ್ಪಿಯನ್ ಸಮುದ್ರಪ್ರದೇಶ ಬಿಟ್ಟು ಉಳಿದೆಡೆಗಳಲ್ಲಿ ಬೇಸಗೆಯಿಂದ ಚಳಿಗಾಲಕ್ಕೂ ಚಳಿಗಾಲದಿಂದ ಬೇಸಗೆಗೂ ಥಟ್ಟನೆ ಬದಲಾವಣೆಯಾಗುತ್ತದೆ. ಚಳಿಗಾಲದಲ್ಲಿ ಸೈಬೀರಿಯದಿಂದ ಬೀಸುವ ಶೀತಮಾರುತಗಳನ್ನು ತಡೆಯುವಷ್ಟು ಎತ್ತರದ ಪರ್ವತಗಳಿಲ್ಲ. ಆದರೆ ದಕ್ಷಿಣದಲ್ಲೂ ಪೂರ್ವದಲ್ಲೂ ಇರುವ ಪರ್ವತಗಳು ಎತ್ತರವಾಗಿರುವುದರಿಂದ ಸಮುದ್ರದ ಹಿತಕರ ಪ್ರಭಾವಕ್ಕೆ ಅಡ್ಡಿಯುಂಟಾಗಿದೆ. ಚಳಿಗಾಲದಲ್ಲಿ ಉತ್ತರದಲ್ಲಿ ಹೆಚ್ಚು ಹಿಮ ಬೀಳುತ್ತದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಸಂಭವಿಸುವ ಮಹಾಗರ್ತಗಳ ಡಿಪ್ರೆಷನ್ಸ್ ಪರಿಣಾಮವಾಗಿ ವಾಯುವ್ಯದ ಎತ್ತರ ಪ್ರದೇಶದಲ್ಲೂ ಕ್ಯಾಸ್ಪಿಯನ್ ಪ್ರದೇಶದಲ್ಲೂ ಹೆಚ್ಚು ಮಳೆಯಾಗುತ್ತದೆ. 20"-50". ದಕ್ಷಿಣಕ್ಕೂ ಪೂರ್ವಕ್ಕೂ ಬಂದಂತೆ ಇದು ಕಡಿಮೆಯಾಗುತ್ತದೆ. ಅನಿಶ್ಚಿತವೂ ಆಗುತ್ತದೆ 2"-26". ಉತ್ತರದ ಲವಣ ಮರುಭೂಮಿಗಳಿಂದ ಮಕ್ರಾನ್ ಕರಾವಳಿಯವರೆಗೂ ಸೆಯಿಸ್ತಾನಿದಿಂದ ಇಸ್ಫಹಾನ್‍ವರೆಗೂ ಇರುವ ಪ್ರದೇಶದಲ್ಲಿ ವರ್ಷಕ್ಕೆ 4"ಕ್ಕಿಂತ ಕಡಿಮೆ ಮಳೆ. ಇಲ್ಲಿ ಸುಮಾರು 5000 ಬೀಜೋತ್ಪಾದಕ ಜಾತಿಗಳ ಸಸ್ಯಗಳಿವೆ. ಕ್ಯಾಸ್ಟಿಯನ್ ಸಮುದ್ರ ತೀರದಲ್ಲಿ ಹಸಿರು ಸಮೃದ್ಧ, ಬೇಸಾಯಕ್ಕಾಗಿ ಮರಗಳನ್ನು ಕಡಿಯಲಾಗಿದೆ. ದಕ್ಷಿಣಕ್ಕೂ ಪೂರ್ವಕ್ಕೂ ಸಾಗಿದಂತೆ ಸಸ್ಯ ದಟ್ಟಣೆ ಕಡಿಮೆಯಾಗುತ್ತದೆ; ಪರ್ಷಿಯನ್ ಖಾರಿಯ ಕರಾವಳಿಯಲ್ಲಿ ಸಸ್ಯಗಳು ಬಲು ವಿರಳ.

ಇರಾನಿನ ನದಿಗಳು ಬಲು ಪುಟ್ಟವು. ಇವುಗಳ ಪ್ರವಾಹದಲ್ಲಿ ಏರಿಳಿತ ಅಧಿಕ. ಆದ್ದರಿಂದ ಮೀನು ಜಾತಿಗಳು ಅಧಿಕವಾಗಿಲ್ಲ. ತೇವವಿರುವ ಕಪ್ಪೆಗಳಿವೆ. ಗ್ರೀಕ್ ಆಮೆಗಳೂ ಉಂಟು. ಹಲ್ಲಿಗಳೂ ಹಾವುಗಳೂ ಇಲ್ಲದಿಲ್ಲ.

                                     

3. ಪ್ರಾಣಿಪಕ್ಷಿಗಳು

ಹಿಂದೆ ನೈಋತ್ಯ ಭಾಗದಲ್ಲಿ ಸಿಂಹಗಳಿದ್ದವು. ಈಗ ಅವು ಬಹಳ ಮಟ್ಟಿಗೆ ಅಳಿದು ಹೋಗಿವೆ. ಮಜಾಂಡೆರನ್ನಿನ ಕಾಡುಗಳಲ್ಲಿ ಹುಲಿ ಇನ್ನೂ ಉಳಿದಿದೆ. ಅಸ್ತೆರಾಬಾದ್ ಹಾಗೂ ತಿರ್ಮಾನುಗಳಲ್ಲಿ ಚಿರತೆಗಳಿವೆ. ನರಿ, ತೋಳ, ಚಿರತೆ, ಕಾಡು ಬೆಕ್ಕುಗಳು ದೇಶದ ಹಲವು ಕಡೆಗಳಲ್ಲಿ ಕಾಣಸಿಗುತ್ತವೆ. ಕಂದುಕರಡಿ, ಕಾಡು ಮೇಕೆ, ಪರ್ಷಿಯನ್ ಅಳಿಲು, ಕತ್ತೆ ಕಿರುಬ, ಮುಂಗುಸಿ, ಭಾರತೀಯ ಮುಳ್ಳು ಹಂದಿ ಇವು ಅವವಕ್ಕೆ ಹೊಂದುವ ಪರಿಸರಗಳಲ್ಲಿವೆ. ಜಿಂಕೆ, ಕಾಡುಹಂದಿ ಇವುಗಳೂ ಇವೆ. ಪೂರ್ವದ ಮರಳುಗಾಡಿನಲ್ಲಿ ಕಾಡುಕತ್ತೆಗಳಿವೆ.

ಇಲ್ಲಿ ವಾಸಿಸುವ ಹಲವಾರು ಜಾತಿಯ ಪಕ್ಷಿಗಳ ಜೊತೆಗೆ ಯೂರೋಪಿನ ಹಲವು ಬಗೆಯ ಪಕ್ಷಿಗಳು ಇಲ್ಲಿಗೆ ಬಂದು ಹೋಗುತ್ತವೆ; ಈ ದೇಶದ ಮೂಲಕ ಹಾದು ಹೋಗುತ್ತವೆ. ಕವುಜುಗ, ಗ್ರೌಸ್, ಉಲ್ಲಂಗಿ, ಬಾತು, ಗೂಬೆ, ಡೇಗೆ, ಗಿಡುಗ, ಹದ್ದು ಇವನ್ನೂ ಕಾಣಬಹುದು. ಬುಲ್ ಬುಲ್ ಹಕ್ಕಿಯೂ, ಕೋಗಿಲೆಯೂ ಬೇಸಗೆಯ ಅತಿಥಿಗಳು. ಪೆಲಿಕನ್, ಫ್ಲಮಿಂಗೋಗಳು ಪರ್ಷಿಯನ್ ಖಾರಿಯ ಉತ್ತರತೀರದಲ್ಲಿವೆ.

                                     

4. ವ್ಯವಸಾಯ, ವಾಣಿಜ್ಯ, ಕೈಗಾರಿಕೆ

ಕ್ಯಾಸ್ಟಿಯನ್ ಸಮುದ್ರತೀರ ಮತ್ತು ಅಜûರ್‍ಬೈಜಾಜನ್ ಬಿಟ್ಟರೆ ಉಳಿದೆಡೆಗಳಲ್ಲಿ ವ್ಯವಸಾಯಕ್ಕೆ ನೀರಾವರಿ ಆವಶ್ಯಕ. ಆಹಾರ ಬೆಳೆಗಳಲ್ಲಿ ಗೋಧಿಯೂ ಬಾರ್ಲಿಯೂ ಪ್ರಧಾನ. ಕ್ಯಾಸ್ಟಿಯನ್ ತೀರದಲ್ಲಿ ಮೀನುಗಾರಿಕೆ ಒಂದು ಕಸಬು. ನೈಋತ್ಯ ಏಷ್ಯದ ಪೆಟ್ರೋಲಿಯಂ ಪ್ರಾಮುಖ್ಯವುಳ್ಳ ರಾಷ್ಟ್ರಗಳಲ್ಲಿ ಇರಾನೂ ಒಂದು. ಇರಾನಿನ ನೈಋತ್ಯದಲ್ಲಿ, ಮುಖ್ಯವಾಗಿ ಅಬಾದಾನಿನ ಸುತ್ತ ಪೆಟ್ರೋಲಿಯಂ ಕೇಂದ್ರಗಳಿವೆ. ಪೆಟ್ರೋಲ್ ಇರಾನ್ ದೇಶದ ಪ್ರಧಾನ ಸಂಪನ್ಮೂಲ. ಜೊತೆಗೆ ರತ್ನಗಂಬಳಿಗಳು, ಹತ್ತಿ, ಚರ್ಮ, ಅಕ್ಕಿ ಹಾಗೂ ಒಣ ಹಣ್ಣುಗಳನ್ನು ಇರಾನ್ ರಫ್ತು ಮಾಡುತ್ತದೆ. ಅಫೀಮು ಮತ್ತು ಹೊಗೆಸೊಪ್ಪಿನ ವ್ಯವಹಾರವನ್ನು ರಾಷ್ಟ್ರೀಕರಣ ಮಾಡಲಾಗಿದೆ. ದೇಶದ ವಾಣಿಜ್ಯ ಬಹುವಾಗಿ ಪರ್ಷಿಯ ಕೊಲ್ಲಿಯ ಮುಖಾಂತರ ನಡೆಯುವುದು. ಇದರಲ್ಲಿನ ಹೆಚ್ಚು ಭಾಗ ಪಶ್ಚಿಮ ಜರ್ಮನಿ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳೊಂದಿಗೆ ನಡೆಯುತ್ತದೆ.

ದೇಶದಲ್ಲಿ ಬೃಹದ್ ಕೈಗಾರಿಕೆಗಳಿಲ್ಲ. ಗೃಹೋದ್ಯೋಗವೇ ಹೆಚ್ಚು. ಈಚೆಗೆ ಸಿಗರೇಟು, ಸಿಮೆಂಟು, ಹತ್ತಿ ರೇಷ್ಮೆ ಬಟ್ಟೆಗಳು, ಕಬ್ಬಿಣ ಮತ್ತು ಉಕ್ಕು - ಇವುಗಳ ದೊಡ್ಡ ಗಿರಣಿಗಳು ಸ್ಥಾಪನೆಯಾಗಿವೆ.

ಒಟ್ಟು ದೇಶವನ್ನು ಸ್ವಾಭಾವಿಕ ಲಕ್ಷಣಗಳಿಗನುಗುಣವಾಗಿ ನಾಲ್ಕು ಭಾಗಗಳನ್ನಾಗಿ ಮಾಡಿದ್ದಾರೆ. 1 ಕ್ಯಾಸ್ಟಿಯನ್ ತೀರಪ್ರದೇಶ ; ಇಲ್ಲಿ ಮಳೆ ಸಾಕಷ್ಟು ಬಿದ್ದು ವಾಯುಗುಣ ಹಿತಕರವಾಗಿರುವುದರಿಂದ ವ್ಯವಸಾಯ ಹೆಚ್ಚು. ರೇಷ್ಮೆಯನ್ನು ಹೆಚ್ಚಾಗಿ ತಯಾರಿಸುತ್ತಾರೆ. 2 ಪರ್ವತ ಪ್ರದೇಶ: ಇಲ್ಲಿ ವ್ಯವಸಾಯಕ್ಕೆ ಅನುಕೂಲ ಕಡಿಮೆ. ಕುರಿ ಮೇಕೆಗಳ ಸಾಕಣೆ ಮುಖ್ಯ ಕಸಬು. ಕಣಿವೆಗಳಲ್ಲಿ ಗೋಧಿ, ಹತ್ತಿ, ಚಹ, ಬತ್ತ, ಹಣ್ಣುಗಳನ್ನು ಬೆಳೆಯುತ್ತಾರೆ. 3 ಮರುಭೂಮಿ: ದೇಶದ ಮಧ್ಯಭಾಗ ಸಮುದ್ರಕ್ಕೆ ದೂರವಿದ್ದು ಮಳೆ ಮಾರುತಗಳನ್ನು ಪರ್ವತಗಳನ್ನು ತಡೆದು ಬಿಡುವುದರಿಂದ ಮಳೆ 10" ಕ್ಕಿಂತ ಕಡಿಮೆ. 4 ಕುಜಿûಸ್ತಾನ್ ಬಯಲು ಉತ್ತರ ಭಾಗದಲ್ಲಿದೆ. ಭೂಮಿ ಜೌಗಾದ್ದರಿಂದ ವ್ಯವಸಾಯವಿಲ್ಲ. ಪೆಟ್ರೋಲ್ ಗಣಿಗಳಿವೆ.                                     

5. ಭೂ ಇತಿಹಾಸ

ಇರಾನ್ ಪ್ರಸ್ಥಭೂಮಿ ದೇಶದಲ್ಲಿ ಹಾದು ಹೋಗುವ ಆಲ್ಪೈನ್-ಹಿಮಾಲಯನ್ ಪರ್ವತಶ್ರೇಣಿಗೆ ಸಂಬಂಧಿಸಿದ ಒಂದು ಮುಖ್ಯ ಭೂ ರಚನೆ. ಪಶ್ಚಿಮದತ್ತ ದೇಶದ ಸುಮಾರು ಮೂರನೆಯ ಎರಡು ಭಾಗವನ್ನು ಈ ಪ್ರಸ್ಥಭೂಮಿ ಆಕ್ರಮಿಸಿದೆ. ಪರ್ವತ ಶ್ರೇಣಿಯ ಭಾಗ ಬೃಹದಾಕೃತಿಯ ಕುಣಿಕೆಯೋಪಾದಿಯಲ್ಲಿದ್ದು ದೇಶದ ವಾಯವ್ಯ ಮತ್ತು ಈಶಾನ್ಯ ಸರಹದ್ದುಗಳಲ್ಲಿ ವ್ಯಾಪಿಸಿದೆ.

ಖುû-ಎ-ದಿನಾರ್ ಮತ್ತು ಜಾóಗ್ರೋಸ್ ಪರ್ವತ ಶ್ರೇಣಿಗಳ ಹಲವು ಕಡೆ ಕೆಂಪು ಮತ್ತು ಹಸರು ಬಣ್ಣದ ಕೇಂಬ್ರಿಯನ್ ಯುಗದ ಮಂದವಾದ ಜೇಡುಶಿಲಾ ಪ್ರಸ್ತರಗಳಿವೆ. ದಕ್ಷಿಣ ಮತ್ತು ಪೂರ್ವಭಾಗಗಳಲ್ಲಿರುವ ಲವಣ ಶಿಲೆಗಳಲ್ಲಿ ಹಾರ್ಮುeóï ಮತ್ತು ರಾವರ್ ಶ್ರೇಣಿಗಳ ಶಿಲಾಛಿದ್ರಗಳನ್ನು ಗುರುತಿಸಬಹುದು. ಬಹುಶಃ ಈ ಲವಣ ಶಿಲೆಗಳು ಜೇಡು ಶಿಲೆಗಳಿಗೆ ಸರಿಸಮನಾದವು ; ಇಲ್ಲವೆ ಅವುಗಳಿಗಿಂತ ತುಸು ಹಿರಿಯ ವಯಸ್ಸಿನವು. ದೇಶದ ವಾಯುವ್ಯ, ಉತ್ತರ ಮತ್ತು ಪೂರ್ವಭಾಗಗಳಲ್ಲಿ ಡಿವೋನಿಯನ್ ಕಲ್ಪದ 350-400 ದ. ಲ. ವರ್ಷ ಪ್ರಾಚೀನ ಕಾಲ ಕೆಂಪು ಮರಳು ಶಿಲಾಪ್ರಸ್ತರಗಳು ವಿಸ್ತಾರವಾಗಿ ಹರಡಿರುವುದು ಕಂಡುಬಂದಿದೆ. ಮುಂದೆ ಇಡೀ ದೇಶ ಟೆಥಿಸ್ ಸಮುದ್ರದಿಂದ ಆವೃತವಾಗಿ ಕಾರ್ಬೊನಿಫೆರಸ್ ಕಲ್ಪದ 280-350 ದ. ಲ. ವರ್ಷ ಪ್ರಾಚೀನ ಕಾಲ ಮಂದವಾದ ಕಪ್ಪು ಬಣ್ಣದ ಸುಣ್ಣ ಶಿಲೆಗಳು; ನಿಕ್ಷೇಪಗೊಂಡುವು. ಟ್ರಯಾಸಿಕ್ ಕಲ್ಪದಲ್ಲೂ 190-225ದ. ಲ. ವರ್ಷ ಪ್ರಾಚೀನ ಕಾಲ ಸುಮಾರು ಎರಡು ಮೂರು ವಿವಿಧ ಹಂತಗಳಲ್ಲಿ ಜಲಜಶಿಲೆಗಳ ನಿಕ್ಷೇಪ ಮುಂದುವರಿಯಿತು. ಜೂರಾಸಿಕ್ ಕಲ್ಪದ 135-190 ದ. ಲ. ವರ್ಷ ಪ್ರಾಚೀನ ಕಾಲ ಆದಿಯಲ್ಲಿ ಸುಮಾರು 10.000 ಮಂದವಾದ ಜಲಜಶಿಲೆಗಳ ನಿಕ್ಷೇಪವಾಯಿತು. ಇವುಗಳೊಡನೆ ಅಲ್ಲಲ್ಲೇ ಕಲ್ಲಿದ್ದಲ ತೆಳು ಪದರಗಳೂ ಸೇರಿಕೊಂಡಿವೆ. ಮಧ್ಯ ಇರಾನಿನಲ್ಲಿ ಈ ಶಿಲಾಶ್ರೇಣಿ ಆದಿ ಕ್ರಿಟೇಷಿಯಸ್ ಕಲ್ಪದಲ್ಲಾದ ಭೂಚಟುವಟಿಕೆಗಳ ದೆಸೆಯಿಂದ ರೂಪಾಂತರಗೊಂಡಿತು. ಮುಂದೆ ಮಧ್ಯಕ್ರಿಟೇಷಿಯಸ್ ಕಲ್ಪದವರೆಗೆ ಈ ಭೂಭಾಗದ ಮೇಲೆ ಯಾವ ತೆರನಾದ ನಿಕ್ಷೇಪಕಾರ್ಯಗಳೂ ಜರುಗಲಿಲ್ಲ. ಆದರೆ ಎಲ್‍ಬುರ್ಸ್, ಕೊಪೆಡಾಗ್ ಮತ್ತು ಜಾóಗ್ರೋಸ್ ಪ್ರದೇಶಗಳ ಮಹಾಇಳುಕಲುಗಳಲ್ಲಿ ಜಲಜಶಿಲಾ ನಿಕ್ಷೇಪ ಮುಂದುವರಿದ ದಾಖಲೆಗಳಿವೆ. ಜುರಾಸಿಕ್ ಕಲ್ಪದ ಅಂತ್ಯ, ಕ್ರಿಟೇಷಿಯನ್ ಹೀಗೆಯೇ ಇಯೊಸೀನ್ ಮತ್ತು ಆಲಿಗೊಸೀನ್ ಕಲ್ಪಗಳಲ್ಲೂ ಈ ನಿಕ್ಷೇಪಣಾ ಕಾರ್ಯಕ್ಕೆ ಅಲ್ಲಲ್ಲೆ ತಡೆಯುಂಟಾದ ಕೊಂಚಕಾಲದಮಟ್ಟಿಗೆ ದಾಖಲೆಗಳಿವೆ. ಜಾóಗ್ರೋಸ್ ಪ್ರದೇಶದ ಇಯೊಸೀನ್ ನಿಕ್ಷೇಪಗಳು ಬಹುತೇಕ ಸುಣ್ಣಶಿಲೆಗಳು. ಎಲ್‍ಬುಸ್ರ್û ಪ್ರಾಂತ್ಯದದಲ್ಲಿ ಇದೇ ಭೂಯುಗದ ತಿಳಿಹಸಿರು ಛಾಯೆಯ ಬೇಸಿಕ್ ಲಾವಾಪ್ರಸ್ತರಗಳನ್ನು ನೋಡಬಹುದು. ಬಣ್ಣವನ್ನನುಸರಿಸಿ ಇವುಗಳನ್ನು ಹಸಿರು ಶಿಲಾಶ್ರೇಣಿಗಳು ಎಂದಿದ್ದಾರೆ. ಪೂರ್ವ ಮತ್ತು ಆಗ್ನೇಯ ಭಾಗಗಳಲ್ಲಿ ಪ್ಲಿಷ್ ಎಂಬ ವಿಶಿಷ್ಟ ರೀತಿಯ ಜಲಜಶಿಲಾಪ್ರಸ್ತರಗಳಿವೆ.

ಆಲಿಗೋಸಿನ್ ಕಲ್ಪದಲ್ಲಿ 25-40 ದ. ಲ. ವರ್ಷ ಪ್ರಾಚೀನ ಕಾಲ ಕೇಂದ್ರ ಇರಾನಿನ ಇಳುಕಲಿದ್ದಿತೆಂದು ಊಹಿಸಲಾಗಿದೆ. ಈ ಪ್ರದೇಶ ಮತ್ತೆ ದಕ್ಷಿಣ ಸಮುದ್ರದಿಂದ ಆವೃತವಾಗಿ ತೈಲವಾಹಕ ಅಸ್ಮಾರಿ ಸುಣ್ಣಶಿಲೆಗಳು ಶೇಖರವಾದುವು. ಕ್ರಮೇಣ ಮಯೊಸೀನ್ ಕಲ್ಪದ 11-25 ದ. ಲ. ವರ್ಷ ಪ್ರಚೀನ ಕಾಲ ಆದಿಯಲ್ಲಿ ಇದು ಪುನಃ ಇಳಕುಲಾಗಿ ಪರಿವರ್ತಿತವಾಗಿ ಸುಮಾರು 15.000 ಮಂದದ ಲವಣ ಜೇಡು ಮತ್ತು ಜೇಡುಶಿಲಾ ಪ್ರಸ್ತರಗಳು ನಿಕ್ಷೇಪವಾದುವು. ಇವನ್ನು ಮೇಲಿನ ಕೆಂಪು ಶಿಲಾಶ್ರೇಣಿ ಎಂದು ಕರೆಯಲಾಗಿದೆ. ಇವನ್ನು ದೇಶದ ನೈಋತ್ಯದ ಪ್ರಾಂತ್ಯದ ಫಾರ್ಸೆ ಶಿಲಾಶ್ರೇಣಿಗಳಿಗೆ ಸರಿದೂಗಲಾಗಿದೆ.

ಇರಾನಿನ ಪರ್ವತಶ್ರೇಣಿಗಳು ಮುಖ್ಯವಾಗಿ ಪ್ಲಿಯೊಸೀನ್ ಕಲ್ಪದ ಭೂಚಟುವಟಿಕೆಗಳಿಂದಾದುವು. ಈ ಮುಖ್ಯ ಘಟ್ಟವಾದ ಮೇಲೆ ತಲೆದೋರಿದ ಇತರ ಸಣ್ಣ ಪ್ರಮಾಣದ ಭೂಚಟುವಟಿಕೆಗಳೂ ಪರ್ವತಶ್ರೇಣಿಗಳ ರಚನೆಯಲ್ಲಿ ಸಾಕಷ್ಟು ಪಾತ್ರವನ್ನು ತಳೆದಿದೆ. ಶಿಲಾಪ್ರಸ್ತರಗಳೂ ಮಡಿಕೆ ಬಿದ್ದಿರುವುದೇ ಅಲ್ಲದೆ ಅಲ್ಲಲ್ಲೆ ಸ್ತರಭಂಗಗಳೂ ಉಂಟಾಗಿವೆ. ಇವುಗಳ ಮುಖ್ಯಜಾಡು ವಾಯವ್ಯ-ಆಗ್ನೇಯ ಅಥವಾ ಪೂರ್ವ ಪಶ್ಚಿಮವೆನ್ನಬಹುದು.

ಪ್ಲಿಯೊ-ಪ್ಲಿಸ್ಟೊಸೀನ್‍ಗಳಲ್ಲಿ ಅಜóರ್‍ಬೈಜಾನ್, ಎಲ್‍ಬಸ್ರ್ó ಮತ್ತು ಕರ್ಮಾನ್ ಪ್ರದೇಶಗಳಲ್ಲಿ ಜ್ವಾಲಾಮುಖಿಗಳ ಕಾರ್ಯಾಚರಣೆ ಇತ್ತು. ಪರ್ಷಿಯನ್ ಕೊಲ್ಲಿಯ ಪ್ರದೇಶ ಮತ್ತು ಕೇಂದ್ರ ಇರಾನಿನಲ್ಲಿ ವಿವಿಧ ಭೂ ಯುಗಗಳಿಗೆ ಸಂಬಂಧಿಸಿದ ಲವಣಗುಮ್ಮಟಗಳಿವೆ.

                                     

6. ಜನಜೀವನ

ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪರ್ಷಿಯನರು. ಈ ಜನ ಅರಬ್ಬೀ ಭಾಷೆಯ ಲಿಪಿಯನ್ನು ಉಪಯೋಗಿಸಿಕೊಂಡು ಸಾಹಿತ್ಯ ಬೆಳೆಸಿದ್ದಾರೆ. ಉಳಿದ ಜನ ಅಜûರ್‍ಬೈಜಾನ್ ತುರ್ಕರು ಕುರ್ಡರು ಮತ್ತು ಇತರ ಗುಡ್ಡಗಾಡಿನ ಬುಡಕಟ್ಟಿನವರು. ಇಸ್ಲಾಂ ಧರ್ಮದ ಷೀಯ ಪಂಗಡ ಪ್ರಬಲ.

ಇರಾನ್ ಅನೇಕ ಜಾತಿ ಮತ ಪಂಗಡಗಳನ್ನು ಹೊಂದಿದ ದೇಶ. ಇದರ ಜನಸಂಖ್ಯೆ 1966ರಲ್ಲಿ 2.57.81.090 ಆಗಿತ್ತು. ಇವರಲ್ಲಿ ಹೆಚ್ಚಾಗಿ ಬೇಸಾಯಗಾರರು. ಸ್ವಭಾವತಃ ಇವರು ಸಂಪ್ರದಾಯವಾದಿಗಳು. ಇವರ ಜೀವನಕ್ರಮ ಹಳೆಯ ಪದ್ಧತಿಯನ್ನೇ ಅನುಸರಿಸಿದೆ. ಸಾಮಾನ್ಯವಾಗಿ ಇವರು ವಾಸಿಸುವುದು ಹಳ್ಳಿಗಳ ಮಣ್ಣು ಗುಡಿಸಲುಗಳಲ್ಲಿ. ಆ ಹಳ್ಳಿಗಳು ಜಮೀನುದಾರರಿಗೆ ಸೇರಿದುವು. ಅವರು ಅಲ್ಲಿಗೆ ಭೇಟಿಯನ್ನೇ ಕೊಡುವುದಿಲ್ಲ. ಅವರು ಇರುವುದು ರಾಜಧಾನಿ ಟೆಹರಾನಿನಲ್ಲಿ. ಆದರೆ ಇತ್ತೀಚೆಗೆ ಜನ ಎಚ್ಚರಗೊಳ್ಳುತ್ತಲ್ಲಿದ್ದಾರೆ. ಇವರಲ್ಲದೆ ಗಿರಿಜನರೂ ಈ ದೇಶದಲ್ಲಿದ್ದಾರೆ. ಇವರು ಸುಸಂಘಟಿತರಾಗಿದ್ದು, ಕುರಿ, ಆಡು, ಒಂಟೆ, ಕುದುರೆಗಳೊಂದಿಗೆ ವರ್ಷದಲ್ಲೆರಡು ಸಾರಿ ತಮ್ಮ ನಿವಾಸಸ್ಥಳವನ್ನು ಬದಲಾಯಿಸುತ್ತಾರೆ. ಇವರಲ್ಲಿ ಕುರ್ಡಿ ಭಾಷೆ ಮಾತನಾಡುವ ಕುರ್ಡ, ಭಕ್ತಿಯಾರಿ, ಲುರ; ತುರ್ಕಿ ಮಾತನಾಡುವ ಕ್ಯಾರಕ್ಯಿತ್, ಖಾಮೇಶ್, ಅಫಷರ್, ಬಲುಚಿ; ಪುಷ್ಟೊಭಾಷೆ ಮಾತನಾಡುವ ಆಫ್‍ಘನರು ಹಾಗೂ ದ್ರಾವಿಡ ಭಾಷೆಗೆ ಸಂಬಂಧಪಟ್ಟ ಭಾಷೆಯನ್ನಾಡುವ ಬ್ರುಹ್ಯುಯಿಶ್ ಜನಾಂಗದವರು ಪ್ರಮುಖರಾಗಿದ್ದಾರೆ. ಇವರಲ್ಲದೆ ಆರ್ಮೇನಿಯನ್, ಯಹೂದಿ, ಅಸ್ಸೀರಿಯನ್ ಜಾತಿಯ ಅಲ್ಪ ಸಂಖ್ಯಾತರೂ ಇಲ್ಲಿದ್ದಾರೆ.

ಇಸ್ಲಾಂ ಧರ್ಮದ ಷೀಯ ಇರಾನಿನ ರಾಜಧರ್ಮ. ಆಧುನಿಕ ಪರ್ಷಿಯನ್ ಇಲ್ಲಿನ ಪ್ರಮುಖ ಭಾಷೆ. ಪರ್ಷಿಯನ್ ಸಂಸ್ಕøತಿಯೇ ಇರಾನೀಯರಿಗೆ ಹಿನ್ನೆಲೆ. ಒಟ್ಟು ಜನರಲ್ಲಿ ಸುಮಾರು ಶೇಕಡ 15-20ರಷ್ಟು ಜನ ಪಟ್ಟಣಗಳಲ್ಲಿ. ಶೇಕಡ 65ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಾರೆ. ಉಳಿದ ಸೇಕಡ 20-25ರಷ್ಟು ಜನ ಅಲೆಮಾರಿ ಜನಾಂಗ. ಟೆಹರಾನ್, ತೆಬ್ರಿಜ್, ಇಸ್ಪಹಾನ್, ಮೆಷೆದ್, ಸಿರಾಜ್, ರೇಷ್ಮ, ತೆರಮಾನ್, ಹಮಾದಾನ್, ಯಜ್ದ, ತೆರಮಾನ್ ಶಾಹ, ಅಬಾದಾನ್, ಅಹಾನeóï ಇಲ್ಲಿಯ ಪ್ರಮುಖ ನಗರಗಳು. ಟೆಹರಾನ್ ರಾಜಧಾನಿ.

ಇರಾನಿನ ನಾಣ್ಯವ್ಯವಸ್ಥೆ ಹೀಗಿದೆ. ರಿಯಾಲ್ ಎಂಬುದು ಇಲ್ಲಿಯ ನಾಣ್ಯ. ಇದನ್ನು ಹತ್ತು ದಿನಾರಗಳಾಗಿ ವಿಭಾಗಿಸಲಾಗಿದೆ. 5, 10, 20, 50, 100, 200, 500 ಮತ್ತು 1000 ರಿಯಾಲುಗಳ ನೋಟುಗಳೂ 50 ದಿನಾರಗಳ ಹಾಗೂ 1, 2, 5 ಮತ್ತು 10 ರಿಯಾಲುಗಳ ನಾಣ್ಯಗಳೂ ಚಲಾವಣೆಯಲ್ಲಿವೆ. 750 ರಿಯಾಲುಗಳಿಗೆ ಒಂದು ಪಹ್ಲಾವಿ. 1/8, 4, 1, 2 1/2 ಮತ್ತು 5 ಪಹ್ಲಾಮಿ ಮೌಲ್ಯದ ಚಿನ್ನದ ನಾಣ್ಯಗಳಿವೆ. ವಿನಿಮಯ ದರ: 181 ರಿಯಾಲುಗಳಿಗೆ 1 ಪೌಂಡ್ ಸ್ಟರ್ಲಿಂಗ್ ಸಮ. 76 ರಿಯಾಲುಗಳಿಗೆ ಅಮೆರಿಕದ 1 ಡಾಲರ್ ಸಮ.                                     

7. ಸಂವಿಧಾನ ಹಾಗೂ ಆಡಳಿತ

ಇರಾನಿನಲ್ಲಿ ಈಗ ಸಂವಿಧಾನಾತ್ಮಕ ರಾಜ ಪ್ರಭುತ್ವ ಸ್ಥಾಪಿತವಾಗಿವೆ. ಪ್ರಥಮವಾಗಿ ಈ ದೇಶದ ಸಂವಿಧಾನವನ್ನು 1906ರ ಡಿಸೆಂಬರ್ 30 ರಂದು ಅರಸನಿಂದ ಕರೆಯಲಾದ ಸಂವಿಧಾನ ಸಭೆಯಲ್ಲಿ ಮಂಡಿಸಲಾಯಿತು. ಇದನ್ನು ಅನೇಕ ಸಲ ಪರಿಷ್ಕರಿಸಲಾಗಿದೆ. ಸಂವಿಧಾನ ಒಟ್ಟು 51 ನಿಬಂಧನೆಗಳನ್ನು ವಿಧಿ ಹೊಂದಿದೆ.

ಸಂವಿಧಾನದ ಪ್ರಕಾರ ಕಾರ್ಯಾಂಗದ ಅಧಿಕಾರ ಷಾಗೆ ಸೇರಿದೆ. ಆತ ಮಜಲಿಸಿನ ಪಾರ್ಲಿಮೆಂಟ್ ಸಮ್ಮತಿಯ ಮೇರೆಗೆ ಪ್ರಧಾನ ಮಂತ್ರಿಯನ್ನು ನೇಮಿಸುತ್ತಾನೆ. ಪ್ರಧಾನ ಮಂತ್ರಿ ಪಾರ್ಲಿಮೆಂಟಿಗೆ ಹೊಣೆಯಾಗುತ್ತಾನೆ. ಉಳಿದ ಮಂತ್ರಿಗಳು ಕೂಡ ಒಟ್ಟಾಗಿಯೂ ವೈಯಕ್ತಿಕವಾಗಿಯೂ ಪಾರ್ಲಿಮೆಂಟಿಗೆ ಹೊಣೆಯಾಗುತ್ತಾರೆ. ಷಾಗೆ ಪಾರ್ಲಿಮೆಂಟನ್ನು ವಿಸರ್ಜಿಸುವ ಅಧಿಕಾರವಿದೆ. ಹಾಗಾದ ಕೂಡಲೆ ಹೊಸ ಚುನಾವಣೆ ನಡೆಯಲೇ ಬೇಕು.

ಶಾಸನಾಧಿಕಾರ ದ್ವಿಸದನಗಳುಳ್ಳ ಸೆನೆಟ್ ಹಾಗು ಮಜಲಿಸ್ ಪಾರ್ಲಿಮೆಂಟಿಗೆ ಸೇರಿದೆ. ಸೆನೆಟ್ 60 ಸದಸ್ಯರಿಂದ ಕೂಡಿರುತ್ತದೆ. 30 ಜನ ಚುನಾಯಿತರು. ಉಳಿದವರು ಷಾನಿಂದ ನೇಮಕಗೊಳ್ಳುತ್ತಾರೆ. ಸೆನೆಟರರು ಮುಸ್ಲಿಮರೇ ಆಗಿರಬೇಕು. ಇವರ ಅಧಿಕಾರದ ಅವಧಿ 6 ವರ್ಷಗಳು. ಮಜಲಿಸ್ 200 ಚುನಾಯಿತ ಸದಸ್ಯರುಗಳಿಂದ ಕೂಡಿದೆ. ಇದರ ಅವಧಿಯನ್ನು 2 ವರ್ಷಗಳಿಂದ 4 ವರ್ಷಗಳಿಗೆ ಹೆಚ್ಚಿಸಲಾಗಿದೆ. ಷಾಗೆ ಹಣಕಾಸಿಗೆ ಸಂಬಂಧಪಟ್ಟ ವಿಧೇಯಕವನ್ನು ಪುನಃ ಪರಿಶೀಲಿಸುವುದಕ್ಕಾಗಿ ಪಾರ್ಲಿಮೆಂಟಿಗೆ ಹಿಂತಿರುಗಿ ಕಳಿಸುವ ಅಧಿಕಾರವಿದೆ. ಪಾರ್ಲಿಮೆಂಟ್ ಒಪ್ಪಿಗೆ ಇತ್ತ ಇತರ ಎಲ್ಲ ವಿಧೇಯಕಗಳಿಗೆ ಷಾ ಅಂಕಿತ ಹಾಕಲೇ ಬೇಕು.

ದೇಶ 13 ಉಸ್ತಾನಗಳಾಗಿ ಆಡಳಿತ ಪ್ರಾಂತ್ಯ ವಿಭಜಿತವಾಗಿದೆ. ಪ್ರತಿ ಉಸ್ತಾನದ ಆಡಳಿತ ಉಸ್ತಾನದಾರ ನೋಡಿಕೊಳ್ಳುತ್ತಾನೆ. ಅದನ್ನು ಮತ್ತೆ ಜಿಲ್ಲೆ, ಹಳ್ಳಿಗಳ ಗುಂಪು ಮತ್ತು ಹಳ್ಳಿಗಳಾಗಿ ವಿಂಗಡಿಸಲಾಗಿದೆ. ಹಳ್ಳಿಯ ಮುಖ್ಯಸ್ಥನನ್ನುಳಿದು ಇತರ ಎಲ್ಲ ವಿಭಾಗಗಳ ಅಧಿಕಾರಿಗಳು ಕೇಂದ್ರ ಸರ್ಕಾರದಿಂದ ನೇಮಿತರಾದವರು.

ಇರಾನ್ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಾಕ್ಷರತೆ ಕೇವಲ 40% ಮಾತ್ರ. ಪ್ರಗತಿಕಾರ್ಯ ಭರದಿಂದ ಸಾಗಿದೆ. 1963ರಲ್ಲಿ ರಚಿತಗೊಂಡ ಶೈಕ್ಷಣಿಕ ಮಂಡಲಿ ನಿರಕ್ಷರತೆಯ ವಿರುದ್ಧ ಹೋರಾಡುತ್ತಿದೆ. ಇರಾನಿನಲ್ಲಿ ಒಟ್ಟು 7 ವಿಶ್ವವಿದ್ಯಾನಿಲಯಗಳು ಹಾಗೂ 27.265ಕ್ಕಿಂತಲೂ ಹೆಚ್ಚು ಶಾಲೆಗಳು ಇವೆ. ಈ ದೇಶದಲ್ಲಿ ಸುಮಾರು 140 ವಿವಿಧ ಪತ್ರಿಕೆಗಳು ಪ್ರಕಟವಾಗುತ್ತವೆ.

ಸಂಪ್ರದಾಯವಾದಿ ಪ್ರವೃತ್ತಿಯಿಂದಾಗಿ ಈ ದೇಶದ ಪ್ರಗತಿ ಅಷ್ಟೊಂದು ತ್ವರಿತಗತಿಯಲ್ಲಿ ಸಾಗುತ್ತಿಲ್ಲ. ನಿರಕ್ಷರತೆ, ಬಡತನ, ರೋಗರುಜಿನಗಳು ದೇಶದ ಆಂತರಿಕ ಶತ್ರುಗಳಾಗಿವೆ. ಇತ್ತೀಚೆಗೆ ದೇಶ ಆಧುನಿಕತೆಯತ್ತ ಸಾಗುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿರುವ ಬೇಸಾಯಗಾರರ ಜೀವನಮಟ್ಟ ಸುಧಾರಿಸಲು ಸರ್ಕಾರ ಪ್ರಯತ್ನ ಮಾಡುತ್ತಲಿದೆ. ಇರಾನ್ ಪಾಶ್ಚಾತ್ಯ ಹಾಗೂ ಪೌರ್ವಾತ್ಯ ರಾಷ್ಟ್ರಗಳೊಂದಿಗೆ ಸೌಹಾರ್ದ ಭಾವನೆ ಹೊಂದಿದೆ.

ಬಲೂಚಿಸ್ಥಾನ್
                                               

ಬಲೂಚಿಸ್ಥಾನ್

ಬಲೂಚಿಸ್ಥಾನ್ ಏಷ್ಯಾದ ವಾಯುವ್ಯದಲ್ಲಿರುವ ಒಂದು ಪ್ರದೇಶ. ಪಶ್ಚಿಮ ಏಷ್ಯಾಗೆ ಸೇರುವ ಈ ಪ್ರದೇಶವು ಇರಾನ್, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನಗಳ ಮಧ್ಯದಲ್ಲಿ ಇದೆ. ಬಲೂಚಿ ಜನಾಂಗಗಳ ಜನರು ಈ ಪ್ರದೇಶದ ಪ್ರಮುಖ ನಿವಾಸಿಗಳು.

ದುರಾನಿ ಸಾಮ್ರಾಜ್ಯ
                                               

ದುರಾನಿ ಸಾಮ್ರಾಜ್ಯ

ದುರಾನಿ ಸಾಮ್ರಾಜ್ಯ ಅಹ್ಮದ್ ಷಾ ದುರಾನಿ ಸ್ಥಾಪಿಸಿ ಮತ್ತು ನಿರ್ಮಿಸಿದ ಸಾಮ್ರಾಜ್ಯ. ದುರಾನಿ ಸಾಮ್ರಾಜ್ಯ ತನ್ನ ಪರಮಾವಧಿಯಲ್ಲಿ ಈಗಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಮತ್ತು ಈಶಾನ್ಯ ಇರಾನ್, ಪೂರ್ವ ತುರ್ಕಮೆನಿಸ್ತಾನ್ ಮತ್ತು ಕಾಶ್ಮೀರ ಪ್ರದೇಶ ಸೇರಿದಂತೆ ವಾಯುವ್ಯ ಭಾರತದಲ್ಲಿ ಕೆಲವು ಭಾಗಗಳನ್ನು ಒಳಗೊಂಡಿತ್ತು. ಟೆಂಪ್ಲೇಟು:Lang-ps

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →