Топ-100

ⓘ Free online encyclopedia. Did you know? page 30                                               

ತುರುವೇಕೆರೆ ಸತೀಶ್

ತುರುವೇಕೆರೆ ಸತೀಶ್: ಮೂಲತಃ ಪತ್ರಕರ್ತರು. ಕವಿ, ಲೇಖಕ, ನಾಟಕಕಾರ, ಪದಬಂಧ ರಚನೆಕಾರರಾದ ಇವರು ವಕೀಲರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹುಟ್ಟೂರು:- ತುರುವೇಕೆರೆ, ತುಮಕೂರು ಜಿಲ್ಲೆ. ತಂದೆ: ಮಂಜಯ್ಯ, ತಾಯಿ - ಜಯಲಕ್ಷ್ಮಮ್ಮ. ವಿದ್ಯಾಭ್ಯಾಸ - ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ತುರುವೇಕೆರೆಯ ಸರ್ಕ ...

                                               

ತೇಜಸ್ವಿ ಕಟ್ಟೀಮನಿ

ತೇಜಸ್ವಿ ಕಟ್ಟೀಮನಿ ಇವರು ೧೯೫೫ ಜೂನ ೧೪ರಂದು ರಾಯಚೂರು ಜಿಲ್ಲೆಯ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಜನಿಸಿದರು. ಹಿಂದಿಯಲ್ಲಿ ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಸಂಪಾದಿಸಿದ ಕಟ್ಟೀಮನಿಯವರು ಹಿಂದಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

                                               

ತ್ರಿವೇಣಿ

ತ್ರಿವೇಣಿ ಎಂಬ ಬರಹನಾಮದಿಂದ ಪ್ರಸಿದ್ಧರಾದವರು ಶ್ರೀಮತಿ ಅನಸೂಯ ಶಂಕರ್. ಇವರು ಕನ್ನಡದ ಪ್ರಮುಖ ಕಾದಂಬರಿಕಾರರಲ್ಲೊಬ್ಬರು. ಹಲವಾರು ಜನಪ್ರಿಯ ಕಾದಂಬರಿಗಳ ಮೂಲಕ ಪ್ರಸಿದ್ಧಿಯಾಗಿದ್ದಾರೆ. ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರ್ತಿಯಾಗಿ ಗುರುತಿಸಲ್ಪಟ್ಟಿದ್ದಾರೆ.

                                               

ದಾಶರಥಿ ದೀಕ್ಷಿತ

ದಾಶರಥಿ ದೀಕ್ಷಿತ ಇವರು ಕನ್ನಡದ ಹೆಸರಾಂತ ಹಾಸ್ಯ ಸಾಹಿತಿಗಳು. ಇವರು ೧೯೨೧ ಫೆಬ್ರುವರಿ ೬ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡುಗೆರೆಯಲ್ಲಿ ಜನಿಸಿದರು. ಇವರ ತಾಯಿ ರಂಗೋಬಾಯಿ ; ತಂದೆ ಗಿರಿದೀಕ್ಷಿತ ಬಾಳಾಜಿ. ಇವರು ಮೊದಲು ಕೆಲಕಾಲ ಕರ್ನಾಟಕ ಸರಕಾರದ ವಿದ್ಯುಚ್ಛಕ್ತಿ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಆ ಬ ...

                                               

ದೇವಕಿ ಮೂರ್ತಿ

ದೇವಕಿ ಮೂರ್ತಿ ಇವರು ೧೯೩೧ ಜೂನ ೨೩ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಕಮಲಾ; ತಂದೆ ಎಸ್.ಆನಂದರಾವ್. ಇವರ ಕೆಲವು ಕೃತಿಗಳು ಇಂತಿವೆ: ಶೋಧ:- ೨೦೦೬; ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ. ಬಂದಿ:- ೧೯೯೬; ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.ಈ ಕಾದಂಬರಿಗೆ ಅ ...

                                               

ದೇವುಡು ನರಸಿಂಹಶಾಸ್ತ್ರಿ

ದೇವುಡು ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿ ಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

                                               

ದೇವೇಂದ್ರಕುಮಾರ ಹಕಾರಿ

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಬಿ.ಏ ಮತ್ತು ಎಮ್.ಏ. ಪದವಿ ಪಡೆದ ನಂತರ "ಜಾನಪದ ಸಾಮಾಜಿಕ ದುಃಖಾಂತ ಕಥನ ಗೀತೆಗಳು:ಒಂದು ಅಧ್ಯಯನ"ವೆನ್ನುವ ಮಹಾಪ್ರಬಂಧವನ್ನು ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿ‍ಎಚ್.ಡಿ. ಪದವಿ ಪಡೆದರು.

                                               

ದೇಶಹಳ್ಳಿ ಜಿ.ನಾರಾಯಣ

ದೇಶಹಳ್ಳಿ ಜಿ.ನಾರಾಯಣರು ೧೯೫೧ರಲ್ಲಿ ‘ ವಿನೋದ ’ ಹಾಸ್ಯಪತ್ರಿಕೆ ಪ್ರಾರಂಭಿಸಿ ಯಶಸ್ವಿಯಾಗಿ ನಡೆಯಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಖಾದಿ ಧರಿಸಿ, ಗಾಂಧಿವಾದಿಗಳಾಗಿದ್ದಾರೆ. ಅನೇಕ ಕನ್ನಡ ಸಂಘ-ಸಂಸ್ಥೆಗಳಲ್ಲಿ ಸಕ್ರೀಯ ಪಾತ್ರವಹಿಸುತ್ತಿದ್ದಾರೆ. ಕರ್ನಾಟಕ ಏಕೀಕರಣ ಹೋರಾಟದ ...

                                               

ದೊಡ್ಡೇರಿ ವೆಂಕಟಗಿರಿ ರಾವ್

ದೊಡ್ಡೇರಿ ವೆಂಕಟಗಿರಿರಾವ್ ಇವರು ಶಿವಮೊಗ್ಗಾ ಜಿಲ್ಲೆಯ ಕೆಳದಿ ಯಲ್ಲಿ ೧೯೧೩ ಡಿಸೆಂಬರ ೨೮ರಂದು ಜನಿಸಿದರು.ಇವರ ತಂದೆ ತಿಮ್ಮಪ್ಪ ; ತಾಯಿ ರುಕ್ಮಿಣಿ. ದೊಡ್ಡೇರಿ ವೆಂಕಟಗಿರಿರಾವ್ ವೃತ್ತಿಯಲ್ಲಿ ವೈದ್ಯರಾದಂತೆ, ಚಿತ್ರಗ್ರಹಣ ಪ್ರವೀಣರೂ ಆಗಿದ್ದರು. ಇವರು ಅಖಿಲ ಭಾರತ ಫೋಟೋಗ್ರಾಫಿ ಪರಿಷತ್ತಿನ ಉಪಾಧ್ಯಕ್ಷರ ...

                                               

ಧೋಂಡೊ ನರಸಿಂಹ ಮುಳಬಾಗಲ

ಧಾರವಾಡದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಬೆಳಗಾವಿಯ ನಾರ್ಮಲ್ ಸ್ಕೂಲ್ ಟ್ರೇನಿಂಗ ಕಾಲೇಜ ದಲ್ಲಿ ಶಿಕ್ಷಕ ಟ್ರೇನಿಂಗ ಪಡೆದರು. ಈ ಅವಧಿಯಲ್ಲಿ ಇವರಿಗೆ ಗಂಗಾಧರ ಮಡಿವಾಳೇಶ್ವರ ತುರಮರಿಯವರು ಶಿಕ್ಷಕರಾಗಿದ್ದರು. ತರಬೇತಿಯ ನಂತರ ಇವರು ಬೆಳಗಾವಿಯಲ್ಲಿಯೆ ಕನ್ನಡ ಶಾಲಾ ಶಿಕ್ಷಕರಾದರು. ಅಲ್ಲಿ ...

                                               

ನಂಜನಗೂಡು ತಿರುಮಲಾಂಬಾ

೧೦ ನೆಯ ವಯಸ್ಸಿಗೆ ಇವರ ಮದುವೆಯಾಯಿತು. ೧೪ನೆಯ ವಯಸ್ಸಿನಲ್ಲಿ ವಿಧವೆಯಾದರು. ಆದರೆ ಇದರಿಂದ ಧೃತಿಗೆಡದ ತಿರುಮಲಾಂಬಾ, ತಂದೆಯ ಉತ್ತೇಜನದಿಂದ ಬರವಣಿಗೆಯಲ್ಲಿ ತೊಡಗಿಕೊಂಡರು. ೧೯೧೩ ರಲ್ಲಿ ಸತಿ ಹಿತೈಷಿಣೀ ಗ್ರಂಥಮಾಲೆಯನ್ನು ಪ್ರಾರಂಭಿಸಿದರು. ಆ ಮಾಲೆಯಲ್ಲಿ ಪ್ರಕಟಗೊಂಡ ಇವರ ಮೊದಲ ಕಾದಂಬರಿ ಸುಶೀಲೆ.

                                               

ನಯಸೇನ

ನಯಸೇನ ಕ್ರಿ.ಶ.೧೧೦೦ ಶತಮಾನದ ಭಾಗದಲ್ಲಿ ಜೀವಿಸಿದ್ದ ಜೈನ ಕವಿ. ಇವನು ಒಬ್ಬ ದಿಗಂಬರ ಸನ್ಯಾಸಿ ಆಗಿದ್ದ. ಈತನು ಧರ್ಮಾಮೃತ ಎಂಬ ಚಂಪೂಕಾವ್ಯ ಕೃತಿಯನು ರಚಿಸಿದ್ದಾನೆ. ಧಾರವಾಡ ಜಿಲ್ಲೆಯ ಮುಳುಗುಂದ ಎಂಬ ಊರಿನವನು. ಈತನ ಗುರು ನರೇಂದ್ರ ಸೇನಮುನಿಪ. ಇವನ ಗ್ರಂಥವಾದ ಧರ್ಮಾಮೃತವು ಜೈನ ಮತಾಚಾರದಲ್ಲಿ ೧೪ ಮಹಾರ ...

                                               

ನರಹಳ್ಳಿ ಬಾಲಸುಬ್ರಹ್ಮಣ್ಯ

ಕನ್ನಡದಲ್ಲಿ ವಿದ್ವತ್ಪೂರ್ಣ ವಿಮರ್ಶೆಗೆ ಹೆಸರಾದವರಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರದ್ದು ಪ್ರಮುಖ ಹೆಸರು. ಸಾಹಿತ್ಯದ ಅತಿ ಸಂಕೀರ್ಣ ಸಂಗತಿಗಳನ್ನು, ಒಣವಿಚಾರ ಎನ್ನಿಸದಿರುವಂತೆ ಅತಿ ಸ್ವಾರಸ್ಯಕರವಾಗಿ ಹಾಗೂ ಸರಳ ರೀತಿಯಲ್ಲಿ ವಿಶ್ಲೇಷಿಸುವುದರಲ್ಲಿ ಅವರು ಪ್ರಸಿದ್ಧಿ ಪಡೆದಿದ್ದಾರೆ.

                                               

ನವರತ್ನರಾಂ

ನವರತ್ನರಾಂ ಕನ್ನಡಸಾಹಿತ್ಯದಲ್ಲಿ, ನಗೆ ಬರಹಗಳ ಮಾಂತ್ರಿಕ. ನಗೆ ಬರಹದ ಮೂಲಕ ಜೀವನ ದರ್ಶನವನ್ನು,ನವರತ್ನರಾಂ ಅವರ ಲೇಖನಗಳಲ್ಲಿ ನೋಡಬಹುದು. ಲಘುವಾದ ಬರಹಗಳಲ್ಲಿ ಗಾಂಭೀರ್ಯತೆ ಕಾಣಬಹುದು. ಕನ್ನಡದ ಸುಪ್ರಸಿದ್ದ ಲೇಖಕಿ ಉಷಾ ನವರತ್ನರಾಂ, ಇವರ ಪತ್ನಿ.

                                               

ನಾ.ಮೊಗಸಾಲೆ

ನಾ.ಮೊಗಸಾಲೆ ಎನ್ನುವ ಹೆಸರಿನಲ್ಲಿ ಓದುಗರಿಗೆ ಪರಿಚಿತರಾದ ಡಾ| ನಾರಾಯಣ ಭಟ್ಟ, ಮೊಗಸಾಲೆ ಇವರು ಹುಟ್ಟಿದ್ದು ೧೯೪೪ ಅಗಸ್ಟ ೨೭ ರಂದು. ಅವರು ಹುಟ್ಟಿದ ಊರು ಸಾರ್ಕುಡೇಲು ಮನೆ. ಈ ಗ್ರಾಮ ಇದೀಗ ಕಾಸರಗೋಡು ಜಿಲ್ಲೆಯ ಕೇರಳ ರಾಜ್ಯದಲ್ಲಿ ಮಂಜೇಶ್ವರ ದ ಹತ್ತಿರ ಇದೆ. ೧೯೪೯ರಲ್ಲಿ ತಂದೆ ತೀರಿಕೊಂಡದ್ದರಿಂದ ಮೊಗಸ ...

                                               

ನಾ.ಶ್ರೀ.ರಾಜಪುರೋಹಿತ

ನಾ.ಶ್ರೀ.ರಾಜಪುರೋಹಿತ ರು ೧೮೮೭ ಜುಲೈ ೧೭ ರಂದು ಹಾವೇರಿ ತಾಲೂಕಿನ ಅಗಡಿ ಯಲ್ಲಿ ಜನಿಸಿದರು. ಅಗಡಿಯಲ್ಲಿಯೆ ಪ್ರಾಥಮಿಕ ಶಿಕ್ಷಣ ಮುಗಿಸಿ ಅಂದಿನ ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಜಿಲ್ಲೆಗೆ ಮೊದಲಿಗರಾಗಿ ಉತ್ತೀರ್ಣರಾದರು. ಧಾರವಾಡದ ಶಿಕ್ಷಕರ ಟ್ರೇನಿಂಗ ಕಾಲೇಜಿನಲ್ಲಿ ೩ ವರ್ಷದ ತರಬೇತಿ ಮುಗಿಸಿ ೧೯೦೫ರಲ್ಲ ...

                                               

ನಾಡಿಗ ಕೃಷ್ಣಮೂರ್ತಿ

ಡಾ| ನಾಡಿಗ ಕೃಷ್ಣಮೂರ್ತಿ ಯವರು ೧೯೨೧ರಲ್ಲಿ ಶಿವಮೊಗ್ಗಾ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ಜನಿಸಿದರು. ನಾಡಿಗ ಕೃಷ್ಣಮೂರ್ತಿಯವರು ಅಮೇರಿಕಾದ ಮಿಸ್ಸೋರಿಯಲ್ಲಿ ಪತ್ರಿಕೋದ್ಯಮದ ಬಗೆಗೆ ವಿಶೇಷ ಶಿಕ್ಷಣ ಪಡೆದು, ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರವಾಚಕರಾದರು. ೧೯೬೪ರಲ್ಲಿ ‘ಪತ್ರಿಕೋದ್ಯ ...

                                               

ನಾಡಿಗೇರ ಕೃಷ್ಣರಾವ್

ನಾಡಿಗೇರ ಕೃಷ್ಣರಾವ್ ಅವರು ೧೯೦೮ ಮಾರ್ಚ್ ೨೫ರಂದು ದಾವಣಗೆರೆ ಜಿಲ್ಲೆಯ ಹರಿಹರ ದಲ್ಲಿ ಜನಿಸಿದರು. ಇವರ ತಾಯಿ ಕಾಮಾಕ್ಷಮ್ಮನವರು. ತಂದೆಯ ಹೆಸರು ದತ್ತಾತ್ರೇಯ. ಫಿಫ್ತ್ ಫಾರಂ ನಂತರ ಓದಿಗೆ ಶರಣು ಹೊಡೆದು, ಜವಳಿ ಅಂಗಡಿ ಗುಮಾಸ್ತರಾಗಿ, ಹೋಟೆಲ್‌ನಲ್ಲಿ ದಿನಗೂಲಿ ಮಾಡಿ ಹೀಗೆ ಕಷ್ಟಪಟ್ಟು ಮೇಲೆ ಬಂದು ಕಡೆಗೆ ...

                                               

ನಾರಾಯಣ ಕಸ್ತೂರಿ

ನಾರಾಯಣ ಕಸ್ತೂರಿ ರಂಗನಾಥ ಶರ್ಮ: - ನಾ.ಕಸ್ತೂರಿ ಎಂದು ಖ್ಯಾತರಾದ ನಾರಾಯಣ ಕಸ್ತೂರಿ ರಂಗನಾಥ ಶರ್ಮ ಹುಟ್ಟಿದ್ದು ಕೇರಳದ ತ್ರಿಪುನಿತ್ತುರ ಎಂಬ ಗ್ರಾಮದಲ್ಲಿ. ಜನ್ಮದಿನ ಡಿಸೆಂಬರ್ ೨೫-೧೮೮೭.ಮರಣ ಆಗಸ್ಟ್೧೪-೧೯೮೭.ಇವರ ತಂದೆ ವಕೀಲರೊಬ್ಬರ ಬಳಿ ಕಾರಕೂನರಾಗಿದ್ದರು. ಕಸ್ತೂರಿ ೬ ವರ್ಷದ ಬಾಲಕನಾಗಿದ್ದಾಗ ಮೈಲ ...

                                               

ನಿಜಗುಣ ಶಿವಯೋಗಿ

ನಿಜಗುಣ ಶಿವಯೋಗಿ ಈ ಹೆಸರಿನ ಮೂರು ಕವಿಗಳು ಆಗಿ ಹೋದರು. ಮೊದಲನೆಯವರು ೧೨ನೆಯ ಶತಮಾನದವರು. ಮೂರನೆಯವರು ೧೭ನೆಯ ಶತಮಾನದವರು. ಅಧ್ಯಾತ್ಮ ರಾಮಾಯಣ ಎನ್ನುವ ಗ್ರಂಥವನ್ನು ಬರೆದಿದ್ದಾರೆ. ಎರಡನೆಯ ನಿಜಗುಣ ಶಿವಯೋಗಿ ಇವರು ಕ್ರಿ.ಶ.೧೫೦೦ರ ಸುಮಾರಿಗೆ ಜೀವಿಸಿದ್ದರು. ಇವರು ಕಾವೇರಿ ತೀರದ ಸಣ್ಣ ರಾಜ್ಯವೊಂದರ ರಾ ...

                                               

ನಿರಂಜನ

ನಿರಂಜನ ಒಬ್ಬ ಖ್ಯಾತ ಬರಹಗಾರ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ನಿಜ ನಾಮಧೇಯ ಕುಳಕುಂದ ಶಿವರಾಯ. ಇವರು ೨೦ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ ಮಾರ್ಕ್ಸ,ವ್ಲಾಡಿಮಿರ್ ಲೆನಿನ್ ರ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ...

                                               

ನಿರಂಜನ ವಾನಳ್ಳಿ

ನಿರಂಜನ ವಾನಳ್ಳಿ ಕವಿ, ವಿಮರ್ಶಕ, ಸಂಶೋಧಕ, ಅಧ್ಯಾಪಕ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ, ಕನ್ನಡದ ಹೆಸರಾಂತ ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ವೃತ್ತಿಯಲ್ಲಿ ಪತ್ರಕರ್ತ, ಹವ್ಯಾಸದಲ್ಲಿ ಕಾಲೇಜು ಅಧ್ಯಾಪಕ. ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾ ...

                                               

ನಿರುಪಮಾ

ಡಾ. ನಿರುಪಮಾ ಕನ್ನಡದ ಪ್ರಮುಖ ಬರಹಗಾರ್ತಿ, ಸಂಶೋಧಕಿ, ಪ್ರಮುಖ ಸಾಹಿತ್ಯ ವೇದಿಕೆಗಳ ಸ್ಥಾಪಕಿ ಹಾಗೂ ದಕ್ಷಿಣ ಭಾರತದ ಪ್ರಸಿದ್ಧ ಮಹಿಳಾ ಪ್ರಕಾಶಕಿ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಅವರ ಮೂಲ ಹೆಸರು ಪದ್ಮಾ ಆರ್. ರಾವ್ ಎಂದು.

                                               

ನೀಳಾದೇವಿ

ನೀಳಾದೇವಿ ಯವರು ೧೯೩೨ ಆಗಸ್ಟ್ ೨೨ರಂದು ಮೈಸೂರಿನಲ್ಲಿ ಜನಿಸಿದರು, ಇವರ ಪ್ರಥಮ ಕತೆ "ಅಪ್ಪಾ, ನಾನೂ ಬರ್ತೀನಪ್ಪಾ" ತಾಯಿನಾಡು ಪತ್ರಿಕೆ ಯಲ್ಲಿ ಪ್ರಕಟವಾದಾಗ ಇವರಿಗೆ ೧೫ ವರ್ಷ. ಕಾದಂಬರಿ, ಕಿರುಗತೆ, ಲಘುಹಾಸ್ಯ, ಶಿಶು ಸಾಹಿತ್ಯ, ನಾಟಕ, ಪ್ರವಾಸ ಕಥನ, ಅನುವಾದಗಳಲ್ಲಿ ಸಮರ್ಥವಾಗಿ ಕೈಯಾಡಿಸಿದ ಹಿರಿಯ ಕಿರ ...

                                               

ನೇಮಿಚಂದ್ರ

ಈತ ಲೀಲಾವತಿ ಕಾವ್ಯದಲ್ಲಿ ಸೌಂದತ್ತಿಯ ರಟ್ಟವಂಶದ ಒಂದನೆಯ ಲಕ್ಷ್ಮಣರಾಜ ಸು. ೧೧೭೦ರ ಮತ್ತು ಚಂದಲದೇವಿಯರನ್ನು ಕೊಂಡಾಡಿರುವುದರಿಂದ ಕವಿ ಆ ಕಾಲದವನೇ ಅಗಿರಬೇಕು. ಅಲ್ಲದೆ ಈತ ತನ್ನ ಇನ್ನೊಂದು ಕೃತಿಯಾದ ನೇಮಿನಾಥ ಪುರಾಣದಲ್ಲಿ ವೀರಬಲ್ಲಾಳನ ೧೧೭೩-೧೨೨೦ ಮಂತ್ರಿ ಸಜ್ಜೆವಳ್ಳ ಪದ್ಮನಾಭನನ್ನು ಹೊಗಳಿ ಈತನ ಆಶ್ ...

                                               

ನೇಮಿಚಂದ್ರ (ಲೇಖಕಿ)

ಶ್ರೀಮತಿ ನೇಮಿಚಂದ್ರ ಅವರು ಚಿತ್ರದುರ್ಗದಲ್ಲಿ ಜುಲೈ ೧೬, ೧೯೫೯ರಂದು ಜನಿಸಿದರು. ತಂದೆ ಪ್ರೊ. ಜಿ. ಗುಂಡಣ್ಣ, ತಾಯಿ ತಿಮ್ಮಕ್ಕ. ಪ್ರಾರಂಭಿಕ ಶಿಕ್ಷಣ ತುಮಕೂರು, ಮೈಸೂರು. ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್‌ನಿಂದ ಬಿ.ಇ. ಪದವಿ. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ ...

                                               

ಪಂಪ - ಒಂದು ಚಿಂತನೆ

ಕನ್ನಡದ ಆದಿಕವಿ ಪಂಪ ಈಗ್ಗೆ ಸುಮಾರು ಒಂದು ಸಾವಿರದ ಎಪ್ಪತ್ತು ವರ್ಷಗಳಷ್ಟು ಹಿಂದೆ ತನ್ನ ಕಾವ್ಯಗಳನ್ನು ಹೇಳಿದ. ಅವನನ್ನು ಎಲ್ಲ ಕಾಲದ ಕವಿಗಳು ಹೊಗಳಿದರು, ಚಂಪೂ ಕವಿಗಳಂತೂ ಅವನನ್ನು ಅನುಕರಿಸಲು ಹೆಣಗಿದರು. ಈಗಲೂ ಪಂಪನ ಕಾವ್ಯಗಳ ಹಿರಿಮೆಯ ಬಗ್ಗೆ ಆಧುನಿಕ ವಿಮರ್ಶಕರೂ ಮುಕ್ತಕಂಠದ ಮಾತುಗಳನ್ನಾಡುತ್ತಿದ ...

                                               

ಪಾ. ವೆಂ. ಆಚಾರ್ಯ

೧೯೧೫ ಫೆಬ್ರುವರಿ ೬ ರಂದು ಉಡುಪಿಯಲ್ಲಿ ಜನಿಸಿದರು. ಉಡುಪಿಯಲ್ಲಿ ಎಸ್.ಎಸ್.ಸಿ ವರೆಗೆ ಶಿಕ್ಷಣ ಪಡೆದರು. ಆದರೆ ಹಣದ ಅಭಾವದಿಂದಾಗಿ ಶಿಕ್ಷಣ ಮುಂದುವರೆಸಲಾಗಲಿಲ್ಲ. ಉಡುಪಿಯಲ್ಲಿಯೆ ಶಾಲಾ ಮಾಸ್ತರಿಕೆ, ಮುದ್ರಣ ಕೆಲಸ, ಅಂಗಡಿಯಲ್ಲಿ ಲೆಕ್ಕ ಇಡುವದು ಮೊದಲಾದ ಕೆಲಸಗಳನ್ನು ಮಾಡಿದರು. ಆಗಿನ ಪ್ರಸಿದ್ಧ ಪತ್ರಿಕ ...

                                               

ಪಾರ್ವತಿ ಜಿ.ಐತಾಳ

ಪಾರ್ವತಿ ಗಂಗಾಧರ ಐತಾಳ ಇವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎನ್ನುವ ಹಳ್ಳಿಯಲ್ಲಿ ೧೯೫೭ ಜುಲೈ ೨೩ರಂದು ಜನಿಸಿದರು. ೧೯೮೧ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ೨೦೧೨ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು.

                                               

ಪಿ.ಆರ್.ರಾಮಯ್ಯ

"ಸುಖ ದುಃಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ| ತತೋ ಯುದ್ಧಾಯ ಯುಜಸ್ವ ನೈವಮ್ ಪಪಮವಾಪ್ಸ್ಯಸಿ ||ಗೀತಾ||" - ಇದು ‘ತಾಯಿನಾಡು’ ಪತ್ರಿಕೆಯ ನಾಮ ಲಾಂಛನದಡಿ ಮುಖಪುಟದಲ್ಲಿ ಮುದ್ರಿತವಾಗುತ್ತಿದ್ದ ಶ್ಲೋಕ ವಾಕ್ಯ; ಇದೇ ಕೀರ್ತಿಶೇಷ ಪಿ.ಆರ್.ರಾಮಯ್ಯ ನವರನ್ನು ಎಂತಹ ಸತ್ವಪರೀಕ್ಷೆ-ಸಂಕಷ್ಟ-ಸವಾಲುಗಳ ಎದುರಿನಲ್ಲ ...

                                               

ಪಿ.ಶೇಷಪ್ಪ

ತಿ.ತಾ.ಶರ್ಮ ಸಂಪಾದಕತ್ವದ ವಿಶ್ವ ಕರ್ನಾಟಕ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ ಪಿ.ಶೇಷಪ್ಪ, ಎಂ.ಎಲ್.ಶ್ರೀಕಂಠಯ್ಯನವರ ಮಾತೃಭೂಮಿ ಪತ್ರಿಕೆಯ ವರದಿಗಾರರೂ ಆಗಿದ್ದರು. ನಂತರ ಅವರು ಸ್ವಾತಂತ್ರ್ಯೋದಯ ಎಂಬ ಪತ್ರಿಕೆಯನ್ನು ಸ್ವತಃ ಆರಂಭಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅವರು ಪ್ರತ್ಯಕ್ಷ ಭಾಗ ...

                                               

ಪಿ.ಸುಬ್ರಹ್ಮಣ್ಯ ಆಚಾರ್ಯ

‘ ರಸಿಕ ಪುತ್ತಿಗೆ ’ ಎಂದೇ ಖ್ಯಾತರಾದ ಪಿ.ಸುಬ್ರಹ್ಮಣ್ಯ ಆಚಾರ್ಯ ರು ೧೯೩೨ ಜೂನ ೧೫ರಂದು ಕಾರ್ಕಳ ತಾಲೂಕಿನ ಪುತ್ತಿಗೆ ಯಲ್ಲಿ ಜನಿಸಿದರು. ಇವರ ತಾಯಿ ನಾಗವೇಣಿ ಅಮ್ಮ; ತಂದೆ ವೆಂಕಟರಮಣಾಚಾರ್ಯ.

                                               

ಪುಂಡಲೀಕ ಹಾಲಂಬಿ

ಪುಂಡಲೀಕ ಹಾಲಂಬಿ ಕನ್ನಡ ಸಾಹಿತ್ಯ ಪರಿಷತ್ತಿನ ೨೪ನೆ ಅಧ್ಯಕ್ಷರು. ಶತಮಾನದ ಹೊಸ್ತಿಲಲ್ಲಿರುವ, ಕನ್ನಡಿಗರ ಬಹುದೊಡ್ದ ಸಂಸ್ಥೆಯಾದ ಕನ್ನಡ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಅವರು ಚುನಾಯಿತರಾಗಿದ್ದಾರೆ. ಇವರು ಪರಿಷತ್ತಿನ ೨೪ನೆಯ ಅಧ್ಯಕ್ಷರು. ಉತ್ತಮ ವಾಗ್ಮಿಗಳು, ಪ್ರಬುದ್ಧ ಸಂಘಟಕರು, ಕ ...

                                               

ಪೊನ್ನ

ಪೊನ್ನ ನು ಹಳೆಗನ್ನಡದ ಮೂವರು ರತ್ನತ್ರಯರಲ್ಲಿ ಒಬ್ಬನು. ಇತರ ಇಬ್ಬರೆಂದರೆ ಪಂಪ ಹಾಗು ರನ್ನ. ಈತನ ಕಾಲ ಕ್ರಿ.ಶ.೯೫೦. ರಾಷ್ಟ್ರಕೂಟ ಚಕ್ರವರ್ತಿ ೩ನೆಯ ಕೃಷ್ಣನ ಆಸ್ಥಾನದಲ್ಲಿ೯೩೯-೯೬೫ ಪೊನ್ನನು ಆಸ್ಥಾನ ಕವಿಯಾಗಿದ್ದನು. ಕನ್ನಡ ಹಾಗು ಸಂಸ್ಕೃತ ಗಳಲ್ಲಿ ಇವನಿಗೆ ಅಪಾರ ಪಾಂಡಿತ್ಯವಿದ್ದುದರಿಂದ ಈತನಿಗೆ ‘ ಉ ...

                                               

ಪ್ರಹ್ಲಾದ ಅಗಸನಕಟ್ಟೆ

ಪ್ರಹ್ಲಾದ ಅಗಸನಕಟ್ಟೆ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ವಿಮರ್ಶಕರು.ಇವರು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

                                               

ಫ. ಗು. ಹಳಕಟ್ಟಿ

ಫ.ಗು.ಹಳಕಟ್ಟಿಯವರು 2ನೇ ಜೂಲೈ 1880ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರ ...

                                               

ಫ.ಗು.ಹಳಕಟ್ಟಿ

ಫ.ಗು.ಹಳಕಟ್ಟಿಯವರು 2ನೇ ಜೂಲೈ 1880ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ. ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರ ...

                                               

ಬಂಜಗೆರೆ ಜಯಪ್ರಕಾಶ

ಬಂಜಗೆರೆ ಜಯಪ್ರಕಾಶ ಇವರು ೧೯೬೫ ಜೂನ್ ೧೭ರಂದು ಜನಿಸಿದರು. ೧೯೮೫ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಪತ್ರಿಕೋದ್ಯಮ ಪದವಿಯನ್ನು ಹಾಗು ೧೯೮೭ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯೂ. ಪದವಿ ಪಡೆದರು. ೧೯೯೯ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಪದವಿ ಪಡೆದ ...

                                               

ಬಂಡಾಯ ಕಾವ್ಯ

ಬಂಡಾಯ ಕಾವ್ಯಕ್ಕೆ ಉದಾಹರಣೆ ಯಾಗಿ ಕೆಳಗೆ ಒಂದೆರಡು ಕವನಗಳನ್ನು ಕೊಟ್ಟಿದೆ ರಚನೆ ಚಂ ೨೦೦೦ ಮೇ ೧೧ಕ್ಕೆ ಭಾರತದ ಜನಸಂಖ್ಯೆ ೧೦೦ಕೋಟಿತಲುಪಿದೆ ವಿಶ್ವದಲ್ಲಿ ಭಾರತಕ್ಕೆ ಭ್ರಷ್ಟತೆಗೆ ಮೊದಲ ಸ್ಥಾನವೆಂದು ಪತ್ರಿಕಾವರದಿ ಬಂದಿದೆ ಉದಾ ಏಸುವಿಗೆ ಎರಡು ಸಾವಿರ ವರ್ಷ, ಕೇವಲ ಮೂವತ್ಮೂರು ಕೋಟಿ ಬೇಂದ್ರೆ ಕಣ್ಣೀರಿಟ ...

                                               

ಬರಗೂರು ರಾಮಚಂದ್ರಪ್ಪ

ಬರಗೂರು ರಾಮಚಂದ್ರಪ್ಪ ನವರು ಬೆಂಗಳೂರು ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕನ್ನಡನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬಂಡ ...

                                               

ಬಸವರಾಜ ಕಟ್ಟೀಮನಿ

ಬಸವರಾಜ ಕಟ್ಟೀಮನಿ ಯವರು ೧೯೧೯ ಅಕ್ಟೋಬರ ೫ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲಾಮರಡಿ ಎನ್ನುವ ಹಳ್ಳಿಯಲ್ಲಿ ಜನಿಸಿದರು. ತಾಯಿ ಬಾಳವ್ವ; ತಂದೆ ಅಪ್ಪಣ್ಣ. ತಂದೆ ಮೊದಲಲ್ಲಿ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಿಪಾಯಿಯಾಗಿದ್ದವರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರಾಜೀನಾಮೆ ಕೊಟ್ಟು ಹೊರಬಂದರು. ಕ ...

                                               

ಬಸವರಾಜ ನಾಯ್ಕರ

ಬಸವರಾಜ ನಾಯ್ಕರ ಇವರು ೧೯೪೯ ಅಗಸ್ಟ ೧ರಂದು ಗದಗಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಡಿ.ಲಿಟ್. ಪದವಿ ಸಂಪಾದಿಸಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ. ಇವರು ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ್ದಾರೆ.

                                               

ಬಸವರಾಜ ಸಾದರ

ಬಸವರಾಜ ಸಾದರ ಇವರು ೧೯೫೫ ಜುಲೈ ೨೦ರಂದು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು.ಕನ್ನಡದಲ್ಲಿ ಎಮ್.ಏ. ಹಾಗೂ ಪಿ.ಎಚ್.ಡಿ. ಮಾಡಿದ ಇವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಅನೇಕ ವಿಮರ್ಶನಾತ್ಮಕ ಹಾಗು ವ್ಯಾಖ್ಯಾನ ಪ್ರಕಾರದ ಬರವಣಿಗೆಗಳನ್ನು ಬರೆದಿರುವರು.

                                               

ಬಾನಂದೂರು ಕೆಂಪಯ್ಯ

ಬಾನಂದೂರು ಕೆಂಪಯ್ಯ ೧೯೫೧ ಜೂನ ೧೪ರಂದು ರಾಮನಗರ ತಾಲೂಕಿನ ಬಾನಂದೂರಿನಲ್ಲಿ ಜನಿಸಿದರು. ಇವರ ತಾಯಿ ಹುಚ್ಚಮ್ಮ ಜನಪದ ಗಾಯಕಿ ; ತಂದೆ ವೆಂಕಟಯ್ಯ ಜನಪದ ಕಲೆಗಾರರು. ಈ ದಂಪತಿಗಳ ನಾಲ್ಕು ಗಂಡು, ನಾಲ್ಕು ಹೆಣ್ಣು ಮಕ್ಕಳಲ್ಲಿ ಕೆಂಪಯ್ಯನವರೆ ಕಿರಿಯರು. ಇವರ ಅಣ್ಣ ಆರು ನಗಾರಿ ಬಾರಿಸುವ ಪರಿಣತಿ ಪಡೆದು ನಗಾರಿ ...

                                               

ಬಾಳಾಸಾಹೇಬ ಲೋಕಾಪುರ

‘ಉಧೊ! ಉಧೊ!’, ‘ಬಿಸಿಲುಪುರ’ ಮತ್ತು ‘ಹುತ್ತ’ ಕಾದಂಬರಿಗಳ ಮೂಲಕ ಚಿರಪರಿಚಿತರಾಗಿರುವ ಬಾಳಾಸಾಹೇಬ ಲೋಕಾಪುರ ಅವರ ಇನ್ನೊಂದು ಕೃತಿ ‘ನೀಲಗಂಗಾ’. ಉತ್ತರ ಕರ್ನಾಟಕದ ಅಪ್ಪಟ ಗ್ರಾಮ್ಯ ಭಾಷಾ ಶ್ರೀಮಂತಿಕೆಯ ಪ್ರೇಮಗಾಥೆಯಿರುವ ಈ ಕೃತಿ ಹದಿ ಹರೆಯದ ಮನಸ್ಸುಗಳ ಭಾವನೆಯ ಪ್ರವಾಹದ ವೇಗವೂ, ಓದಿನ ಸುಖ ನೀಡುವ ಉನ್ಮ ...

                                               

ಬಿ. ಪುಟ್ಟಸ್ವಾಮಯ್ಯ

ಬಿ.ಪುಟ್ಟಸ್ವಾಮಯ್ಯ ನವರು (ಮೇ ೨೪, ೧೮೯೭ - ಜನವರಿ ೨೫, ೧೯೮೪ ಕನ್ನಡ ನಾಡಿನ ಬಹುಮುಖ ಪ್ರತಿಭೆ. ಪತ್ರಿಕೋದ್ಯಮಿಯಾಗಿ, ನಾಟಕಕಾರರಾಗಿ ಹಾಗೂ ಕಾದಂಬರಿಕಾರರಾಗಿ ಅವರು ನೀಡಿದ ಕೊಡುಗೆ ಮಹತ್ವಪೂರ್ಣವೆನಿಸಿವೆ.

                                               

ಬಿ.ಎಚ್.ಶ್ರೀಧರ

ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗು ಬಹುಶ್ರುತ ವಿದ್ವಾಂಸ ಪ್ರೊ. ಬಿ.ಎಚ್.ಶ್ರೀಧರರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ೨೪ ಏಪ್ರಿಲ್ ೧೯೧೮ ರಂದು ಜನಿಸಿದರು.

                                               

ಬಿ.ಎಲ್.ವೇಣು

ಬಿ.ಎಲ್.ವೇಣು ಇವರು ೧೯೪೯ ಸಪ್ಟಂಬರ ೨೭ರಂದು ಜನಿಸಿದರು. ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್‌ ಪದವಿಯನ್ನು ೨೦೧೩ರಲ್ಲಿ ನೀಡಿದೆ.

                                               

ಬಿ.ಎಲ್‌ರೈಸ್‌

ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬೆಂಜಮಿನ್ ಲೂಯಿ. ರೈಸ್‌ಅವರದು. ಅವರು ನಮ್ಮ ನಾಡಿನ ಹಳೆಯ ಮೈಸೂರು ಪ್ರಾಂತ್ಯದ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ಶಾಸನಗಳ ಸಂಶೋಧನೆಯನ್ನು ಮೂಲಾಧಾರವಾಗಿಸಿಕೊಂಡು ಸಾಹಿತ್ಯ ಮತ್ತು ಇತಿಹಾಸಗಳಿಗೆ ನಿಖರರೂಪ ನೀಡಿದವರಲ್ಲಿ ಇವರು ...

                                               

ಬಿ.ಟಿ.ಲಲಿತಾ ನಾಯಕ್

ಲಲಿತಾ ಬಿ.ಟಿ.ನಾಯಕ್ - ಕನ್ನಡದ ಮಹಿಳಾ ಬಂಡಾಯ ಸಾಹಿತಿಗಳಲ್ಲಿ ಪ್ರಮುಖರು. ಲಲಿತಾ ನಾಯಕ್ ರ ಕಥೆ, ಕಾದಂಬರಿ, ನಾಟಕಗಳೆಲ್ಲದರಲ್ಲಿ ಜಾತೀಯತೆ, ಮಹಿಳೆಯರ ಶೋಷಣೆ, ಬಂಡಾಯದ ದನಿ, ದಲಿತರ ನೋವುಗಳಿವೆ. ಸಂಘಟಕರಾಗಿಯು ಇವರು ಗಮನ ಸೆಳೆದಿದ್ದಾರೆ. ಸಾಮಾಜಿಕ ಕಳಕಳಿ, ಕಾಳಜಿಯನ್ನು ಇವರು ಹೊಂದಿದ್ದಾರೆ

Free and no ads
no need to download or install

Pino - logical board game which is based on tactics and strategy. In general this is a remix of chess, checkers and corners. The game develops imagination, concentration, teaches how to solve tasks, plan their own actions and of course to think logically. It does not matter how much pieces you have, the main thing is how they are placement!

online intellectual game →